ಡೆಹ್ರಾಡೂನ್: ಮುಸ್ಲಿಂ ಧರ್ಮದ (Muslim) 6 ಜನ ಗಂಗಾನದಿಯಲ್ಲಿ (Ganga River) ಪವಿತ್ರಸ್ನಾನ ಮಾಡಿ, ವೇದ ಮಂತ್ರ ಘೋಷಗಳೊಂದಿಗೆ ಹಿಂದೂ (Hindu) ಧರ್ಮ ಸ್ವೀಕರಿಸಿದ್ದಾರೆ.
ಹರಿದ್ವಾರದ (Haridwar) ಚಂಡಿಘಾಟ್ನಲ್ಲಿ ಗಂಗಾಪೂಜೆ, ಹವನ ಸೇರಿದಂತೆ ನಡೆದ ಧಾರ್ಮಿಕ ವಿಧಿವಿಧಾನಗಳ ಬಳಿಕ ಈ ಆರೂ ಜನ ಹೊಸ ಹೆಸರು ಹೊಂದಿದ್ದಾರೆ. ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಮಹಿದ್ ಮತ್ತು ಅವರ ಪತ್ನಿ ಸಬೀನಾ ಬಿಬಿ ಇದೀಗ ಕ್ರಮವಾಗಿ ಮೋಹಿತ್ ಮತ್ತು ಖುಷಿ ಎಂಬ ಹೆಸರುಗಳನ್ನು ಪಡೆದಿದ್ದಾರೆ. ತಮ್ಮ ನಿರ್ಧಾರ ಸ್ವಇಚ್ಛೆಯಿಂದ ತೆಗೆದುಕೊಂಡಿದ್ದೇವೆ ಎಂದು ಮೋಹಿತ್ ಹೇಳಿದ್ದಾರೆ. ಇದನ್ನೂ ಓದಿ: ಸಮುದ್ರದ ಮೇಲೆ ಗಿರಕಿ ಹೊಡೆಯುತ್ತಿರೋ ಬ್ರಿಟಿಷ್ ಏರ್ವೇಸ್ ವಿಮಾನ – ತಜ್ಞರು ಹೇಳ್ತಿರೋದೇನು?
ನಮ್ಮ ಸ್ವಂತ ಇಚ್ಛೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಸನಾತನ ಧರ್ಮದ ಬಗ್ಗೆ ನಮ್ಮಲ್ಲಿ ಗೌರವ, ಕರುಣೆ ಮತ್ತು ಶಾಂತಿಯ ಭಾವನೆ ಮೂಡಿದೆ. ಹಿಂದೂ ಧರ್ಮ ಸ್ವೀಕಾರ ಬಳಿಕ ಮಕ್ಕಳ ಹೆಸರು ಬದಲಿಸಲಾಗಿದ್ದು, ಇಬ್ಬರು ಗಂಡು ಮಕ್ಕಳಿಗೆ ರೋಷನ್ ಮತ್ತು ರೋಹನ್ ಎಂಬ ಹೆಸರುಗಳನ್ನು ಇಡಲಾಗಿದ್ದು, ಪುತ್ರಿಗೆ ಅನನ್ಯಾ ಎಂದು ಹೆಸರಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಸಹರಾನ್ಪುರದ ಇಬ್ರಾಹಿಂ ಅವರು ಇದೀಗ ವಿರಾಟ್ ಪುಂಡೀರ್ ಎಂಬ ಹೆಸರನ್ನು ಸ್ವೀಕರಿಸಿದ್ದಾರೆ. ಇದನ್ನೂ ಓದಿ: ದೆಹಲಿ ಪೊಲೀಸರ ಜೊತೆ ಘರ್ಷಣೆ – 4 ಎಫ್ಐಆರ್ ದಾಖಲು, 18 ,ಮಂದಿ ಅರೆಸ್ಟ್

