ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ (Chamundi Hills) ಆಷಾಢ ಪೂಜೆಯ (Ashada Masa) ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಆಗಮಿಸಿದ್ದ ವೇಳೆ ದರ್ಶನ್ ಫೋಟೊ ಹಿಡಿದು ಅಭಿಮಾನಿಯೊಬ್ಬ ‘ಡಿ ಬಾಸ್’ ಎಂದು ಘೋಷಣೆ ಕೂಗಿರುವ ಪ್ರಸಂಗ ನಡೆದಿದೆ.
ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ನಟ ದರ್ಶನ್ (Darshan) ದೊಡ್ಡ ಭಾವಚಿತ್ರವನ್ನು ಹಿಡಿದಿದ್ದ. ಸ್ವಲ್ಪ ಸಮಯದ ನಂತರ ಆತ ಜೋರಾಗಿ ‘ಡಿ ಬಾಸ್’ ಎಂದು ಘೋಷಣೆ ಕೂಗಲಾರಂಭಿಸಿದ. ದೇವಿಯ ನಾಮಸ್ಮರಣೆಯ ಹೊತ್ತಲ್ಲಿ ನಟನ ಬಗ್ಗೆ ಜೈಕಾರ ಕೇಳಿಬಂದಿದ್ದರಿಂದ ಭಕ್ತರು ಅರೆಕ್ಷಣ ಕಕ್ಕಾಬಿಕ್ಕಿಯಾದರು. ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ಆತನನ್ನು ತಡೆದು ಅಭಿಮಾನಿಯ ಕೈಯಲ್ಲಿದ್ದ ಭಾವಚಿತ್ರವನ್ನು ವಶಪಡಿಸಿಕೊಂಡು, ಯಾವುದೇ ಗದ್ದಲ ಮಾಡದಂತೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕಾವೇರಿ ವಿವಾದ: ಈ ಸರ್ಕಾರಕ್ಕೆ ರೈತರ ಮೇಲೆ ಕಿಂಚಿತ್ತಾದರೂ ಕಾಳಜಿ ಇದೆಯೇ? – ಸುಮಲತಾ ಅಂಬರೀಷ್ ವಾಗ್ದಾಳಿ
ದೇವಸ್ಥಾನದ ಒಳಗೆ ಭಾವಚಿತ್ರ ಪ್ರದರ್ಶಿಸುವುದು, ಘೋಷಣೆ ಕೂಗುವುದು ಅಥವಾ ಸಾರ್ವಜನಿಕ ಗದ್ದಲಕ್ಕೆ ಅವಕಾಶ ಇಲ್ಲ. ಹೀಗಾಗಿ, ದರ್ಶನ್ ಅಭಿಮಾನಿಗೆ ಬುದ್ಧಿ ಹೇಳಿ ದೇವಿಯ ದರ್ಶನಕ್ಕೆ ಕಳುಹಿಸಲಾಯಿತು.
ಕೊಲೆ ಆರೋಪದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಹಿಂದೆಲ್ಲಾ ದರ್ಶನ್ ಹಲವು ಬಾರಿ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದರ್ಶನ ಪಡೆದಿದ್ದರು. ಈಗ ದರ್ಶನ್‌ಗೆ ಸಾಧ್ಯವಾಗದ ಕಾರಣ ಅಭಿಮಾನಿ, ದರ್ಶನ್ ಫೋಟೊ ಹಿಡಿದುಕೊಂಡು ಹೋಗಿ ದೇವಿ ದರ್ಶನ ಮಾಡಿಸಲು ಇಚ್ಛಿಸಿದ್ದನಂತೆ. ಇದನ್ನೂ ಓದಿ: ಗಲ್ಫ್ ಕಂಟ್ರಿಯಲ್ಲಿ ‘ಕರಾವಳಿ’ ಅಬ್ಬರ ಶುರು
