ನವದೆಹಲಿ: ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ (Mekedatu Project) ಅಗತ್ಯವಿರುವ ಶಾಸನಬದ್ಧ ತಾಂತ್ರಿಕ ಅನುಮೋದನೆಗಳನ್ನು ಶೀಘ್ರವಾಗಿ ನೀಡುವಂತೆ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ (N Chaluvaraya Swamy) ಕೇಂದ್ರ ಜಲ ಆಯೋಗದ ಅಧ್ಯಕ್ಷ ಅನುಪಮ್ ಪ್ರಸಾದ್ ಅವರಿಗೆ ಮನವಿ ಮಾಡಿದ್ದಾರೆ.
ನವದೆಹಲಿಯ ಕೇಂದ್ರ ಜಲ ಆಯೋಗದ ಕಚೇರಿಯಲ್ಲಿ ಬುಧವಾರ ನಡೆದ ಮಹತ್ವದ ಸಭೆಯಲ್ಲಿ ಮೇಕೆದಾಟು ಯೋಜನೆಯ ಸಮಗ್ರ ಯೋಜನಾ ವರದಿ ಕುರಿತು ಚರ್ಚೆ ನಡೆಯಿತು. ಸಿಡಬ್ಲ್ಯೂಸಿ (CWC) ಈ ಹಿಂದೆ ವ್ಯಕ್ತಪಡಿಸಿದ್ದ ತಾಂತ್ರಿಕ ಆಕ್ಷೇಪಣೆಗಳು ಹಾಗೂ ವೀಕ್ಷಣೆಗಳಿಗೆ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅನುಸರಣಾ ವರದಿಯನ್ನು ಸಚಿವರು ಆಯೋಗದ ಮುಂದಿಟ್ಟು ವಿಸ್ತೃತವಾಗಿ ಚರ್ಚಿಸಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ದಾಖಲು ಪ್ರಕ್ರಿಯೆ ಮುಂದೂಡಿಕೆ

ಯೋಜನೆಗೆ ಸಂಬಂಧಿಸಿದ ಸ್ಥಳೀಯ ವಾಸ್ತವಾಂಶಗಳು ಮತ್ತು ತಾಂತ್ರಿಕ ವಿಚಾರಗಳ ಕುರಿತು ಆಯೋಗದ ಅಧ್ಯಕ್ಷರಿಗೆ ಸ್ಪಷ್ಟನೆ ನೀಡಿದ ಸಚಿವರು, ಅಗತ್ಯವಿರುವ ಹೆಚ್ಚುವರಿ ತಾಂತ್ರಿಕ ಮಾಹಿತಿಯನ್ನು ರಾಜ್ಯ ಸರ್ಕಾರದಿಂದ ತ್ವರಿತವಾಗಿ ಒದಗಿಸಲಾಗುವುದು. ಯೋಜನೆಯ ಪರಿಶೀಲನಾ ಪ್ರಕ್ರಿಯೆಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಶೀಘ್ರ ಹಸಿರು ನಿಶಾನೆ ನೀಡಲು ಸಿಡಬ್ಲ್ಯೂಸಿ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸಾವರ್ಕರ್ ಮುಸ್ಲಿಮರನ್ನು ದ್ವೇಷಿಸುತ್ತಿರಲಿಲ್ಲ, ಅವರ ಪ್ರಗತಿಯನ್ನೇ ಬಯಸಿದ್ದರು: ಸಂಬಂಧಿ
ಕುಡಿಯುವ ನೀರಿಗೆ ಆದ್ಯತೆ:
ಪ್ರಸ್ತುತ ಹವಾಮಾನ ವೈಪರೀತ್ಯ, ಮಳೆ ಕೊರತೆ ಹಾಗೂ ನೀರಿನ ಸಂಕಷ್ಟದ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಯ ಅಗತ್ಯತೆಯನ್ನು ಸಚಿವರು ಸಭೆಯಲ್ಲಿ ಬಲವಾಗಿ ಪ್ರತಿಪಾದಿಸಿದರು. ಯೋಜನೆಯಿಂದ ಬೆಂಗಳೂರು ಮಹಾನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯ ಪೂರೈಸಲು ನೆರವಾಗಲಿದೆ. ಜೊತೆಗೆ ಜಲವಿದ್ಯುತ್ ಉತ್ಪಾದನೆಗೂ ಅವಕಾಶ ದೊರೆಯಲಿದೆ ಎಂದು ವಿವರಿಸಿದರು. ಇದನ್ನೂ ಓದಿ: ಸಿಎಂ ಭೇಟಿಯಾದ ಜಮೀರ್ ಅಹ್ಮದ್ – ಮಾಜಿ ಶಾಸಕ ರಮೇಶ್ ಕುಮಾರ್, ಪೊನ್ನಣ್ಣ ಸಾಥ್

ಬರಗಾಲದ ವರ್ಷಗಳಲ್ಲಿ ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರನ್ನು ನಿಯಮಿತವಾಗಿ ಹರಿಸಲು ಮೇಕೆದಾಟು ಸಮತೋಲನ ಜಲಾಶಯ ಎರಡೂ ರಾಜ್ಯಗಳಿಗೆ ಪ್ರಯೋಜನಕಾರಿಯಾಗಲಿದೆ ಎಂದು ಸಚಿವರು ತಿಳಿಸಿದರು. ಯೋಜನೆ ಜಾರಿಗೆ ರಾಜ್ಯ ಸರ್ಕಾರ ದೃಢ ರಾಜಕೀಯ ಬದ್ಧತೆ ಹೊಂದಿದ್ದು, ತಾಂತ್ರಿಕ ಪರಿಶೀಲನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಅನುಮೋದನೆ ನೀಡಬೇಕು ಎಂದು ನಿಯೋಗ ಆಗ್ರಹಿಸಿತು. ಇದನ್ನೂ ಓದಿ: ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವು ಕೇಸ್ ಸಿಬಿಐ ತನಿಖೆಗೆ: ಬಾಂಬೆ ಹೈಕೋರ್ಟ್ ಆದೇಶ
ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ, ಮುಖ್ಯ ಎಂಜಿನಿಯರ್ ಮಹೇಶ್ ಹಾಗೂ ಸಿಡಬ್ಲ್ಯೂಸಿ ವಾಟರ್ ಪ್ಲ್ಯಾನಿಂಗ್ ಮತ್ತು ಪ್ರಾಜೆಕ್ಟ್ ವಿಭಾಗದ ಸದಸ್ಯ ಯೋಗೇಶ್ ಪೈತಾಂಕರ್ ಉಪಸ್ಥಿತರಿದ್ದರು. ಇದನ್ನೂ ಓದಿ: ಆಹಾರ ಸುರಕ್ಷತೆ ಬಗ್ಗೆ ಕಳವಳ – ಪಿಜಿಗಳಲ್ಲಿ ತಪಾಸಣೆಗೆ ಸಚಿವ ಯು.ಟಿ ಖಾದರ್ ಸೂಚನೆ
