ಗದಗ: ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ (Chandru Lamani) ವಿರುದ್ಧ ಸ್ವಾಮಿಜಿಯೊಬ್ಬರು ಷಡ್ಯಂತ್ರ ಮಾಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆದರಹಳ್ಳಿ ಗವಿಮಠದ (Gavi Mutt) ಕುಮಾರ ಮಹಾರಾಜ ಸ್ವಾಮಿಜಿ (Kumar Maharaj Swamiji) ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಆಡಿಯೋದಲ್ಲಿ ಸ್ಪಷ್ಟನೆ ನೀಡಿದ್ದು, ಅದರಲ್ಲಿ ನಾನು ಮಾತನಾಡಿದ್ದು ಸತ್ಯ. ಆದರೆ ಲೋಕಾಯುಕ್ತ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಮಾತನಾಡಿಲ್ಲ ಅಂತ ಸಮರ್ಥನೆ ಮಾಡಿಕೊಳ್ಳಲ್ಲ. ಆಗ ಜಗಳದ ಸಮಯದಲ್ಲಿ ಶಾಸಕರು ಒತ್ತಡ ಕೊಟ್ಟಿದ್ದಕ್ಕೆ ಸಿಟ್ಟಿನಲ್ಲಿ ಮಾತಾಡಿದ್ದೇನೆ ನಿಜ. ಆದರೆ ಈ ಪ್ರಕರಣಕ್ಕೆ ನನಗೆ ಸಂಬಂಧ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಚಂದ್ರು ಲಮಾಣಿ & ಗುತ್ತಿಗೆದಾರ ನಡುವಿನ ಆಡಿಯೋ ಸ್ಫೋಟ
ಮೈಸೂರು ಕಾರ್ಯಕ್ರಮ ನಂತರ ಗದಗ ಬಂದು ಪ್ರೆಸ್ ಮೀಟ್ ಮಾಡಿ ಹೇಳ್ತೀನಿ. ನಾನು ಭಾಗಿಧಾರ ಇದ್ದೀನಿ ಅಂದ್ರೆ ನನ್ನ ಎರಡೂ ಮೊಬೈಲ್ ತೆಗೆದುಕೊಳ್ಳಿ ಚೆಕ್ ಮಾಡಿ ಅಂತಾ ಹೇಳಿದ್ದೇನೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಭಕ್ತರು ಭಯ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.
ಪತ್ತೆಯಾಗಿದ್ದ ಆಡಿಯೋದಲ್ಲಿ ಮುಂದಿನ ಚುನಾವಣೆಗೆ ಡಾ.ಚಂದ್ರುಗೆ ಟಿಕೆಟ್ ತಪ್ಪಿಸಬೇಕು ಅಂತಾ ಸ್ವಾಮೀಜಿ ಸ್ಪಷ್ಟವಾಗಿ ಮಾತನಾಡಿದ್ದಾರೆ. ಶಾಸಕರಿಗೆ ಟಿಕೆಟ್ ತಪ್ಪಿಸದೇ ಸಮಾಧಾನ ಇಲ್ಲ. ಬೆಂಗಳೂರಿನಲ್ಲಿ ಬೇರೆ ಸೂತ್ರ ಹಮ್ಮಿಕೊಂಡಿದ್ದೇವೆ. ಕೂತು ಮಾತಾಡಿ ಪ್ಲಾನ್ ಮುಂದುವರೆಸೋಣ. ಸೋನು ಲಮಾಣಿ ಅಂತಾ ಸಮಾಜದ ಲೀಡರ್ ಇದ್ದಾರೆ. ವೀರೇಂದ್ರ ಪಪ್ಪಿ ಇವನ ಪಾಟ್ನರ್, ಕ್ಯಾಸಿನೋ ಎಲ್ಲಾ ಇದೆ. ಅವರು ನಮ್ಮ ಭಕ್ತ. ಬೆಂಗಳೂರಿನಲ್ಲಿ ಟೀಮ್ ಇದೆ. ಕೆಲಸ ಕೊಡಿ ಅಂತಾ ಬರ್ತಾರೆ. ನೋಟಿಗೆ ಅದು, ಇದು ಹಚ್ಚಿ, ಐಟಿಗೆ ಒಗೆಸುತ್ತಾರೆ. ಬನ್ನಿ ಈ ಬಗ್ಗೆ ಮಾತಾಡೋಣ, ಅವರನ್ನ ಕೈ ಬಿಟ್ಟು ನಾವು ಸುಮ್ಮನೇ ನಿಲ್ಲೋಣ ಅಂತ 2:36 ನಿಮಿಷದ ಆಡಿಯೋದಲ್ಲಿ ಷಡ್ಯಂತ್ರದ ಮಾತುಗಳು ಕೇಳಿ ಬಂದಿದ್ದವು. ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದ ಶಾಸಕ ಡಾ.ಚಂದ್ರು ಲಮಾಣಿ – ಬಿಜೆಪಿಗೆ ನುಂಗಲಾರದ ತುತ್ತು

