ಮೈಸೂರು: ಇಲ್ಲಿನ ಅರಮನೆ ಆವರಣದಲ್ಲಿ ಶಿವರಾತ್ರಿ (Maha Shivaratri Festival) ಆಚರಣೆಗೆ ಸಿದ್ಧತೆ ಶುರುವಾಗಿದೆ. ಶಿವರಾತ್ರಿ ಪ್ರಯುಕ್ತ ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿಗೆ ಧರಿಸುವ ಚಿನ್ನದ ಮುಖವಾಡವನ್ನ ಸರ್ಕಾರಿ ಖಜಾನೆಯಿಂದ ಹೊರ ತೆಗೆಯಲಾಗಿದೆ.
ವರ್ಷಕೊಮ್ಮೆ ಮಾತ್ರ ಚಿನ್ನದ ಕೊಳಗ ಧಾರಣೆ ಆಗುತ್ತದೆ. ಬರೋಬ್ಬರಿ 11 ಕೆಜಿ ತೂಕದ ಚಿನ್ನದ ಕೊಳಗವಿದು. ಯದುವಂಶದ ಜಯಚಾಮರಾಜೇಂದ್ರ ಒಡೆಯರ್ ಅವರು ಕಾಣಿಕೆ ರೂಪದಲ್ಲಿ 1953 ರಲ್ಲಿ ನೀಡಿರುವ ಚಿನ್ನದ ಮುಖವಾಡ ಇದಾಗಿದೆ. ಇದನ್ನೂ ಓದಿ: 1947ರ ಬಳಿಕ ಫಸ್ಟ್ ಟೈಮ್ ಹೊಸ ಕಟ್ಟಡಕ್ಕೆ ಪ್ರಧಾನಿ ಕಚೇರಿ ಶಿಫ್ಟ್ – ಸೇವಾ ತೀರ್ಥಕ್ಕೆ ಸ್ಥಳಾಂತರ ಯಾಕೆ?

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ನೆನಪಿನಾರ್ಥ ಮುಖವಾಡ ಮಾಡಿಸಿಕೊಟ್ಟಿದ್ದರು. ಶಿವರಾತ್ರಿ ಹಬ್ಬದ ದಿನದಂದು ಮಾತ್ರ ದೇವರಿಗೆ ಚಿನ್ನದ ಮುಖವಾಡ ಧಾರಣೆ ಮಾಡಲಾಗುತ್ತದೆ. ನಂತರ ಜಿಲ್ಲಾ ಖಜಾನೆಯಲ್ಲಿ ಭದ್ರವಾಗಿ ಇಡಲಾಗುತ್ತದೆ. ಶಿವರಾತ್ರಿಯ ದಿನ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ.

ದೇವರಿಗೆ ಧಾರಣೆ ಮಾಡುವ ಚಿನ್ನದ ಕೊಳಗವನ್ನ ಕಣ್ತುಂಬಿಕೊಳ್ಳಲು ಭಕ್ತರು ಕಾತುರರಾಗಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 7 ವರ್ಷ – 2019ರ ಫೆ.14 ರಂದು ನಡೆದಿದ್ದು ಏನು?

