ನವದೆಹಲಿ: ರಾಹುಲ್ ಗಾಂಧಿ(Rahul Gandhi) ಅವರ ದಿಢೀರ್ ವಿದ್ಯಾರ್ಥಿ ಪ್ರೇಮ ಮತ್ತು ಕಳಕಳಿ ಕೇವಲ ರಾಜಕೀಯ ನಾಟಕ ಹಾಗೂ ಬೂಟಾಟಿಕೆ ಎಂದು ಬಿಜೆಪಿ(BJP) ವ್ಯಂಗ್ಯವಾಡಿದೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ(Amit Malviya) ಅವರು ಭಾರತದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸಂಸ್ಕೃತಿಗೆ ಕಾಂಗ್ರೆಸ್ ಪಕ್ಷವೇ ಮೂಲ ಕಾರಣ. ಇಂದಿಗೂ INDIA ಮೈತ್ರಿಕೂಟ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲೇ ಅತ್ಯಂತ ಹೆಚ್ಚು ಪರೀಕ್ಷಾ ಅಕ್ರಮಗಳು ಜರುಗುತ್ತಿವೆ ಎಂದು ಸಾಕ್ಷ್ಯಾಧಾರ ಸಹಿತ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಫಾಸ್ಟ್-ಟ್ರ್ಯಾಕ್ ಕೋರ್ಟ್ ಸ್ಥಾಪನೆ, ವಿದ್ಯಾರ್ಥಿಗಳ ಜೊತೆ ಚೆಲ್ಲಾಟವಾಡುವವರನ್ನು ಕ್ಷಮಿಸಲ್ಲ: ಮೋದಿ
Rahul Gandhi’s sudden concern over examination paper leaks is a masterclass in political hypocrisy.
Congress is the fountainhead of the paper leak menace in India. Even today, the worst record on examination integrity lies with states governed by the I.N.D.I alliance.
In the… https://t.co/MGmVLu1HT0
— Amit Malviya (@amitmalviya) July 23, 2026
ಎಲ್ಲೆಲ್ಲಿ ಅಕ್ರಮ?
ಜಮ್ಮು ಮತ್ತು ಕಾಶ್ಮೀರ: ಸರ್ವಿಸ್ ಸೆಲೆಕ್ಷನ್ ಬೋರ್ಡ್ ಪರೀಕ್ಷೆ ಅಕ್ರಮ.
ಹಿಮಾಚಲ ಪ್ರದೇಶ: 12ನೇ ತರಗತಿ ಇಂಗ್ಲಿಷ್ ಪರೀಕ್ಷೆ ಪೇಪರ್ ಲೀಕ್.
ಜಾರ್ಖಂಡ್: 10ನೇ ತರಗತಿ ಹಿಂದಿ ಮತ್ತು ವಿಜ್ಞಾನ ವಿಷಯಗಳ ಪ್ರಶ್ನೆಪತ್ರಿಕೆ ಚೋರ.
ತೆಲಂಗಾಣ: ಇಂಟರ್‌ಮೀಡಿಯೇಟ್ ಭಾಷಾ ಪತ್ರಿಕೆ ಮತ್ತು ಎಸ್‌ಎಸ್‌ಎಲ್‌ಸಿ ಉರ್ದು ಮಾಧ್ಯಮ ಪತ್ರಿಕೆ ಸೋರಿಕೆ.
ತಮಿಳುನಾಡು: B.Ed ಪರೀಕ್ಷಾ ಅಕ್ರಮ.
ಪಶ್ಚಿಮ ಬಂಗಾಳ: ಪೋಲಿಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ.
ಪಂಜಾಬ್: PSSSB ಗ್ರೂಪ್-B ನೇಮಕಾತಿ ಪರೀಕ್ಷೆ ಅಕ್ರಮ.
ಕೇರಳ: PSC-26 ಪರೀಕ್ಷೆಯಲ್ಲಿ ಸರಣಿ ಅಕ್ರಮಗಳು.
ಕರ್ನಾಟಕ: ಎಸ್‌ಎಸ್‌ಎಲ್‌ಸಿ ಮತ್ತು 2ನೇ ಪಿಯುಸಿ ಪೂರ್ವಭಾವಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ
NEET seems to be perfectly fine for the Congress government in Telangana. The Chief Minister is congratulating students from humble backgrounds for securing top ranks, and all appears well there.
So, are Revanth Reddy and Rahul Gandhi not talking to each other?
If Rahul Gandhi… https://t.co/JJ8FrbgxwD
— Amit Malviya (@amitmalviya) July 23, 2026
ಕಾಂಗ್ರೆಸ್ ಅಥವಾ ಅದರ ‘INDIA’ ಮೈತ್ರಿಕೂಟದ ಸಹಪಾಠಿಗಳು ತಮ್ಮದೇ ಆಡಳಿತವಿರುವ ರಾಜ್ಯಗಳಲ್ಲಿ ಪೇಪರ್ ಲೀಕ್ ತಡೆಯಲು ಏನು ಕ್ರಮ ಕೈಗೊಂಡಿದ್ದಾರೆ? ತಮ್ಮದೇ ಸರ್ಕಾರದ ವಿರುದ್ಧ ಅವರು ಎಂದಾದರೂ ಪ್ರತಿಭಟನೆ ನಡೆಸಿದ್ದಾರೆಯೇ? ಅಲ್ಲಿ ಜವಾಬ್ದಾರಿ ಮತ್ತು ಹೊಣೆಗಾರಿಕೆ ಎಲ್ಲೋ ಹೋಯಿತು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜಂತರ್ ಮಂತರ್‌ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ- ಇಂಟರ್‌ನೆಟ್ ಬಂದ್
