-ದರೋಡೆಕೋರರಿಗೆ ನೀವು ಲೂಟಿ ಮಾಡಿ, ನಮಗೆ ಕಮಿಷನ್ ಕೊಡಿ ಅಂತಾರೆ ಕಾಂಗ್ರೆಸ್ನವ್ರು
ಬೆಂಗಳೂರು: ಮುಡಾದಲ್ಲಿ 3,000 ರಿಂದ 4,000 ಕೋಟಿ ರೂ. ಲೂಟಿಯಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದರು.
ಪ್ರಧಾನಿ ಮೋದಿಯವರ (PM Modi) ಜನ್ಮದಿನ ಹಿನ್ನೆಲೆ ಬಿಜೆಪಿ (BJP) ನಾಯಕರು ಜಯನಗರದಲ್ಲಿ ರಕ್ತದಾನ ಶಿಬಿರ ಹಾಗೂ ಮೋದಿಯವರ ಬದುಕಿನ ಚಿತ್ರ ಪ್ರದರ್ಶಿನಕ್ಕೆ ಚಾಲನೆ ನೀಡಿದರು. ಈ ವೇಳೆ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಬಂಧನದ ಬಗ್ಗೆ ಮಾತನಾಡಿ, ಮುಡಾದಲ್ಲಿ 3,000 ರಿಂದ 4,000 ಕೋಟಿ ರೂ. ಲೂಟಿಯಾಗಿದೆ. ಸಿಎಂ ಅವರ ಕುಟುಂಬ ಅಕ್ರಮವಾಗಿ 14 ಸೈಟ್ಗಳನ್ನು ಪಡೆದಿತ್ತು. ಈ ಕೇಸ್ ಮುಚ್ಚಿ ಹೋಗುತ್ತೇನೋ ಅಂತ ಜನಕ್ಕೆ ಅನಿಸಿತ್ತು. ಆದರೆ ಈಗ ದಿನೇಶ್ ಕುಮಾರ್ ಬಂಧನ ಆಗಿದೆ. ಇದರಿಂದ ಪ್ರಕರಣಕ್ಕೆ ಇನ್ನಷ್ಟು ಶಕ್ತಿ ಬಂದಿದೆ. ಇನ್ನಷ್ಟು ಬ್ರೋಕರ್ಗಳ ತನಿಖೆಯೂ ಆಗಬೇಕು ಎಂದರು.ಇದನ್ನೂ ಓದಿ: ಡಿವಿಎಸ್ ಬ್ಯಾಂಕ್ ಖಾತೆ ಹ್ಯಾಕ್ – 3 ಲಕ್ಷ ದೋಚಿದ ಸೈಬರ್ ಕಳ್ಳರು
ಇದೇ ವೇಳೆ ವಿಜಯಪುರದಲ್ಲಿ ಬ್ಯಾಂಕ್ ಲೂಟಿ ವಿಚಾರವಾಗಿ ಮಾತನಾಡಿದ ಅವರು, ಮತ್ತೆ ರಾಜ್ಯದಲ್ಲಿ ಬ್ಯಾಂಕ್ ದರೋಡೆಗಳು ನಡಿಯುತ್ತಿವೆ. ಈ ಸರ್ಕಾರದ ಅವಧಿಯಲ್ಲಿ ದರೋಡೆಕೋರರಿಗೆ ಹಬ್ಬದ ವಾತಾವರಣ ಇದ್ದಂತೆ. ಜೊತೆಗೆ ಕಾಂಗ್ರೆಸ್ನವರು ನೀವು ಲೂಟಿ ಮಾಡಿ, ನಮಗೆ ಕಮಿಷನ್ ಕೊಡಿ ಅಂತಾರೆ. ಆಡಳಿತ ಹದಗೆಟ್ಟು ಹೋಗಿದೆ, ದುಡ್ಡಿಲ್ಲದೇ ಸರ್ಕಾರ ಪಾಪರ್ ಆಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಜಾತಿ ಒಡೆಯುವುದರಲ್ಲಿ ಫೇಮಸ್. ನಮ್ಮ ಸರ್ಕಾರ ಬಂದ ನಂತರ ಸಿದ್ದರಾಮಯ್ಯಗೆ ಸನ್ಮಾನ ಮಾಡ್ತೇವೆ. ಕುಲ ಕುಲ ಅಂತ ಹೊಡೆದಾಡಬೇಡಿ ಅಂತ ಕನಕದಾಸರು ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಕುಲ ಕುಲ ಅಂತ ಹೊಡೆದಾಡಿ ಅಂತಿದ್ದಾರೆ. ಇದೀಗ 52 ಹೊಸ ಜಾತಿಗಳನ್ನು ಸೇರಿಸಿದ್ದಾರೆ. ಒಕ್ಕಲಿಗರು ಸೇರಿ ಎಲ್ಲ ಜಾತಿಗಳಲ್ಲೂ ಕ್ರಿಶ್ಚಿಯನ್ಗಳನ್ನು ಹುಟ್ಟು ಹಾಕಿದ್ದಾರೆ. ಇದರ ವಿರುದ್ಧ ಒಕ್ಕಲಿಗರು ಸೇರಿಕೊಂಡು ಸದ್ಯದಲ್ಲೇ ಸಭೆ ಮಾಡ್ತೀವಿ. ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಸಿದ್ದರಾಮಯ್ಯ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿ ಈಗಾಗಲೇ ಕೈಸುಟ್ಟುಕೊಂಡಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ಬಂಗ್ಲೆಗುಡ್ಡೆ ಅರಣ್ಯದಲ್ಲಿ ಎಸ್ಐಟಿಯಿಂದ ಅಸ್ಥಿಪಂಜರದ ಶೋಧ ಕಾರ್ಯ
ಮೋದಿಯವರಿಗೆ 75 ವರ್ಷ ಆಯ್ತು, ಪ್ರಧಾನಿ ಪದವಿಯಿಂದ ಕೆಳಗಿಳಿಯೋದು ಯಾವಾಗ ಎಂಬ ಕಾಂಗ್ರೆಸ್ ಟೀಕೆ ವಿಚಾರವಾಗಿ ಮಾತನಾಡಿ, ನಮ್ಮಲ್ಲಿ ವಯಸ್ಸಿನ ಮಿತಿ ಇಲ್ಲ. ನಮ್ಮಲ್ಲಿ ಪರ್ಫಾರ್ಮೆನ್ಸ್ ಗೆ ಮಾತ್ರ ಮನ್ನಣೆ ಕೊಡುತ್ತೇವೆ. ನಮ್ಮಲ್ಲಿ ವಯಸ್ಸಿನ ಆಧಾರದಲ್ಲಿ ಯಾರನ್ನೂ ಮನೆಗೆ ಕಳಿಸಲ್ಲ. ಮೋದಿಯವರು ಇನ್ನೊಂದು ಅವಧಿಗೆ ಪ್ರಧಾನಿ ಆಗಬೇಕು, ಆಗ ಭಾರತ ನಂಬರ್ ಒನ್ಗೆ ಹೋಗುತ್ತದೆ ಎಂದರು.
ಇದೇ ವೇಳೆ ಬಿಜೆಪಿ ಶಾಸಕರಿಗೆ ಅನುದಾನ ತಾರತಮ್ಯಕ್ಕೆ ಅಶೋಕ್ ಖಂಡಿಸಿದ್ದು, ಕಾಂಗ್ರೆಸ್ನವರು ತಿರುಗಿ ಬಿದ್ದಿದ್ದಾರೆ ಎಂದು ಅನುದಾನ ಕೊಡ್ತಿದ್ದಾರೆ. ಆದರೆ ಅವರಿಗೆ 50 ಕೋಟಿ ರೂ. ಕೊಟ್ಟು ನಮಗೆ 25 ಕೋಟಿ ರೂ. ಕೊಡ್ತಿದ್ದಾರೆ. ನಮಗೆ ಕಡಿಮೆ ಅನುದಾನ ಕೊಡೋದು ಸರಿಯಲ್ಲ, ಇದು ತಾರತಮ್ಯ ನೀತಿ. ಇವರು ಅಭಿವೃದ್ಧಿ ಪಥದಲ್ಲಿ ಹೋಗ್ತಿಲ್ಲ, ರಾಜಕೀಯ ಪಥದಲ್ಲಿ ಹೋಗ್ತಿದ್ದಾರೆ ಎಂದು ಆಗ್ರಹಿಸಿದರು.ಇದನ್ನೂ ಓದಿ: ಕೊತ್ತಲವಾಡಿ ನಿರ್ಮಾಪಕರಿಗೆ ಅನ್ಯಾಯವಾಗಿದೆ, ಗೊತ್ತಾಗ್ಲಿ ಅಂದೇ ಇಷ್ಟೆಲ್ಲಾ ಮಾಡಿದ್ದು: ನಟಿ ಸ್ವರ್ಣ



