ಕೊಲಂಬೋ: ಆಸ್ಟ್ರೇಲಿಯಾವನ್ನು (Australia) ಮಣಿಸಿದ್ದ ಜಿಂಬಾಬ್ವೆ (Zimbabwe) ಈಗ ತವರಿನಲ್ಲೇ ಶ್ರೀಲಂಕಾವನ್ನು (Sri Lanka) ಮಣಿಸಿ ಬಿಗ್ ಶಾಕ್ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಶ್ರೀಲಂಕಾ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ಇನ್ನೂ 3 ಎಸೆತ ಬಾಕಿ ಇರುವಂತೆಯೇ 4 ವಿಕೆಟ್ ನಷ್ಟಕ್ಕೆ 182 ರನ್ ಹೊಡೆದು 6 ವಿಕೆಟ್‌ಗಳ ಜಯ ಸಾಧಿಸಿತು.
ಈ ಗೆಲುವು ಸಾಧ್ಯವಾಗಿದ್ದು ನಾಯಕ ಸಿಕಂದರ್ ರಾಜಾ(Sikandar Raza) ಅವರ ಸ್ಫೋಟಕ ಆಟ ಮತ್ತು ಓಪನರ್ ಬ್ರಿಯಾನ್ ಬೆನೆಟ್ ಅವರ ತಾಳ್ಮೆಯ ಅರ್ಧಶತಕದಿಂದ.
Pure dominance by Zimbabwe. 🇿🇼
They keep their unbeaten tag alive as they brush aside Sri Lanka. 👏
Next stop: The Super 8s! 🙌
ICC Men’s #T20WorldCup | #AFGvCAN | LIVE NOW ➡️ https://t.co/0BcVdzugXC pic.twitter.com/pJSD74tlFs
— Star Sports (@StarSportsIndia) February 19, 2026
ಬ್ರಿಯಾನ್ ಬೆನೆಟ್ ಔಟಾಗದೇ 63 ರನ್(48 ಎಸೆತ, 8 ಬೌಂಡರಿ) ಹೊಡೆದರೆ ಸಿಕಂದರ್ ರಾಜಾ 45 ರನ್(26 ಎಸೆತ, 2 ಬೌಂಡರಿ, 4 ಸಿಕ್ಸ್) ಹೊಡೆದಿದ್ದರಿಂದ ಜಿಂಬಾಬ್ವೆ ಗೆಲುವು ಸಾಧಿಸಿದೆ. ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸೊನ್ನೆ – 7 ಇನ್ನಿಂಗ್ಸ್ ಪೈಕಿ 5 ರಲ್ಲಿ ಶೂನ್ಯಕ್ಕೆ ಅಭಿಷೇಕ್ ಔಟ್
The Skipper is leading from the front! 👊
Sikandar Raza and Brian Bennett are taking the game away from Sri Lanka. 🫡
Will Zimbabwe hold their nerve to finish as Group B Table Toppers? 🔝
ICC Men’s #T20WorldCup | #SLvZIM | LIVE NOW ➡️ https://t.co/HwjfgPhPO8 pic.twitter.com/ehAL001gBr
— Star Sports (@StarSportsIndia) February 19, 2026
ಶ್ರೀಲಂಕಾವನ್ನು ಮಣಿಸುವ ಮೂಲಕ ಜಿಂಬಾಬ್ವೆ ಬಿ ಗ್ರೂಪ್‌ನಲ್ಲಿ 7 ಅಂಕ ಸಂಪಾದಿಸಿ ಅಗ್ರಸ್ಥಾನಕ್ಕೆ ಜಿಗಿದಿದೆ. ಆಸ್ಟ್ರೇಲಿಯಾ ಮತ್ತು ಒಮಾನ್ ವಿರುದ್ಧ ಗೆದ್ದು 2 ಅಂಕ ಪಡೆದಿದ್ದ ಜಿಂಬಾಬ್ವೆಗೆ ನೆದರ್‌ಲ್ಯಾಂಡ್ಸ್ ವಿರುದ್ಧ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಇತ್ತಂಡಗಳಿಗೆ ತಲಾ ಒಂದೊಂದು ಅಂಕವನ್ನು ಹಂಚಿಕೆ ಮಾಡಲಾಗಿತ್ತು.
ಜಿಂಬಾಬ್ವೆ 7 ಅಂಕ ಪಡೆದರೆ 3 ಪಂದ್ಯ ಗೆದ್ದು ಒಂದು ಪಂದ್ಯ ಸೋತಿರುವ ಲಂಕಾ 6 ಅಂಕದೊಂದಿಗೆ 2ನೇ ಸ್ಥಾನ ಪಡೆದಿದೆ.

