ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಆರಂಭವಾಗಿರುವ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್(Badminton) ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ (ರೌಂಡ್ ಆಫ್ 64) ಭಾರತದ 21 ವರ್ಷದ ಯುವ ಆಟಗಾರ ಆಯುಷ್ ಶೆಟ್ಟಿ(Ayush Shetty) ಇತಿಹಾಸ ನಿರ್ಮಿಸಿದ್ದಾರೆ.

ಈ ಟೂರ್ನಿಯಲ್ಲಿ 20ನೇ ರ್‍ಯಾಂಕ್‌ನಲ್ಲಿರುವ ಅಯುಶ್ ಶೆಟ್ಟಿ ಹಾಲಿ ವಿಶ್ವ ಚಾಂಪಿಯನ್ ಹಾಗೂ ವಿಶ್ವದ ನಂಬರ್ 1 ಆಟಗಾರನಾಗಿರುವ ಚೀನಾದ ಶೀ ಯು ಕಿ(Shi Yu Qi) ಅವರನ್ನು ಸೋಲಿಸಿದ್ದಾರೆ.
Clever play! 🤓
Follow live action: https://t.co/TjoFnU4PnB#BWFWorldChampionships #NewDelhi2026 pic.twitter.com/FFeaJ1cVbg
— BWF (@bwfmedia) August 17, 2026
ತವರಿನ ಪ್ರೇಕ್ಷಕರ ಪ್ರೋತ್ಸಾಹದ ನಡುವೆ ಭರ್ಜರಿ ಆರಂಭ ಪಡೆದ ಆಯುಷ್, ನೆಟ್ ಗೇಮ್ ಮತ್ತು ನಿಖರ ಸ್ಮ್ಯಾಶ್‌ಗಳ ಮೂಲಕ ಮೊದಲ ಗೇಮ್ ಅನ್ನು 21-14 ಅಂತರದಲ್ಲಿ ಗೆದ್ದುಕೊಂಡರು. ಎರಡನೇ ಗೇಮ್‌ನಲ್ಲಿ ಬಲವಾದ ತಿರುಗೇಟು ನೀಡಿದ ಚೀನಾದ ಶೀ ಯು ಕಿ, 21-13 ಅಂತರದಿಂದ ಗೇಮ್ ಗೆದ್ದು ಸಮಬಲ ಸಾಧಿಸಿದರು.
AYUSH SHETTY 💥💥💥
The Indian rising star has made a statement as he defeats defending champion Shi Yu Qi in the first round of the World Championships.
He waves to the crowd as it sinks in!
🎥Scenes in Delhi! 🔥#SmashForIndia #BWFWorldChampionships #NewDelhi2026 pic.twitter.com/RElOSOgsbb
— BAI Media (@BAI_Media) August 17, 2026
ತೀವ್ರ ಹಣಾಹಣಿಯಿಂದ ಕೂಡಿದ ಅಂತಿಮ ಗೇಮ್‌ನಲ್ಲಿ ಅದ್ಭುತ ಸಂಯಮ ಮತ್ತು ಆಕ್ರಮಣಕಾರಿ ಆಟ ಪ್ರದರ್ಶಿಸಿದ ಆಯುಷ್ ಶೆಟ್ಟಿ 21-19 ಅಂತರದಲ್ಲಿ ರೋಚಕ ಗೆಲುವು ದಾಖಲಿಸಿದರು. ಈ ಗೆಲುವಿನೊಂದಿಗೆ ಆಯುಷ್ ಶೆಟ್ಟಿ 21-14, 13-21, 21-19 ಸೆಟ್‌ಗಳಿಂದ ವಿಶ್ವದ ಟಾಪ್ ಆಟಗಾರನನ್ನು ಮಣಿಸಿ ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
