ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ (CID) ಸಲ್ಲಿಸಿರುವ ರಿಮಾಂಡ್ ಅರ್ಜಿಯಲ್ಲಿ ಪ್ರಮುಖ ಆರೋಪಿಗಳ ಪಟ್ಟಿ ಹಾಗೂ ಅವರ ಪಾತ್ರ ಬಯಲಾಗಿದೆ.
ಪ್ರಕರಣದಲ್ಲಿ ಶಿವಶಂಕರಪ್ಪ ಸಾಹುಕಾರ್ (A1), ಕೆಪಿಎಸ್‌ಸಿ ಸದಸ್ಯರು (A2), ಕೆಪಿಎಸ್‌ಸಿ ಅಧಿಕಾರಿಗಳು (A3), ಆಯ್ಕೆಯಾದ 29 ಅಭ್ಯರ್ಥಿಗಳು (A4) ಹಾಗೂ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ (A5) ಎಂದು ಉಲ್ಲೇಖಿಸಲಾಗಿದೆ.
ಈಗಾಗಲೇ ಬಂಧಿತರಾಗಿರುವ ಕೆಪಿಎಸ್‌ಸಿ ಮಾಜಿ ಪರೀಕ್ಷಾ ನಿಯಂತ್ರಕ, ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಹಾಗೂ ಬಸವರಾಜ್ ಕನ್ನಾಳೆ ಅವರನ್ನು ಸಿಐಡಿ 10 ದಿನಗಳ ಕಾಲ ವಶಕ್ಕೆ ಪಡೆದಿದೆ. ಇಬ್ಬರ ನಡುವಿನ ಅಕ್ರಮ ಸಂಪರ್ಕ ಹಾಗೂ ಅಭ್ಯರ್ಥಿಗಳೊಂದಿಗೆ ನಡೆಸಿದ ವ್ಯವಹಾರಗಳ ಕುರಿತು ತೀವ್ರ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: ರಾಯರೆಡ್ಡಿ ನಾಲ್ಕೈದು ಮದುವೆ ಆಗುವ ಆಸೆಯಿಂದ ಇಸ್ಲಾಂ ಶ್ರೇಷ್ಠ ಎಂದಿದ್ದಾರೆ: ಸಿ.ಟಿ. ರವಿ
ಬಂಧಿತರ ಹಾಗೂ ಅಭ್ಯರ್ಥಿಗಳ ಬ್ಯಾಂಕ್ ಖಾತೆಗಳ ಪರಿಶೀಲನೆ, ಕೃತ್ಯಕ್ಕೆ ಬಳಸಿದ ಎಲೆಕ್ಟ್ರಾನಿಕ್ ಡಿವೈಸ್‌ಗಳ ವಶ ಮತ್ತು ಸ್ಥಳ ಮಹಜರು ಬಾಕಿ ಇದೆ ಎಂದು ಸಿಐಡಿ ತಿಳಿಸಿದೆ. ಕನ್ನಾಳೆ ಅವರ ಮೊಬೈಲ್ ಡೇಟಾ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸಿಐಡಿ ಇಂದಿನಿಂದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.ಇದನ್ನೂ ಓದಿ: ಗ್ರಾಮೀಣಾಭಿವೃದ್ಧಿ ಇಲಾಖೆ AEE ಹುದ್ದೆಯಲ್ಲಿ ಅಕ್ರಮಕ್ಕೆ ಖಂಡನೆ – ಕೆಪಿಸಿಸಿ ಕಚೇರಿ ಎದುರು ಜೆಡಿಎಸ್ ಹೈಡ್ರಾಮಾ
