ಚೆನ್ನೈ: 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಹೆಸರಿಗೆ ಮತ್ತೊಂದು ದಾಖಲೆ ಸೇರಿದೆ. ಹಾಲಿ ಚಾಂಪಿಯನ್ ಸೆಂಟ್ರಲ್ ಝೋನ್ ವಿರುದ್ಧ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್ನಲ್ಲಿ ಪೂರ್ವ ವಲಯ ತಂಡದ ಭಾಗವಾಗಿರುವ ಯುವ ಆರಂಭಿಕ ಬ್ಯಾಟ್ಸ್ಮನ್, ಟೂರ್ನಮೆಂಟ್ ಇತಿಹಾಸದಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಮತ್ತೊಂದು ಮೈಲಿಗಲ್ಲು ಬರೆದಿದ್ದಾರೆ.
ಭಾನುವಾರ ನಾಯಕ ಇಶಾನ್ ಕಿಶನ್ ಅನುಪಸ್ಥಿತಿಯಲ್ಲಿ ಪೂರ್ವ ವಲಯ ತಂಡವನ್ನು ಮುನ್ನಡೆಸಬೇಕಾಗಿದ್ದ ಸೂರ್ಯವಂಶಿ ಸೋಮವಾರ ಬ್ಯಾಟಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ದುಲೀಪ್ ಟ್ರೋಫಿಯಲ್ಲಿ (Duleep Trophy) ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಹೊಸ್ತಿಲಲ್ಲಿದ್ದರು. ಆದರೆ, ಮೈಲಿಗಲ್ಲು ತಲುಪಲು ಕೇವಲ 8 ರನ್ಗಳ ಅಂತರದಲ್ಲಿ ಔಟಾದರು. ಇದನ್ನೂ ಓದಿ: ಒಂದೇ ಓವರ್ನಲ್ಲಿ 6 ಸಿಕ್ಸರ್ – ಮೈದಾನದಲ್ಲಿ ಅಭಿಷೇಕ್ ಶರ್ಮಾ ರನ್ ಸುನಾಮಿ
ಬ್ಯಾಟಿಂಗ್ನಲ್ಲಿ ತಮ್ಮ ಟ್ರೇಡ್ಮಾರ್ಕ್ ಅಲ್ಟ್ರಾ-ಆಕ್ರಮಣಕಾರಿ ವಿಧಾನವನ್ನು ಮುಂದುವರೆಸಿದ ಸೂರ್ಯವಂಶಿ, ಕೇವಲ 42 ಎಸೆತಗಳಲ್ಲಿ ಮೂರು ಸಿಕ್ಸರ್ಗಳು ಮತ್ತು ಐದು ಬೌಂಡರಿಗಳ ಸಹಾಯದಿಂದ ಅರ್ಧಶತಕ ಗಳಿಸಿದರು. ಆ ಮೂಲಕ ಸೂರ್ಯವಂಶಿ, 16 ವರ್ಷ 23 ದಿನಗಳಲ್ಲಿ ಟೂರ್ನಮೆಂಟ್ನಲ್ಲಿ ತಮ್ಮ ಮೊದಲ ಅರ್ಧಶತಕ ಗಳಿಸಿದ್ದ ಲಕ್ಷ್ಮಣ್ ಸಿಂಗ್ ಅವರ 57 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. 16 ವರ್ಷ 307 ದಿನಗಳಲ್ಲಿ ಅರ್ಧಶತಕ ಗಳಿಸಿದ ಪಿಯೂಷ್ ಚಾವ್ಲಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಥಾಯ್ಲೆಂಡ್ ವಿರುದ್ಧ 94 ರನ್ಗಳ ಭರ್ಜರಿ ಜಯ – ಏಷ್ಯಾಕಪ್ನಲ್ಲಿ ಭಾರತ ಶುಭಾರಂಭ
ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರರು
1. ವೈಭವ್ ಸೂರ್ಯವಂಶಿ: 15 ವರ್ಷ 157 ದಿನಗಳು
2. ಲಕ್ಷ್ಮಣ್ ಸಿಂಗ್ (1969): 16 ವರ್ಷ 23 ದಿನಗಳು
3. ಪಿಯೂಷ್ ಚಾವ್ಲಾ (2025): 16 ವರ್ಷ 307 ದಿನಗಳು
