– ಕಾಂಗ್ರೆಸ್ 5ನೇ ಅಭ್ಯರ್ಥಿ, ಜೆಡಿಎಸ್ ಅಭ್ಯರ್ಥಿ ನಡುವೆ ರಣಕಣ
ಬೆಂಗಳೂರು: ವಿಧಾನಸಭೆಯಿಂದ ಪರಿಷತ್ ಆಯ್ಕೆಗೆ ನಡೆಯುತ್ತಿರುವ ಚುನಾವಣೆ ರಂಗೇರಿದೆ. 7 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ 5ನೇ ಅಭ್ಯರ್ಥಿ, ಜೆಡಿಎಸ್ ಅಭ್ಯರ್ಥಿ ನಡುವೆ ರಣಕಣ ಜೋರಾಗಿದೆ.
ಡಿ. ಸುಧಾಕರ್ ನಿಧನ, ವಿನಯ್ ಕುಲಕರ್ಣಿ ಶಾಸಕತ್ವ ರದ್ದಿನಿಂದ ವಿಧಾನಸಭೆ ಬಲ 222 ಆಗಿದೆ. ಸೂತ್ರದ ಪ್ರಕಾರ ಒಬ್ಬ ಅಭ್ಯರ್ಥಿ ಗೆಲ್ಲಲು 28 ಮತಗಳ ಅಗತ್ಯವಿದೆ. ಕಾಂಗ್ರೆಸ್ 4 ಸ್ಥಾನಗಳು, ಬಿಜೆಪಿ 2 ಸ್ಥಾನಗಳನ್ನ ಸುಲಭವಾಗಿ ಗೆಲ್ಲಲಿದೆ. ಕಾಂಗ್ರೆಸ್ 5ನೇ ಅಭ್ಯರ್ಥಿಗೆ, ಜೆಡಿಎಸ್ ಅಭ್ಯರ್ಥಿಗೆ 2 ಮತಗಳ ಕೊರತೆ ಆಗಬಹುದು. ಹಾಗಾಗಿ ರಣಕಣ ರೋಚಕವಾಗಿದ್ದು, ಡಿಕೆಶಿ vs ಹೆಚ್‌ಡಿಕೆ ನಡುವಿನ ಮೊದಲ ಹಣಾಹಣಿ ಎನ್ನಬಹುದು.

ಡಿಕೆಶಿ ಆಪ್ತ ವಿನಯ್ ಕಾರ್ತಿಕ್ ಕಾಂಗ್ರೆಸ್ ನಿಂದ 5 ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ರೆ, ಬಿಜೆಪಿ ಬೆಂಬಲದೊಂದಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಗೋವಿಂದರಾಜು ಕಣಕ್ಕಿಳಿದಿದ್ದಾರೆ. ಹಾಗಾದ್ರೆ ಪರಿಷತ್ ಲೆಕ್ಕಾಚಾರ ಏನು? ಅನ್ನೋದೇ ಕುತೂಹಲ.
ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ
. ಕಾಂಗ್ರೆಸ್- 135
>. ಬಿಜೆಪಿ- 62
>. ಬಿಜೆಪಿ ಉಚ್ಚಾಟಿತ ಸದಸ್ಯರು – 03
>. ಜೆಡಿಎಸ್ – 18
>. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ – 01
>. ಸರ್ವೋದಯ ಕರ್ನಾಟಕ ಪಕ್ಷ – 01
>. ಪಕ್ಷೇತರರು- 02
>. ಖಾಲಿ ಸ್ಥಾನಗಳು- 02 (ವಿನಯ ಕುಲಕರ್ಣಿ ಅನರ್ಹತೆ, ಡಿ. ಸುಧಾಕರ್ ನಿಧನ)

ಒಬ್ಬರಿಗೆ 28 ಮತ – ಹೇಗಿದೆ ಲೆಕ್ಕಚಾರ?
>. ಕಾಂಗ್ರೆಸ್ ಸುಲಭವಾಗಿ ಗೆಲ್ಲಬಹುದು
>. 28 ಮತಗಳನ್ನ ಹಾಕಿಸಿಕೊಂಡ್ರೆ 140 ಮತಗಳ ಅಗತ್ಯ ಮತ ಕಾಂಗ್ರೆಸ್ ಬಳಿ ಇದೆ.
