-ಭಾರತ-ಪಾಕ್ ಗಡಿಯಿಂದ 30 ಕಿ.ಮೀ ಅಂತರದಲ್ಲಿರುವ ಅಮೃತಸರ ಏರ್ಪೋರ್ಟ್
-ಏರ್ಪೋರ್ಟ್ನಲ್ಲಿ ಹೈಅಲರ್ಟ್, 7 ವಿಮಾನಗಳ ಮಾರ್ಗ ಬದಲಾವಣೆ
ಚಂಡೀಗಢ: ಇಲ್ಲಿನ ಅಮೃತಸರ ವಿಮಾನ ನಿಲ್ದಾಣದ (Amritsar Airport) ಬಳಿ ಅನುಮಾನಾಸ್ಪದವಾಗಿ ಡ್ರೋನ್ಗಳು ಹಾರಾಟ ನಡೆಸಿದ ಸಂಬಂಧ ಇದೀಗ ಎಫ್ಐಆರ್ ದಾಖಲಾಗಿದೆ.
ಅಮೃತಸರದ ಶ್ರೀ ಗುರು ರಾಮ್ ದಾಸ್ ಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ( Sri Guru Ram Das Ji International Airport) ರನ್ವೇ ಬಳಿ ಅನುಮಾನಾಸ್ಪದವಾಗಿ ಎರಡರಿಂದ ನಾಲ್ಕು ಬಾರಿ ಡ್ರೋನ್ಗಳು ಹಾರಾಟ ನಡೆಸಿರುವುದು ಕಂಡುಬಂದದಿದೆ. ಇದರ ಬೆನ್ನಲ್ಲೇ ಏರ್ಪೋರ್ಟ್ನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಇದೀಗ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ರಷ್ಯಾದಲ್ಲಿ ದೆಹಲಿ ಟೆಕ್ಕಿ ಬಂಧನ; ಪತಿ ಬಿಡುಗಡೆಗಾಗಿ ಮೋದಿಗೆ ವಿಡಿಯೋ ಮೂಲಕ ಪತ್ನಿ ಮನವಿ
ಸದ್ಯ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, 7 ವಿಮಾನಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಏಳು ವಿಮಾನಗಳನ್ನು ದೆಹಲಿ, ಚಂಡೀಗಢಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ರಾಜಲ ಗ್ರಾಮದ ದಿಕ್ಕಿನಿಂದ ಡ್ರೋನ್ಗಳು ವಿಮಾನ ನಿಲ್ದಾಣವನ್ನು ಸಮೀಸುತ್ತಿರುವುದು ಹಾಗೂ ರನ್ವೇಗಳ ಹತ್ತಿರ ಕೆಲ ನಿಮಿಷಗಳ ಕಾಲ ಹಾರಾಟ ನಡೆಸಿರುವುದಾಗಿ ಕಂಡುಬಂದಿದೆ. ಇದಕ್ಕೂ ಮುನ್ನ ಆಗಸ್ಟ್ನಲ್ಲಿ, ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಪಾಕ್ ಶಂಕಿತ ಡ್ರೋನ್ಗಳ ಚಲನವಲನ ಕಂಡುಬಂದಿತ್ತು.ಇದನ್ನೂ ಓದಿ: ಲಾರ್ಡ್ಸ್ ಟೆಸ್ಟ್ ಬಳಿಕ ಪಾಕಿಸ್ತಾನ ಕ್ರಿಕೆಟ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಸದ್ದು; ಆಂತರಿಕ ತನಿಖೆ ಶುರು
ಅಮೃತಸರದ ಶ್ರೀ ಗುರು ರಾಮದಾಸ್ ಜಿ ವಿಮಾನ ನಿಲ್ದಾಣವು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಉತ್ತರ ಭಾರತದಲ್ಲಿ ಎರಡನೇ ಅತೀ ದೊಡ್ಡ ವಿಮಾನ ನಿಲ್ದಾಣವಾಗಿದೆ. ಈ ನಿಲ್ದಾಣವು ಭಾರತ-ಪಾಕ್ ಗಡಿಯಿಂದ 30 ಕಿ.ಮೀ ದೂರದಲ್ಲಿದೆ.ಇದನ್ನೂ ಓದಿ: ದೆಹಲಿಯಲ್ಲಿ 5 ಅಂತಸ್ತಿನ ಕಟ್ಟಡ ಕುಸಿದು 7 ಮಂದಿ ಸಾವು – ಐವರು ಅಧಿಕಾರಿಗಳು ಸಸ್ಪೆಂಡ್
