ಬೆಂಗಳೂರು: ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಇದರ ನಡುವೆ ಬೆಂಗಳೂರಿನಲ್ಲಿ (Bengaluru) ಈರುಳ್ಳಿ (Onion) ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಎಲ್ಲೆಡೆ ಈರುಳ್ಳಿ ಬೆಲೆ 65-75 ರೂ.ಗೆ ಏರಿದೆ. ಇದರ ನಡುವೆ ಕೇಂದ್ರ ಸರ್ಕಾರ (Central Govt) ಗುಡ್ನ್ಯೂಸ್ ನೀಡಿದೆ. ನಾಫೆಡ್ನಿಂದ ಬೆಂಗಳೂರಿಗೆ ಈರುಳ್ಳಿ ಬಂದಿದ್ದು, ಅಗ್ಗದ ದರದಲ್ಲಿ ಮಾರಾಟವಾಗುತ್ತಿದೆ. ಇದನ್ನೂ ಓದಿ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಘಟನೆಗೆ 25 ವರ್ಷ – ಇದೇ ದಿನ ಅಮೆರಿಕದ WTC ಮೇಲೆ ನಡೆದಿತ್ತು ಭಯೋತ್ಪಾದಕ ದಾಳಿ
ಕೆ.ಜಿಗೆ 35 ರೂ.ಯಂತೆ ಮಾರಾಟವಾಗುತ್ತಿದ್ದು, ಈರುಳ್ಳಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಬೆಂಗಳೂರಿನ ನಾನಾ ಭಾಗದಲ್ಲಿ ನಾಫೆಡ್ ವಾಹನದ ಮೂಲಕ ಜನರಿಗೆ ಅಗ್ಗದ ದರದಲ್ಲಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ.
ಏನಿದು ನಾಫೆಡ್?
ನಾಫೆಡ್ (NAFED – National Agricultural Cooperative Marketing Federation of India) ಎಂದರೆ ಭಾರತದಲ್ಲಿ ರೈತರ ಒಳಿತಿಗಾಗಿ ಕೆಲಸ ಮಾಡುವ ರೈತರ ಸಹಕಾರಿ ಸಂಸ್ಥೆ. ಇದು ದೇಶದ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗುವಂತೆ ನೋಡಿಕೊಳ್ಳಲು ಮತ್ತು ಗ್ರಾಹಕರಿಗೆ ನ್ಯಾಯಯುತ ಬೆಲೆಯಲ್ಲಿ ಆಹಾರ ಪದಾರ್ಥಗಳು ಸಿಗುವಂತೆ ಮಾಡಲು ಸರ್ಕಾರಿ ಸ್ವಾಮ್ಯದಡಿಯಲ್ಲಿ ಕೆಲಸ ಮಾಡುವ ಒಂದು ದೊಡ್ಡ ವ್ಯವಸ್ಥೆಯಾಗಿದೆ. ಇದನ್ನೂ ಓದಿ: Ganesh Chaturthi 2026 – ಗಣೇಶ ದರ್ಶನದಿಂದ ಸಿಗೋ ಶುಭ ಫಲಗಳು
ಇದರ ಪ್ರಮುಖ ಕೆಲಸಗಳು:
ಬೆಂಬಲ ಬೆಲೆ ಖರೀದಿ:
ಮಾರುಕಟ್ಟೆಯಲ್ಲಿ ಈರುಳ್ಳಿ, ಆಲೂಗಡ್ಡೆ, ಧಾನ್ಯಗಳು ಅಥವಾ ಎಣ್ಣೆಕಾಳುಗಳ ಬೆಲೆ ತೀರಾ ಕುಸಿದು ರೈತರಿಗೆ ನಷ್ಟವಾದಾಗ, ಸರ್ಕಾರಿ ಬೆಲೆಯಲ್ಲಿ ಅವುಗಳನ್ನು ನೇರವಾಗಿ ರೈತರಿಂದ ನಾಫೆಡ್ ಖರೀದಿಸುತ್ತದೆ.
ಬಫರ್ ಸ್ಟಾಕ್ ನಿರ್ವಹಣೆ:
ಈರುಳ್ಳಿಯಂತಹ ಅಗತ್ಯ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ವಿಪರೀತ ಹೆಚ್ಚಾದಾಗ, ತಮ್ಮಲ್ಲಿ ಸಂಗ್ರಹಿಸಿಟ್ಟಿರುವ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಬೆಲೆ ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ.ಇದನ್ನೂ ಓದಿ: ಕಾವೇರಿ ಕೊಳ್ಳದ ಜನರಿಗೆ ಮತ್ತೆ ಮತ್ತೆ ಮೋಸ? – ತಮಿಳುನಾಡಿಗೆ 8000ಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿವು

