ಮೈಸೂರು: ಸಿಎಂ ಕುರ್ಚಿ ಕದನ ಕ್ಲೈಮ್ಯಾಕ್ಸ್ ನಡುವೆ ಅಚ್ಚರಿಯ ಬೆಳವಣಿಗೆಯಲ್ಲಿ ಮೈಸೂರು ವಿಮಾನ ನಿಲ್ದಾಣದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದಿವೆ. ತಮಿಳುನಾಡಿನ ಗುಡ್ಲೂರು ಕಾರ್ಯಕ್ರಮದಿಂದ ರಾಹುಲ್ ಗಾಂಧಿ (Rahul Gandhi) ವಾಪಸ್ ಆಗುತ್ತಿದ್ದಂತೆ 3 ರೀತಿಯ ಬೆಳವಣಿಗೆಗಳು ನಡೆದಿವೆ.
ಡಿಸಿಎಂ ಡಿಕೆ ಶಿವಕುಮಾರ್ (D.K.Shivakumar), ಸಿಎಂ ಸಿದ್ದರಾಮಯ್ಯ (Siddaramaiah) ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಆದಾದ ಬಳಿಕ ಸಿಎಂ, ಡಿಸಿಎಂ ಇಬ್ಬರನ್ನೂ ಒಟ್ಟಿಗೆ ನಿಲ್ಲಿಸಿ ರಾಹುಲ್ ಗಾಂಧಿ ಮಾತುಕತೆ ಮುಗಿಸಿದ್ದಾರೆ. ಹೆಚ್ಚು ಅಂದ್ರೆ 3 ನಿಮಿಷಗಳಲ್ಲಿ 3 ಸೀನ್‌ಗಳು ಮುಗಿದಿದೆ. ಪವರ್ ಶೇರ್ ವಿಚಾರವಾಗಿ ಡೆಲ್ಲಿ ಮಾತುಕತೆ ಬಗ್ಗೆ ಡಿಕೆಶಿ ಪ್ರಸ್ತಾಪಿಸಿದ್ರು ಎನ್ನಲಾಗಿದೆ. ಯಾವುದೇ ಮಾತುಕತೆ ನಡೆಸದೇ ಡೆಲ್ಲಿಗೆ ಇಬ್ಬರೂ ಆದಷ್ಟು ಬೇಗ ಕರೆಸುತ್ತೇವೆ ಎಂದಷ್ಟೇ ರಾಹುಲ್ ಭರವಸೆ ನೀಡಿದ್ರು ಎನ್ನಲಾಗಿದೆ. ಇದನ್ನೂ ಓದಿ: ಮೈಸೂರಿನಲ್ಲಿ ರಾಹುಲ್ ಗಾಂಧಿ ಭೇಟಿಯಾದ ಸಿಎಂ, ಡಿಸಿಎಂ
ಬಜೆಟ್ ಮಂಡನೆ ಬಗ್ಗೆ ಸಿಎಂ ರಾಹುಲ್ ಗಮನ ಸೆಳೆದರೆ, ಪವರ್ ಶೇರ್ ಮಾತುಕತೆ ಬಗ್ಗೆ ಡಿಕೆಶಿ ಗಮನ ಸೆಳೆದರು ಎನ್ನಲಾಗಿದೆ. ಈ ತಿಂಗಳ ಅಂತ್ಯಕ್ಕೆ ಸಿಎಂ, ಡಿಸಿಎಂ ಇಬ್ಬರನ್ನೂ ದೆಹಲಿಗೆ ಕರೆಸುವ ಸಾಧ್ಯತೆಯಿದ್ದು, ಅಲ್ಲಿಯೇ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ನಂತರ ಸಿಎಂ, ಡಿಸಿಎಂ ದ್ವಿಮುಖವಾಗಿ ಹೊರಟಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಲು ಸಿಎಂ ಮುಂದಾದಾಗ ಡಿಕೆಶಿ ಅಲ್ಲಿಂದ ಕಾರು ಹತ್ತಿ ಹೊರಟಿದ್ದಾರೆ. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾನು ಡಿಕೆ ಇಬ್ಬರೂ ಬದ್ಧವೆಂದಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆಗೂ ಸಿದ್ಧತೆ ನಡೆಸುತ್ತಿರೋದಾಗಿ ಸಿಎಂ ಹೇಳಿದ್ದಾರೆ.
ಅವಶ್ಯಕತೆ ಬಂದಾಗ ವರಿಷ್ಠರನ್ನು ನಾನು ಭೇಟಿ ಆಗ್ತೇನೆ ಅಂತ ಪರಮೇಶ್ವರ್ ಹೇಳಿದರೆ, ನಾಯಕತ್ವದ ಗೊಂದಲವನ್ನು ರಾಹುಲ್ ಗಾಂಧಿ ಇತ್ಯರ್ಥ ಮಾಡಬೇಕು ಅಂತ ಮಾಜಿ ಸಚಿವ ರಾಜಣ್ಣ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಜ.20, 21ರಂದು ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ: ಬಿಜೆಪಿ-ಕಾಂಗ್ರೆಸ್ ನಡುವೆ ರಣರಂಗ?


