ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ(Suvendu Adhikari) ಅವರು ಕೋಲ್ಕತ್ತಾದ ಶತಮಾನಗಳಷ್ಟು ಹಳೆಯದಾದ ಕಾಳಿಘಾಟ್ ದೇವಾಲಯದಲ್ಲಿ(Kalighat Temple) ಸಾಂಪ್ರದಾಯಿಕ ಮೀನಿನ ಭೋಗ್ (ಮೀನಿನ ಪ್ರಸಾದ) ಸೇವಿಸುವ ಮೂಲಕ ಇತ್ತೀಚೆಗೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸಸ್ಯಾಹಾರ-ಮಾಂಸಾಹಾರ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.
ಶಾಕ್ತ ಹಿಂದೂಗಳಿಗೆ ಪವಿತ್ರವಾದ ‘ಕೌಶಿಕಿ ಅಮಾವಾಸ್ಯೆ’ಯ ಸಂದರ್ಭದಲ್ಲಿ ಕಾಳಿಘಾಟ್ ದೇವಾಲಯಕ್ಕೆ ಭೇಟಿ ನೀಡಿದ ಸುವೇಂದು ಅಧಿಕಾರಿ ಅವರು, ನೆಲದ ಮೇಲೆ ಕುಳಿತು ದೇವಿಯ ಪ್ರಸಾದ ಸ್ವೀಕರಿಸಿದರು.
ಈ ಭೋಗ್ನಲ್ಲಿ ಕಾಳಿಘಾಟ್ನ ಸಾಂಪ್ರದಾಯಿಕ ದೊಡ್ಡ ಮೀನಿನ ತಲೆ, ಹುರಿದ ಮೀನು ಹಾಗೂ ಬಸಂತಿ ಪುಲಾವ್ (ಹಳದಿ ಅನ್ನ) ಇತ್ತು. ಕಾಳಿ ದೇವಿಗೆ ಮೀನು ಮತ್ತು ಬಲಿ ನೀಡಿದ ಮೇಕೆ ಮಾಂಸವನ್ನು ನೈವೇದ್ಯವಾಗಿ ಅರ್ಪಿಸಿ, ಭಕ್ತರಿಗೆ ಪ್ರಸಾದವಾಗಿ ವಿತರಿಸುವುದು ಇಲ್ಲಿನ ಶತಮಾನಗಳ ಸಂಪ್ರದಾಯವಾಗಿದೆ.
ಮಧ್ಯಪ್ರದೇಶದ ಬಾಗೇಶ್ವರ ಧಾಮದ ಮುಖ್ಯ ಅರ್ಚಕ ಧೀರೇಂದ್ರ ಕೃಷ್ಣ ಶಾಸ್ತ್ರಿ (Bageshwar Baba), ದುರ್ಗಾಪೂಜೆ ಸಂದರ್ಭದಲ್ಲಿ ಮಾಂಸಾಹಾರ ಸೇವಿಸುವುದನ್ನು ತ್ಯಜಿಸಬೇಕು ಎಂದು ಬಂಗಾಳಿ ಹಿಂದೂಗಳಿಗೆ ಕರೆ ನೀಡಿದ್ದರು. ಅಷ್ಟೇ ಅಲ್ಲದೆ, ಪೂಜೆಯ ವೇಳೆ ಮಾಂಸಾಹಾರ ತಿನ್ನುವವರನ್ನು ಪಾಖಂಡಿ (ಕಪಟಿಗಳು) ಎಂದೂ ಟೀಕಿಸಿದ್ದರು. ಇದು ದುರ್ಗಾಪೂಜೆಯಲ್ಲಿ ಮಾಂಸಾಹಾರ ಸೇವಿಸುವ ಹಾಗೂ ದೇವರಿಗೆ ಮಾಂಸದ ಭೋಗ್ ಅರ್ಪಿಸುವ ಸಂಪ್ರದಾಯ ಹೊಂದಿರುವ ಬಂಗಾಳಿ ಸಮಾಜದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
Putting all controversy at rest. CM Suvendu Adhikari is currently eating Kalighat Kali Maa’s Fish Bhog. Today is the final Amavasya and it’s a special day for us pic.twitter.com/rLIqwcWg3u
— Sudhanidhi Bandyopadhyay (@SudhanidhiB) September 10, 2026
ಈ ವಿವಾದದ ನಡುವೆ ಬಿಜೆಪಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು, “ಬಂಗಾಳಿಗಳು ಏನು ತಿನ್ನಬೇಕು ಎಂಬುದನ್ನು ಯಾವುದೇ ಬಾಬಾಗಳು ನಿರ್ಧರಿಸಲು ಸಾಧ್ಯವಿಲ್ಲ. ಬಂಗಾಳಿಗಳು ಮೀನು-ಮಾಂಸ ತಿನ್ನುತ್ತಾರೆ, ಸ್ವಾಮಿ ವಿವೇಕಾನಂದರೇ ಇದನ್ನು ಸಮರ್ಥಿಸಿದ್ದಾರೆ” ಎಂದು ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ನ್ಯೂಕ್ಲಿಯರ್ ಹೊಂದುವಲ್ಲಿ ಪಾಕ್ ಹಿಂದಿಕ್ಕಿದ ಭಾರತ
ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಪ್ರತಿಕ್ರಿಯಿಸಿ, “ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಕಾಳಿಘಾಟ್ನಲ್ಲಿ ಸಾಂಪ್ರದಾಯಿಕ ಮೀನಿನ ಭೋಗ್ ಸ್ವೀಕರಿಸುವ ಮೂಲಕ ಬಂಗಾಳದ ನಂಬಿಕೆ, ಪರಂಪರೆ ಮತ್ತು ಜೀವನಶೈಲಿಗೆ ಗೌರವ ನೀಡಿದ್ದಾರೆ. ಈ ಮೂಲಕ ಮಾಂಸಾಹಾರದ ಕುರಿತ ಅನಗತ್ಯ ವಿವಾದಕ್ಕೆ ಇಲ್ಲಿಗೇ ತೆರೆ ಬೀಳಲಿ” ಎಂದು ಹೇಳಿದ್ದಾರೆ.


