ಕಾರವಾರ: ಉಸಿರುಗಟ್ಟಿ ಬೋಟ್ನಲ್ಲಿ ಮೂವರು ಮೀನುಗಾರರು ಸಾವನ್ನಪ್ಪಿರುವ ಘಟನೆ ಗೋಕರ್ಣದ (Gokarna) ತದಡಿ ಬಂದರಿನಲ್ಲಿ ನಡೆದಿದೆ.
ನೌಶಾದ್ (48), ಅಮೀನ್ (40), ಅಮನ್ (26) ಸಾವಿಗೀಡಾದ ಮೀನುಗಾರರು. ಇಬ್ಬರು ಮೀನುಗಾರರ ರಕ್ಷಣೆ ಮಾಡಲಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಅಬ್ದುಲ್ ಯಾಕುಬ್ ದಾಡಿಯಾ (60) ಅಸ್ವಸ್ಥಗೊಂಡಿದ್ದು, ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಯುವತಿ ದುರ್ಮರಣ
ತದಡಿಯ ಕುಚೈಮಾ ಬೋಟ್ನಲ್ಲಿ ಮೀನುಗಾರರು ಕೆಲಸ ಮಾಡುತ್ತಿದ್ದರು. ಚಮನ್ ಎನ್ನುವ ಮೀನು ಶಿಕಾರಿ ಮಾಡಿ ಬಂದರಿಗೆ ಬಂದಿದ್ದರು. ಮೀನು ಸಂಗ್ರಹ ಮಾಡುವ ಸ್ಥಳಕ್ಕೆ ಇಳಿದು ಮೀನನ್ನ ಖಾಲಿ ಮಾಡಿದ್ದರು.
ಮೀನು ಇಟ್ಟಿದ್ದ ಸ್ಥಳ ಸ್ವಚ್ಛ ಮಾಡುವಾಗ ಮೀನಿನ ವಾಸನೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ವಿಷಕಾರಿ ವಾಸನೆಯಿಂದ ಮೃತಪಟ್ಟಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
