-ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು

ಭೋಪಾಲ್: ಇಲ್ಲಿನ ಉಜ್ಜಯಿನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗ (Mahakaleshwar Temple) ಹಾಗೂ ನಾಗಚಂದ್ರೇಶ್ವರ ದೇಗುಲಕ್ಕೆ (Nagchandreshwar Temple) ಆಗಮಿಸಿದ್ದ ಭಕ್ತರ ನಡುವೆ ನೂಕುನುಗ್ಗಲು ಉಂಟಾಗಿದ್ದು, ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಶ್ರಾವಣ ಸೋಮವಾರದ ಹಿನ್ನೆಲೆ ದೇವರ ದರ್ಶನಕ್ಕೆ ಅಪಾರ ಪ್ರಮಾಣದ ಭಕ್ತರು ಹರಿದು ಬಂದಿದ್ದರು. ಪ್ರಸಿದ್ಧ ನಾಗಚಂದ್ರೇಶ್ವರ ದೇವಸ್ಥಾನದಲ್ಲಿ ಇಂದು ಮುಂಜಾನೆ ಭಕ್ತರ ನಡುವೆ ಭಾರಿ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಹತ್ತಿರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬಂಗಾಳದ ಬಿರ್ಭೂಮ್‌ನ ತಾರಾಪಿತ್ ದೇವಾಲಯ ಬಳಿಯ ಹೋಟೆಲ್‌ನಲ್ಲಿ ಬೆಂಕಿ; 7 ಯಾತ್ರಿಕರು ಸಾವು
ನೂಕುನುಗ್ಗಲಿನ ರಭಸಕ್ಕೆ ಕೆಲವರು ಕೆಳಗೆ ಬಿದ್ದು ಗಾಯಗೊಂಡಿದ್ದು, ಸದ್ಯ ಪರಿಸ್ಥಿತಿಯನ್ನು ಹತೋಟಿಗೆ ತರಲು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನೂ ಬಿಹಾರದ ಲಖಿಸರಾಯ್‌ನಲ್ಲಿರುವ ಅಶೋಕ ಧಾಮ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ಜರುಗುತ್ತಿದ್ದ ವೇಳೆ ಕಾಲ್ತುಳಿತ ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಇದನ್ನೂ ಓದಿ:ಅಶೋಕ ಧಾಮ ದೇವಾಲಯದಲ್ಲಿ ಕಾಲ್ತುಳಿತ – 7 ಮಂದಿ ದುರ್ಮರಣ; ಡಜನ್‌ಗೂ ಹೆಚ್ಚು ಮಂದಿಗೆ ಗಾಯ
