-ಗೋಕಾಕ್ ಚಳುವಳಿ ಆಗುವಾಗ ಇವನು ಹುಟ್ಟಿದ್ನಾ?
-ದಮ್ಮು, ತಾಕತ್ತು ಇದ್ರೆ ಬರಲಿ ನೋಡೋಣ
ಬೆಂಗಳೂರು: ಚೇತನ್ (Chetan Ahimsa) ಒಬ್ಬ ಅರೆಹುಚ್ಚ, ನಿರುದ್ಯೋಗಿ, ಮುಠ್ಠಾಳ, ಇತನನ್ನು ರಾಜ್ಯದಿಂದ ಗಡೀಪಾರು ಮಾಡ್ಬೇಕು ಎಂದು ಹಿರಿಯ ನಿರ್ಮಾಪಕ ಸಾರಾ ಗೋವಿಂದು (Sara Govindu) ಆಕ್ರೋಶ ಹೊರಹಾಕಿದ್ದಾರೆ.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಇವನೊಬ್ಬ ಹಾಫ್ ಮೆಂಟಲ್, ನಿರುದ್ಯೋಗಿ, ಕೆಲಸ, ಕಾರ್ಯ ಏನೂ ಇಲ್ಲದೇ ಇರೋನು. ಅರೆಹುಚ್ಚ. ಇವನಿಗೆ ರಾಜ್‌ಕುಮಾರ್ ಬಗ್ಗೆ ಏನು ಗೊತ್ತು? ಇತಿಹಾಸ ಗೊತ್ತಾ? 2.5 ಎಕರೆ ಸಾರ್ವಜನಿಕರಿಗೆ ಕೊಡಬೇಕು ಎಂದು ಹೇಳುತ್ತಾನಲ್ಲ, ಇವನಿಗೆ ಯೋಗ್ಯತೆ ಇದ್ಯಾ? ರಾಜ್‌ಕುಮಾರ್ ಅಭಿಮಾನಿಗಳು ಸತ್ತಿಲ್ಲ, ಹುಷಾರ್, ಸಿಕ್ಕಿದ ಕಡೆ ಹೊಡೆಯುತ್ತಾರೆ. ಅವನು ಮಾನಸಿಕ ಅಸ್ವಸ್ಥನಾಗಿದ್ದಾನೆ. ಒಟ್ನಲ್ಲಿ ಅವನಿಗೆ ಏನಾದ್ರೂ ಮಾತಾಡುತ್ತಲೇ ಇರಬೇಕು. ನಿನ್ನೆ ರಾಜ್‌ಕುಮಾರ್ ಅವರ ಹುಟ್ಟಿದ ಹಬ್ಬ. ಇಂತಹ ಸಂದರ್ಭದಲ್ಲಿ ವಿಡಿಯೋ ಮಾಡಿ ಹಾಕಿದ್ದಾನೆ. ಕನ್ನಡಿಗರನ್ನು ಕೆಣಕ್ಕಿದ್ದಾನೆ, ಇವನಿಗೆ ಒಳ್ಳೆಯದಾಗಲ್ಲ. ಇಂತಹ ಅವಿವೇಕಿಗಳು ಅವರ ಬಗ್ಗೆ ಮಾತಾಡಿದ್ದು ಸಮಂಜಸ ಅನ್ನಿಸಲಿಲ್ಲ. ಇವನೊಬ್ಬ ಅಯೋಗ್ಯ, ಮುಠ್ಠಾಳ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್‌ಕುಮಾರ್ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ ಚೇತನ್ ವಿರುದ್ಧ ಡಾಕ್ಟರ್ ರಾಜ್ ಅಭಿಮಾನಿಗಳಿಂದ ದೂರು
