– ಬೇಜವಾಬ್ದಾರಿತನ ಬಿಡದಿದ್ದರೆ ಹೋರಾಟ ನಿಲ್ಲದು
ಮಂಡ್ಯ: ಈ ಸರ್ಕಾರಕ್ಕೆ ಕಿಂಚಿತ್ತಾದರೂ ರೈತರ ಕಾಳಜಿ ಇದೆಯೇ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್ ಪ್ರಶ್ನಿಸಿದ್ದಾರೆ.
ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಇಂದು ಶ್ರೀರಂಗಪಟ್ಟಣದ ಕೆ.ಆರ್.ಎಸ್ ಡ್ಯಾಂ ಬಳಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೀವು ರೈತರ ಮತ ಇಲ್ಲದೇ ಸರ್ಕಾರ ರಚಿಸಿದ್ದೀರಾ ಎಂದು ಪ್ರಶ್ನಿಸಿದರು.
ಸರ್ಕಾರ ಬಂದು ಮೂರು ವರ್ಷ ಕಳೆದರೂ ಮೇಕೆದಾಟು ಯೋಜನೆ ಕುರಿತು ಗಮನ ಕೊಡುತ್ತಿಲ್ಲ. ಇನ್ನೊಂದೆಡೆ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ದೆಹಲಿಗೆ ಹೋಗಿ ಮುಷ್ಕರದಲ್ಲಿ ಪಾಲ್ಗೊಳ್ಳಲು ನಿಮಗೆ ಪುರುಸೊತ್ತಿದೆ. ರೈತರು ಇಷ್ಟೊಂದು ಸಂಕಷ್ಟದಲ್ಲಿದ್ದು, ಅವರ ಸಮಸ್ಯೆ ಆಲಿಸಲು ನಿಮಗೆ ಕಿವಿಯೇ ಇಲ್ಲವೇ? ಇದು ಕೇವಲ ರೈತರ ಹೋರಾಟವಲ್ಲ, ಇದು ಜೀವನದ ಹೋರಾಟ ಎಂದು ಅವರು ಹೇಳಿದರು. ಇದನ್ನೂ ಓದಿ: ವೈದ್ಯಕೀಯ ನೀಟ್ ರೋಲ್ ನಂಬರ್ ದಾಖಲಿಸಲು ಆಗಸ್ಟ್ 3 ಕೊನೆ ದಿನ – ಕೆಇಎ
ಸರ್ಕಾರ ಇಲ್ಲಿನ ಸಮಸ್ಯೆಗಳಿಗೆ ಉತ್ತರ ಕೊಡುವವರೆಗೆ ಹೋರಾಟ ನಿಲ್ಲಿಸಬಾರದು ಎಂದು ಮನವಿ ಮಾಡಿದ ಅವರು, ಸರ್ಕಾರ ಇದೇ ರೀತಿ ಬೇಜವಾಬ್ದಾರಿಯಿಂದ ನಡೆದುಕೊಂಡರೆ ಈ ಹೋರಾಟವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಆ.2ಕ್ಕೆ ಕಾನ್‌ಸ್ಟೇಬಲ್ ಪರೀಕ್ಷೆ| 3,991 ಹುದ್ದೆಗೆ ಬರೆಯುತ್ತಿದ್ದಾರೆ 4.54 ಲಕ್ಷ ಅಭ್ಯರ್ಥಿಗಳು!
