ಉಡುಪಿ: ಪ್ರೇಮ (Love) ಪ್ರಕರಣ ರಾಜಿ ಪಂಚಾಯ್ತಿ ವೇಳೆ ಸ್ಥಳೀಯ ಮೀನುಗಾರರ ಮುಖಂಡನಿಗೆ (Fishermen Leader) ಚಾಕು ಇರಿದ (Stab) ಘಟನೆ ಉಡುಪಿ (Udupi) ಜಿಲ್ಲೆಯ ಮಲ್ಪೆಯಲ್ಲಿ ನಡೆದಿದೆ.
ಮಂಜು ಕೊಳ ಯಾನೆ ಮಂಜುನಾಥ ಸಾಲಿಯಾನ್ ಚಾಕು ಇರಿತಕ್ಕೊಳಗಾದ ಮೀನುಗಾರರ ಮುಖಂಡ. ಮಲ್ಪೆ (Malpe) ಯುವಕನ ಜೊತೆ ಪಡುಬಿದ್ರಿ ಪಲಿಮಾರು ಪರಿಸರದ ಯುವತಿಯ ಪ್ರೇಮ ಪ್ರಕರಣದ ಕುರಿತು ಮಾತುಕತೆಗೆ ಬಂದಿದ್ದ ಯುವತಿಯ ಕಡೆಯವರಿಂದ ಮೀನುಗಾರ ಮುಖಂಡನಿಗೆ ಚಾಕು ಇರಿಯಲಾಗಿದೆ. ಸದ್ಯ ಗಾಯಾಳು ಮಂಜು ಕೊಳ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗಂಭೀರ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: Video Viral | ನಂಜನಗೂಡು ದೇವಸ್ಥಾನದ ದಾಸೋಹ ಭವನದ ಬಳಿ ಮಾಂಸಹಾರ ಸೇವನೆ
ಇರಿದ ಆರೋಪಿಗಳನ್ನು ಸ್ಥಳೀಯರು ಪತ್ತೆಮಾಡಿದ್ದಾರೆ. ಸದ್ಯ ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ. ಘಟನೆ ಸಂಬಂಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರವಾಸದಿಂದ ಕಾಂಗ್ರೆಸ್ ಶಾಸಕರು ವಾಪಸ್

