ಹಾಸನ: ವೇಗವಾಗಿ ಬಂದ ತಹಶೀಲ್ದಾರ್ ಜೀಪ್ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆಯ ಆಲೂರು (Aluru) ತಾಲ್ಲೂಕಿನ ಈಶ್ವರಹಳ್ಳಿ ಕೂಡಿಗೆ ಸರ್ಕಲ್ ಬಳಿ ನಡೆದಿದೆ.
ಹಾಸನ ನಗರದ ಪೆನ್‌ಷನ್ ಮೊಹಲ್ಲಾದ ನಿವಾಸಿ ಜಮ್ಶಿದ್ (58) ಮೃತಪಟ್ಟ ದುರ್ದೈವಿಯಾಗಿದ್ದು, ನದೀಮ್ ಗಾಯಗೊಂಡಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಇಬ್ಬರು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ:ರಾಮನ ದೇಣಿಗೆ ಕದ್ದವರ ಪರ ವಕಾಲತ್ತು ವಹಿಸಿದ್ರೆ 5 ಲಕ್ಷ ದಂಡ – ಬಾರ್ ಅಸೋಸಿಯೇಷನ್ ಖಡಕ್ ಎಚ್ಚರಿಕೆ
ಇಬ್ಬರು ಕೆಲಸದ ನಿಮಿತ್ತ ಬೈಕ್‌ನಲ್ಲಿ ಸಕಲೇಶಪುರದ ಕಡೆಗೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಸಕಲೇಶಪುರ ತಹಶೀಲ್ದಾರ್ ಸುಪ್ರಿತಾ ಅವರ ಜೀಪ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಜಮ್ಶಿದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಗಾಯಾಳು ನದೀಮ್ ಅವರನ್ನು ತಹಶೀಲ್ದಾರ್ ಸುಪ್ರಿತಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ಲಗೇಜ್ ಬ್ಯಾಗಲ್ಲಿ ಡ್ರಗ್ಸ್ ತರ್ತಿದ್ದ ನೈಜೀರಿಯಾ ಪ್ರಜೆಗಳು ಲಾಕ್ – 21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
