– ತಲೆ ಮೇಲೆ ಬಟ್ಟೆ ಹೊತ್ತು ಪ್ರದರ್ಶನ ಮಾಡಿ ಪ್ರತಿಭಟನೆ
ಚಿಕ್ಕಬಳ್ಳಾಪುರ: ಮಡಿವಾಳ ಜನಾಂಗವನ್ನ (Madiwala Community) ಪರಿಶಿಷ್ಠ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರ ನಗರದಲ್ಲಿ ಜಿಲ್ಲಾ ಮಡಿವಾಳರ ಸಂಘ ಹಾಗೂ ಎಸ್‌ಸಿ ಹೋರಾಟ ಸಮಿತಿ ವತಿಯಿಂದ ಬೃಹತ್ ರ‍್ಯಾಲಿ ನಡೆಸಲಾಯಿತು.
ನಗರದ ಅಂಬೇಡ್ಕರ್ ಭವನದಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದವರೆಗೂ ಮಡಿವಾಳ ಸಮುದಾಯದವರು ಬೃಹತ್ ರ‍್ಯಾಲಿ ನಡೆಸುವ ಮೂಲಕ ಆಗ್ರಹಿಸಲಾಯಿತು.
ದೇಶದ 20 ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಾಗಲೇ ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಆದ್ರೆ ರಾಜ್ಯದಲ್ಲಿ ಮಡಿವಾಳರ ಸ್ಥಿತಿಗತಿ ಅಧ್ಯಯನಕ್ಕೆ ಮಾನವ ಶಾಸ್ತ್ರಜ್ಞ ಪ್ರೊ. ಅನ್ನಪೂರ್ಣಮ್ಮ ಅವರನ್ನ ನೇಮಿಸಿದ್ದು ವರದಿ ಪಡೆಯಲಾಗಿದೆ. ವರದಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಲು ಅರ್ಹರು ಎಂಬ ಅಂಶ ಉಲ್ಲೇಖವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಮಡಿವಾಳ ಜನಾಂಗವನ್ನ ಪರಿಶಿಷ್ಟ ಜಾತಿಗೆ ಓಳಪಡಿಸುವಂತೆ ಆಗ್ರಹಿಸಲಾಯಿತು.

