ಹಾಸನ: ಕರ್ತವ್ಯದಲ್ಲಿದ್ದಾಗಲೇ ಹಾಸನ (Hassan) ಜಿಲ್ಲೆಯ ಯೋಧರೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿರುವ ಘಟನೆ ಅಸ್ಸಾಂನಲ್ಲಿ (Assam) ನಡೆದಿದೆ.
ಆಲೂರು (Alur) ತಾಲೂಕಿನ, ಹಾಂಜಿಹಳ್ಳಿ ಗ್ರಾಮದ ಮಧು. ಹೆಚ್.ಹೆಚ್. (34) ನಿಧನರಾದ ಯೋಧ. ಮಧು ಅವರು ಕಳೆದ 15 ವರ್ಷಗಳಿಂದ ಬಿಎಸ್ಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ವಿದ್ಯುತ್ ತಂತಿ ತಗುಲಿ ಉರುಳಿಬಿದ್ದ ಗಣೇಶ ಮೂರ್ತಿ – ಯುವಕ ಸ್ಥಳದಲ್ಲೇ ಸಾವು
ಒಂದುವರೆ ತಿಂಗಳ ಹಿಂದಷ್ಟೇ ಅವರ ಪತ್ನಿಗೆ ಮಗು ಜನಿಸಿತ್ತು. ಮಧು ಅವರ ನಿವೃತ್ತಿಗೆ ಮೂರು ತಿಂಗಳಷ್ಟೇ ಬಾಕಿ ಇತ್ತು. ಇನ್ನೂ ಕುಟುಂಬಸ್ಥರ ಜೊತೆ ಫೋನ್ನಲ್ಲಿ ಮಾತನಾಡಿದ್ದ ಅವರು ಅಸ್ಸಾಂನಲ್ಲಿ ಕರ್ತವ್ಯದಲ್ಲಿದ್ದ ವೇಳೆ ದಿಢೀರ್ ಅನಾರೋಗ್ಯದಿಂದ ಕ್ಯಾಂಪ್ನಲ್ಲಿ ನಿಧನರಾಗಿದ್ದಾರೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಂಜಿಹಳ್ಳಿ ಗ್ರಾಮದಲ್ಲಿ ಮೃತ ಯೋಧನ ಅಂತ್ಯಕ್ರಿಯೆ ನೆರವೇರಲಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮುಂದುವರೆದ ವಲಸಿಗರ ದರ್ಪ – ಪೌರಕಾರ್ಮಿಕನ ಮೇಲೆ ಕೇರಳದ ಯುವತಿಯಿಂದ ಹಲ್ಲೆ

