ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ, ಋತು: ವರ್ಷ
ಮಾಸ: ಶ್ರಾವಣ, ಪಕ್ಷ: ಕೃಷ್ಣ
ತಿಥಿ: ಅಮಾವಾಸ್ಯೆ, ನಕ್ಷತ್ರ: ಪೂರ್ವಾಫಾಲ್ಗುಣಿ
ರಾಹುಕಾಲ: 10:47 – 12:19
ಗುಳಿಕಕಾಲ: 7:43 – 9:15
ಯಮಗಂಡಕಾಲ: 3:23 – 4:55
ಮೇಷ: ವಿದ್ಯಾರ್ಥಿಗಳ ಫಲಿತಾಂಶಗಳಲ್ಲಿ ಅಲ್ಪ ಪ್ರಗತಿ, ನಿಂತಿದ್ದ ಕೆಲಸಗಳು ಪರಿಪೂರ್ಣ, ಶುಭ ಕಾರ್ಯಗಳ ಚಿಂತನೆ.
ವೃಷಭ: ಆದಾಯದಲ್ಲಿ ಇಳಿಕೆ, ವಿದ್ಯಾರ್ಥಿಗಳಿಗೆ ಯಶಸ್ಸು, ಮಹಿಳೆಯರ ಆರೋಗ್ಯದಲ್ಲಿ ವ್ಯತ್ಯಾಸ.
ಮಿಥುನ: ಬಂಧುಗಳು ಸಹಾಯ ಬೇಡಿ ಬರುವರು, ವ್ಯವಹಾರದಲ್ಲಿನ ಅನಿರೀಕ್ಷಿತ ತಿರುವುಗಳಿಂದ ಹಿನ್ನಡೆ, ಆಸ್ತಿ ವ್ಯವಹಾರಗಳಲ್ಲಿ ಲಾಭ.
ಕಟಕ: ವಿದ್ಯಾರ್ಥಿಗಳು ಶ್ರಮವಹಿಸಿ, ಸಂಗಾತಿಯ ಕಡೆಯವರಿಂದ ಅನುಕೂಲ, ವಿದೇಶಿ ವ್ಯವಹಾರದಲ್ಲಿ ಲಾಭ.
ಸಿಂಹ: ನಂಬಿಕಸ್ತರಿಂದ ತೊಂದರೆ, ಆಲೋಚನೆಗಳು ವ್ಯಾವಹಾರಿಕವಾಗಿರುತ್ತದೆ, ಆದಾಯದಲ್ಲಿ ಸರಾಸರಿ.
ಕನ್ಯಾ: ಅಕೌಂಟ್ಸ್ ಉದ್ಯೋಗಸ್ತರಿಗೆ ಶುಭ, ವೃತ್ತಿಯಲ್ಲಿ ಒತ್ತಡ, ಮಾತಿನ ನಿಂದನೆಗೆ ಕಿವಿಗೊಡಬೇಡಿ.
ತುಲಾ: ಭಾಷಣಕಾರರಿಗೆ ಅವಕಾಶಗಳು ಲಭ್ಯ, ಅನೇಕ ಅವಕಾಶಗಳು ಸಿಗುತ್ತವೆ, ಕಾನೂನು ವಿಚಾರಗಳಲ್ಲಿ ಹಿನ್ನಡೆ.
ವೃಶ್ಚಿಕ: ಪಾರಂಪರಿಕ ವಿದ್ಯೆ ಕಲಿಕಾಸಕ್ತರಿಗೆ ಶುಭ, ಮನಸ್ಸಿನ ಗೊಂದಲಗಳು ತಗ್ಗಲಿದೆ, ಸಂಗಾತಿಗಾಗಿ ಹಣವ್ಯಯ.
ಧನಸ್ಸು: ಭೂಮಿ ಕೊಳ್ಳುವ ಸಾಧ್ಯತೆ, ರಿಸರ್ಚ್ ಮಾಡುವವರಿಗೆ ಅನುಕೂಲ, ಧನಾಗಮನದಲ್ಲಿ ಅಡೆತಡೆ.
ಮಕರ: ಶತ್ರುಗಳನ್ನು ನಿಗ್ರಹಿಸುವಿರಿ, ಆಸ್ತಿ ಮಾರಾಟಗಾರರಿಗೆ ತೊಂದರೆ, ವೃತ್ತಿ ಸಂಬಂಧಿ ಪರೀಕ್ಷೆಯಲ್ಲಿ ಶುಭ.
ಕುಂಭ: ಕೃಷಿ ಸಂಶೋಧಕರಿಗೆ ಅವಕಾಶ, ಋಣಬಾಧೆಯಿಂದ ಮುಕ್ತಿ, ಸ್ನೇಹಿತರೊಂದಿಗೆ ಕಲಹ.
ಮೀನ: ಕೆಲಸದಲ್ಲಿ ಆಸಕ್ತಿಯಿರುವುದಿಲ್ಲ, ದಾಂಪತ್ಯದಲ್ಲಿ ಹಿರಿಯರ ಸಹಾಯದಿಂದ ಶುಭ, ಬಂಧುಗಳ ಆಗಮನ.