ಅವನು ರಸ್ತೆಗೆ ಬರಲಿ ನೋಡೋಣ, ಆತನಿಗೆ ದಮ್ಮು, ತಾಕತ್ತು ಇದ್ರೆ ಬರಲಿ. ಯಾವ ವ್ಯಕ್ತಿ ಬಗ್ಗೆ ಮಾತಾಡುತ್ತಿದ್ದೇನೆ ಎಂದು ಗಮನದಲ್ಲಿ ಇರಬೇಕು. ರಾಜ್‌ಕುಮಾರ್ ಈ ನಾಡಿನ ಸಾಂಸ್ಕೃತಿಕ ರಾಯಭಾರಿ. ಕೇವಲ ಕಲಾವಿದನಾಗಿ ಉಳಿಯದೇ ಈ ನಾಡಿಗೆ, ಭಾಷೆಗೆ, ನೆಲ, ಜಲಕ್ಕೆ ಅನ್ಯಾಯವಾದಾಗ ಹೋರಾಟಕ್ಕೆ ಬಂದಿದ್ದಾರೆ. ಗೋಕಾಕ್ ಚಳುವಳಿ ಸಾಕು ಇತಿಹಾಸ ಹುಟ್ಟಿಸೋಕೆ. ಆಗ ಇವನು ಹುಟ್ಟಿದ್ನಾ? ಏನು ಗೊತ್ತಿದೆ ಇವನಿಗೆ? ಅವರು ರಾಜಕೀಯಕ್ಕೆ ಪ್ರವೇಶ ಮಾಡಿದ್ದರೆ ಸಾಯೋತನಕ ಮುಖ್ಯಮಂತ್ರಿ ಆಗಿರುತ್ತಿದ್ದರು. ಸುಮ್ಮನೇ ಪಾಲ್ಕೆ ಪ್ರಶಸ್ತಿ ಯಾರಿಗೂ ಕೊಡಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅವನೊಬ್ಬ ಅರೆಹುಚ್ಚ. ಅವನನ್ನೂ ಕೂಡಲೇ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು. ಅವರ ತಂದೆ, ತಾಯಿಯ ಬಳಿ ದುಡ್ಡಿಲ್ಲ ಅಂದರೆ ನಾವೇ ಅಭಿಮಾನಿಗಳು ಸೇರಿಕೊಂಡು ಮೆಂಟಲ್ ಆಸ್ಪತ್ರೆಗೆ ಸೇರಿಸುತ್ತೇವೆ. ಅವನ ಬಗ್ಗೆ ಮಾತಾಡಿ ನಾವೇ ನಮ್ಮ ಸಮಯ ಹಾಳು ಮಾಡಿಕೊಳ್ಳುತ್ತಿದ್ದೇವೆ. ಅವನೊಬ್ಬ ರಾಸ್ಕಲ್. ಇಲ್ಲಿಯವರೆಗೆ ಯಾರು ಈ ರೀತಿ ಪ್ರಶ್ನೆ ಕೇಳಿರಲಿಲ್ಲ. ನಟ ಚೇತನ್‌ಗೆ ಕರ್ನಾಟಕದಿಂದ ಸರ್ಕಾರ ಗಡಿಪಾರು ಮಾಡಬೇಕು. ಇಲ್ಲದೇ ಹೋದರೆ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾದರೂ ಡಾ. ರಾಜ್ ಅಭಿಮಾನಿಗಳು ಅವನಿಗೆ ತಕ್ಕ ಶಾಸ್ತಿ ಮಾಡುತ್ತಾರೆ. ಅಭಿಮಾನಿಗಳು ಎಲ್ಲಾ ಸೇರಿ ಮುಂದೆ ಏನ್ ಮಾಡಬೇಕು. ಅವನ ವಿರುದ್ಧ ಯಾವ ರೀತಿಯ ಹೋರಾಟ ಮಾಡಿ ಅವನಿಗೆ ಬುದ್ಧಿ ಕಲಿಸಬೇಕು ಅನ್ನೋದನ್ನ ತೀರ್ಮಾನ ಮಾಡಲಾಗುತ್ತದೆ. ಈಗಾಗಲೇ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್



