ಚಿಕ್ಕಬಳ್ಳಾಪುರ: ಬೆಂಗಳೂರು ಹೊರವಲಯದ ಡಾಬಸ್ ಪೇಟೆ ಚೆನೈ ಎಕ್ಸ್ ಪ್ರೇಸ್ ವೇ ಸಂಪರ್ಕ ಕಲ್ಪಿಸಲು ನಿರ್ಮಿಸಿರೋ ಎಸ್‌ಟಿಆರ್ ಹೈವೆಯಲ್ಲಿ (SRT Highway) ಲಾರಿಯೊಂದು ಅಪಘಾತಕ್ಕೀಡಾಗಿರೋ ಭಯಾನಕ ದೃಶ್ಯ ಹೆದ್ದಾರಿಯಲ್ಲಿನ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ.
ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ ತಾಲೂಕು ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರ ಗೇಟ್ ಸಮೀಪ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಪೆಟ್ರೋಲ್ ಬಂಕ್‌ಗೆ ರೈತರ ಮುತ್ತಿಗೆ – ಹೆದ್ದಾರಿ ತಡೆದು ಪ್ರತಿಭಟನೆ
ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿರೋ ಲಾರಿ ಹೆದ್ದಾರಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ನುಗ್ಗಿದೆ. ಮೊದಲು ಟ್ರ‍್ಯಾಕ್ಟರ್ ಗೆ ಡಿಕ್ಕಿಯಾದ ರಭಸಕ್ಕೆ ಅದರಲ್ಲಿದ್ದ ಇಟ್ಟಿಗೆಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಇದನ್ನೂ ಓದಿ: ಜ್ಯೂಸಲ್ಲಿ ಮತ್ತು ಬರುವ ಔಷಧಿ ಬೆರೆಸಿಕೊಟ್ಟು ಅತ್ಯಾಚಾರ – ಬೆತ್ತಲೆ ವಿಡಿಯೋ ಚಿತ್ರೀಕರಿಸಿ ವಿವಾಹಿತೆಗೆ ಬ್ಲ್ಯಾಕ್‌ಮೇಲ್

ಮತ್ತೊಂದು ಬದಿಗೆ ನುಗ್ಗಿದಾಗ ಎದುರಗಡೆ ಅಡ್ಡ ಬಂದ ಬೊಲೆರೋ ಪಿಕಪ್ ವಾಹನ ಸಹ ಚೆಂಡಿನಂತೆ ಮೇಲೆ ಹಾರಿ ಜಮೀನಿನಲ್ಲಿ ಬಿದ್ದಿದ್ದು, ಅದರಲ್ಲಿದ್ದ ಕ್ರೇಟ್‌ಗಳು ಚೆಲ್ಲಾಪಿಲ್ಲಿಯಾಗಿವೆ. ಅದೃಷ್ಟವಶಾತ್ ವಾಹನ ಚಾಲಕರಿಗೆ ಸಣ್ಣ ಪುಟ್ಟ ಗಾಯಗಾಳಾಗಿದ್ದು, ಪ್ರಾಣಾಪಾಯ ಸಂಭವಿಸಿಲ್ಲ. ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
