ಬೆಂಗಳೂರು: ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಮತ್ತು ಬಿಜೆಪಿ ಮಧ್ಯೆ ಎದುರಾಗಿದ್ದ ಸಮಾವೇಶ ಸ್ಥಳ ವಿಚಾರ ಇತ್ಯರ್ಥವಾಗಿದೆ. ಕಳೆದ 8 ದಿನಗಳಿಂದ ಬಿಜೆಪಿ ಕೈಗೊಂಡಿರುವ ಬಳ್ಳಾರಿ ಪಾದಯಾತ್ರೆ (Ballari Chalo) ಬುಧವಾರ ಬಳ್ಳಾರಿ ನಗರಕ್ಕೆ ಎಂಟ್ರಿಯಾಗಲಿದೆ.
ಗುರುವಾರ ಬಳ್ಳಾರಿ ನಗರ ಮುನ್ಸಿಪಾಲ್ ಶಾಲೆ ಮೈದಾನದಲ್ಲಿ ಬೃಹತ್ ಸಮಾರೋಪ ಸಮಾರಂಭಕ್ಕೆ ಬಿಜೆಪಿ (BJP) ಪ್ಲ್ಯಾನ್ ಮಾಡಿದೆ. ಅಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಸಮಾವೇಶ ನಡೆಸಲು ಮೈದಾನ ನೀಡುವಂತೆ ಬಿಜೆಪಿ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ ಸೋಮವಾರ ಮನವಿ ಸಲ್ಲಿಸಿದ್ದರು. ಆದರೆ, 2015ರ ಆದೇಶ ಉಲ್ಲೇಖಿಸಿ, ಕಾರ್ಯಕ್ರಮಕ್ಕೆ ಅನುಮತಿ ಕೊಡಲು ಆಗಲ್ಲ. ಸರ್ಕಾರಿ ಕಾಲೇಜು ಮೈದಾನ, ಕಟ್ಟಡಗಳಲ್ಲಿ ಸಂಘ-ಸಂಸ್ಥೆಗಳು, ಖಾಸಗಿಯವರಿಗೆ ಜಾಗ ನೀಡಲು ಆಗಲ್ಲ ಅಂತ ಪಿಯು ಬೋರ್ಡ್ ಆದೇಶಿಸಿತ್ತು. ಇದನ್ನೂ ಓದಿ: ಬರದ ಮಧ್ಯೆ ರಾಜ್ಯಕ್ಕೆ ಕಾವೇರಿ ಸಿಡಿಲು; ಮತ್ತೆ 15 ದಿನ ತಮಿಳುನಾಡಿಗೆ 7.5 ಟಿಎಂಸಿ ನೀರು ಹರಿಸಲು ಸೂಚನೆ

ಈ ಬೆನ್ನಲ್ಲೇ ಬಿಜೆಪಿ ನಾಯಕರು ಸವಾಲೆಸೆದಿದ್ದರು. ನಿಗದಿತ ಸ್ಥಳದಲ್ಲಿ ಗುರುವಾರ ಸಮಾವೇಶ ನಡೆಸಿಯೇ ತೀರುವುದಾಗಿ ಎಚ್ಚರಿಕೆಯೂ ಕೊಟ್ಟಿದ್ದರು. ಈ ಜಗ್ಗಾಟದ ಮಧ್ಯೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ಸಂಜೆ ಹೊತ್ತಿಗೆ ಬಳ್ಳಾರಿ ಜಿಲ್ಲಾಧಿಕಾರಿ ಷರತ್ತುಬದ್ಧ ಅನುಮತಿ ನೀಡಿದ್ದಾರೆ. ಇದನ್ನೂ ಓದಿ: ವಿಜಯ್ ಬಳಿಕ ತ್ರಿಶಾಗೆ ಕಂಗನಾ ಬಲ! – ಚಾರಿತ್ರ್ಯಹರಣದ ವಿರುದ್ಧ ಗುಡುಗಿದ ಸಂಸದೆ
ಇನ್ನು, ಕಾಲಿನ ಶಸ್ತ್ರಚಿಕಿತ್ಸೆಯಿಂದಾಗಿ ಪಾದಯಾತ್ರೆಯಿಂದ ದೂರ ಉಳಿದಿದ್ದ ವಿಪಕ್ಷ ನಾಯಕ ಆರ್. ಅಶೋಕ್, ಬುಧವಾರ ಮತ್ತು ಗುರುವಾರ ಭಾಗಿ ಆಗಲಿದ್ದಾರೆ. ಸದ್ಯಕ್ಕೆ ವಿಜಯೇಂದ್ರ ಪಾದಯಾತ್ರೆ ಕುಡುತಿನಿ ಪಟ್ಟಣ ತಲುಪಿದೆ. ಇಂದು ಬೆಳಗ್ಗೆ ಸಂಡೂರಿನ ಹಳೇದರೋಜಿಯಿಂದ 18 ಕಿ.ಮೀ. ಕ್ರಮಿಸಿತು. ಕುಡುತಿನಿ ಪಟ್ಟಣದ ಸಮಾವೇಶದಲ್ಲಿ ಕಿಡಿಕಾರಿದ ಸಿಟಿ ರವಿ ರಾಜೀನಾಮೆ ಕೊಡ್ತೀನಿ ಅಂದಿದ್ಯಲ್ಲ ಬಾ ಎಂದು ನಾಗೇಂದ್ರಗೆ ಚಾಲೆಂಜ್ ಹಾಕಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ 10 ನಿಮಿಷ ಆಗಸದಲ್ಲೇ ಗಿರಕಿ – 2ನೇ ಪ್ರಯತ್ನದಲ್ಲಿ ಸೇಫ್ ಲ್ಯಾಂಡಿಂಗ್!
