ರಾಯಚೂರು: ಸಿಂಧನೂರು ತಾಲೂಕಿನ ತುಂಗಭದ್ರಾ (Tungabhadra Canal) ಎಡದಂಡೆ ನಾಲೆ ವ್ಯಾಪ್ತಿಯ 54ನೇ ವಿತರಣಾ ಕಾಲುವೆಯ ಕೆಳಭಾಗಕ್ಕೆ ನೀರು ಪೂರೈಕೆಯಾಗದಿರುವುದನ್ನ ಖಂಡಿಸಿ ರೈತರು ಪ್ರತಿಭಟನೆ (Farmer Protest) ಮಾಡಿದರು.
ರಾಯಚೂರು-ಗಂಗಾವತಿ ಮುಖ್ಯರಸ್ತೆಯಲ್ಲಿ ಜವಳಗೇರ ಬಳಿ ರಸ್ತೆ ತಡೆ ಚಳವಳಿ ಮಾಡಿ ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ರಾಜ್ಯ ಸರ್ಕಾರ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಯುವ ಜವಾಬ್ದಾರಿ ಹೊತ್ತಿರುವ ಎಐಸಿಸಿ ಅಧ್ಯಕ್ಷ ಸಚಿವ ಶಿವರಾಜ ತಂಗಡಗಿ ತಮ್ಮ ಮನೆಗೆ ಬಂದ ರೈತರನ್ನು ಶಾಸಕರ ಹತ್ತಿರ ಹೋಗಿ ನನ್ನ ಹತ್ತಿರ ಬರಬೇಡಿ ಎಂದು ಹೇಳುತ್ತಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ. ಕರ್ತವ್ಯ ನಿರ್ವಹಣೆ ಮಾಡುವ ಇಚ್ಚೆಯಿದ್ದರೆ ಜವಾಬ್ದಾರಿ ಸ್ಥಾನದಲ್ಲಿ ಇರಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು.ಇದನ್ನೂ ಓದಿ: ಖರ್ಗೆ ಭಾಷಣ ಸ್ಥಳ ಶುದ್ಧೀಕರಣ ವಿವಾದ; SC-ST ಸಂಸದರಿಂದ ದೂರು ದಾಖಲು
ಇಲ್ಲಿಯವರೆಗೂ ಜವಳಗೇರೆಯಿಂದ ಕೆಳಗೆ ಇರುವ ಜಮೀನುಗಳಿಗೆ ಇನ್ನು ನೀರು ತಲುಪಿಲ್ಲ. ಇದರಿಂದ ತೀವ್ರ ತೊಂದರೆಯಾಗಿದೆ. ಆದ್ದರಿಂದ ಅನಿವಾರ್ಯವಾಗಿ ರಸ್ತೆ ತಡೆ ಮಾಡುತ್ತಿರುವುದಾಗಿ ರೈತರು ಅಸಮಧಾನ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಇಸ್ರೋ ಸಾಧನೆ ದೇಶದ ಹೆಮ್ಮೆ, ರಾಜ್ಯದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಗೆ ಕರ್ನಾಟಕದಿಂದ ಸಂಪೂರ್ಣ ಸಹಕಾರ: ಡಾ. ಅಜಯ್ ಸಿಂಗ್