>. 135 ಶಾಸಕರು, ಇಬ್ಬರು ಪಕ್ಷೇತರರು, ಸರ್ವೋದಯ ಪಕ್ಷದ ಒಬ್ಬರು, ಇಬ್ಬರು ಬಿಜೆಪಿ ಉಚ್ಛಾಟಿತ ಸದಸ್ಯರ ಬಲ ಕಾಂಗ್ರೆಸ್ ಗೆ ಇದೆ.
>. ಬಿಜೆಪಿ 2 ಸ್ಥಾನಗಳಿಗೆ 56 ಮತಗಳು ಅಗತ್ಯ, ಉಳಿದ 6 ಮತಗಳು ಜೆಡಿಎಸ್‌ಗೆ ವರ್ಗಾಯಿಸಬಹುದು.
>. ಜೆಡಿಎಸ್ ಶಾಸಕರು 18, ಬಿಜೆಪಿ 6 ಸ್ಥಾನಗಳು, ಜನಾರ್ದನ ರೆಡ್ಡಿ, ಯತ್ನಾಳ್ ಮತ ಪಡೆದ್ರೆ ಒಟ್ಟು 26 ಮತಗಳಾಗುತ್ವೆ.
>. ಆಗ ಜೆಡಿಎಸ್ ಗೆ 2 ಮತಗಳ ಕೊರತೆ ಎದುರಾಗಲಿದೆ
ಒಬ್ಬರಿಗೆ 29 ಮತಗಳನ್ನ ಹಾಕಿದ್ರೆ ಲೆಕ್ಕಚಾರ ಏನು..?
>. ಕಾಂಗ್ರೆಸ್ 4 ಅಭ್ಯರ್ಥಿಗಳಿಗೆ 116 ಮತಗಳು ಬೇಕಾಗುತ್ತೆ, ಆಗ 5 ನೇ ಅಭ್ಯರ್ಥಿಗೆ 24 ಮತಗಳು ಉಳಿಯುತ್ವೆ.
>. ಕಾಂಗ್ರೆಸ್ 5ನೇ ಅಭ್ಯರ್ಥಿಗೆ 4 ಮತಗಳ ಕೊರತೆ ಉಂಟಾಗುತ್ತೆ.
>. ಕುದುರೆ ವ್ಯಾಪಾರ ಮಾಡಬಹುದು ಅಥವಾ ಎರಡನೇ ಪ್ರಾಶಸ್ತ್ಯದ ಮತ ನಂಬಿಕೊಳ್ಳಬಹುದು.
>. ಬಿಜೆಪಿ 2 ಸ್ಥಾನಗಳಿಗೆ 58 ಮತಗಳು ಅಗತ್ಯ, ಉಳಿದ 4 ಮತಗಳು ಜೆಡಿಎಸ್ ಗೆ ವರ್ಗಾಯಿಸಬಹುದು.
>. ಜೆಡಿಎಸ್ ಶಾಸಕರು 18, ಬಿಜೆಪಿ 4 ಸ್ಥಾನಗಳು, ಜನಾರ್ದನ ರೆಡ್ಡಿ, ಯತ್ನಾಳ್ ಮತ ಪಡೆದ್ರೆ ಒಟ್ಟು 24 ಮತಗಳಾಗುತ್ವೆ.
>. ಆಗ ಜೆಡಿಎಸ್ ಅಭ್ಯರ್ಥಿಗೂ 4 ಮತಗಳ ಕೊರತೆ ಉಂಟಾಗಲಿದೆ.
>. ಕುದುರೆ ವ್ಯಾಪಾರ ಮಾಡಬಹುದು ಅಥವಾ ಸೋಲನ್ನ ಒಪ್ಪಿಕೊಳ್ಳಬೇಕು (ಅಗತ್ಯವಾದ ಎರಡನೇ ಪ್ರಾಶಸ್ತ್ಯದ ಮತಗಳು ಇಲ್ಲ).
