ಮುಂಬೈ: ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಪುಣೆ ಪೊಲೀಸರು ಶನಿವಾರ (ಸೆ.5) ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಮುಖ್ಯ ಆರೋಪಿ ಚೇತನ್ ಚೌಧರಿಯ ಸ್ನೇಹಿತ ರಿತೇಶ್ ಹಂಗೆಯನ್ನು ಪೊಲೀಸರು ಬಂಧಿಸಿದ್ದು, ರಿತೇಶ್ ಕೂಡ ಈ ಕೊಲೆಯಲ್ಲಿ ಭಾಗಿಯಾಗಿದ್ದ ಹಾಗೂ ಕೊಲೆ ಸಂಚು ಹೂಡಿರುವ ಬಗ್ಗೆ ಆತನಿಗೆ ಮಾಹಿತಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೇತನ್ ಜೊತೆ ಎಂಗೇಜ್‌ಮೆಂಟ್, ಲವ್ವರ್ ಜೊತೆ ರಹಸ್ಯ ಮದುವೆ – ಬಗೆದಷ್ಟು ಬಯಲಾಗ್ತಿದೆ ಕ್ರಿಮಿನಲ್ ಬ್ಯೂಟಿ ಸಿಯಾ ಪುರಾಣ
ಸದ್ಯ ಬಂಧಿತ ರಿತೇಶ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೊಲೆಯಲ್ಲಿ ಆತನ ಪಾತ್ರ ಹಾಗೂ ಇನ್ನೂ ಯಾರೆಲ್ಲ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
