Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೇಘಸ್ಫೋಟ | ರಣ ಪ್ರವಾಹಕ್ಕೆ ಹಲವೆಡೆ ಭೂಕುಸಿತ – 171 ರಸ್ತೆಗಳು ಹಾಳು, 150ಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಜಖಂ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಮೇಘಸ್ಫೋಟ | ರಣ ಪ್ರವಾಹಕ್ಕೆ ಹಲವೆಡೆ ಭೂಕುಸಿತ – 171 ರಸ್ತೆಗಳು ಹಾಳು, 150ಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಜಖಂ

Latest

ಮೇಘಸ್ಫೋಟ | ರಣ ಪ್ರವಾಹಕ್ಕೆ ಹಲವೆಡೆ ಭೂಕುಸಿತ – 171 ರಸ್ತೆಗಳು ಹಾಳು, 150ಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಜಖಂ

Public TV
Last updated: June 25, 2025 11:33 pm
Public TV
Share
3 Min Read
Himachal Pradesh Flood 3 1
SHARE

– ವರುಣಾರ್ಭಟಕ್ಕೆ ಪ್ರವಾಸಿ ತಾಣಗಳಲ್ಲಿ ಅನಾಹುತ, ಸೈನಿಕರ ಶಸ್ತ್ರಾಸ್ತ್ರಗಳು ನಾಪತ್ತೆ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕುಂಭದ್ರೋಣ ಮಳೆಯಾಗಿದೆ. ಕೆಲವು ಪ್ರಮುಖ ಸ್ಥಳಗಳಲ್ಲಿ ಮೇಘಸ್ಫೋಟವಾಗಿದ್ದು (Cloudburst) ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ, ರಣಪ್ರವಾಹ (Flash Floods), ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಈವರೆಗೂ ಇಬ್ಬರು ಸಾವನ್ನಪ್ಪಿದ್ದು ಹನ್ನೊಂದು ಮಂದಿ ನಾಪತ್ತೆಯಾಗಿದ್ದಾರೆ. ಹಲವೆಡೆ ಪ್ರವಾಸಿಗರು ಸಿಲುಕಿದ್ದು ರಕ್ಷಣಾ ಕಾರ್ಯಚರಣೆ ಭರದಿಂದ ಸಾಗಿದೆ.

ಜನ ಜೀವನ ಅಸ್ಥವ್ಯಸ್ಥ
ಹಿಮಾಚಲ ಪ್ರದೇಶದಲ್ಲಿ (Himachal Pradesh) ಕುಂಭದ್ರೋಣ ಮಳೆಗೆ ಜನ ಜೀವನ ಅಸ್ಥವ್ಯಸ್ಥಗೊಂಡಿದೆ. ಕುಲು ಜಿಲ್ಲೆಯ ಸೈನ್ಜ್ ಕಣಿವೆ, ಜೀಭಿ, ತೀರ್ಥನ್, ಮತ್ತು ಮಣಿಕರಣ್-ಬಂಜರ್ ಕಣಿವೆಗಳಲ್ಲಿ ಮೇಘಸ್ಫೋಟ ಸಂಭವಿಸಿದೆ. ಪಾರ್ವತಿ ನದಿಯು ಉಕ್ಕಿ ಹರಿದಿದ್ದು, ರಣಪ್ರವಾಹಕ್ಕೆ ಕಾರಣವಾಗಿದೆ. ಕಾಂಗ್ರಾ ಜಿಲ್ಲೆಯ ಧರ್ಮಶಾಲಾದಲ್ಲಿ ಭಾರೀ ಮಳೆಯಾಗುತ್ತಿದ್ದು ಪ್ರವಾಹದಲ್ಲಿ 15-20 ಕಾರ್ಮಿಕರು ನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆಯಿದೆ. ರಾಂಪುರ್, ಜಮತ್ಖಾನಾ, ನಿರ್ಮಂದ್, ಮತ್ತು ಅನಿ ಪ್ರದೇಶಗಳಲ್ಲಿ ಮೇಘಸ್ಫೋಟದಿಂದ 15-25 ವಾಹನಗಳು ಕೊಚ್ಚಿಹೋಗಿವೆ ಮತ್ತು ರಸ್ತೆ-ಸೇತುವೆಗಳಿಗೆ ಹಾನಿಯಾಗಿದೆ.

Himachal Pradesh Flood 3

ಹವಮಾನ ಇಲಾಖೆ ಪ್ರಕಾರ ಪಾಲಂಪುರ್ 145, ನಹಾನ್ 99, ಪೌಂಟಾ ಸಾಹಿಬ್ 58, ಧರ್ಮಶಾಲಾ 54 ಕಂಗ್ರಾ 44, ನರಕಂದ 40, ಕಸೌಲಿ 22, ಮಂಡಿ 16, ಶಿಮ್ಲಾ 14 ಮಿಲಿ ಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಹಗುರಿಂದ ಮಳೆ ಮುಂದುವರಿಯುವ ಸಾಧ್ಯತೆಯಿದೆ, ಮತ್ತು ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದು ಎಂದು ಎಚ್ಚರಿಕೆ ನೀಡಿದೆ.

ವರುಣಾರ್ಭಟಕ್ಕೆ ಪ್ರವಾಸಿ ತಾಣದಲ್ಲಿ ಅನಾಹುತ
ಭಾರಿ ಮಳೆಯಿಂದ ಹಲವೆಡೆ ಭೂ ಕುಸಿತ ಸಂಭವಿಸಿದೆ. ಧರ್ಮಶಾಲಾ-ಚಟಾರೊ-ಗಗ್ಗಲ್ ರಸ್ತೆಯಲ್ಲಿ ಭೂಕುಸಿತದಿಂದ ಸಂಚಾರ ಸ್ಥಗಿತಗೊಂಡಿದೆ. 8-10 ವಾಹನಗಳು ಕೊಚ್ಚಿಹೋಗಿವೆ, 10 ವಾಹನಗಳು ನೀರಿನಲ್ಲಿ ಸಿಲುಕಿವೆ. ಕುಲುವಿನ ಸೈನ್ಜ್ ಕಣಿವೆಯಲ್ಲಿ ಮನೆಗಳು, ರಸ್ತೆಗಳು, ಮತ್ತು ಸೇತುವೆಗಳಿಗೆ ಹಾನಿಯಾಗಿದೆ. ಜಮತ್ಖಾನಾದಲ್ಲಿ 24-25 ವಾಹನಗಳಿಗೆ ತೀವ್ರ ಹಾನಿಯಾಗಿದೆ. ರಾಜ್ಯದಲ್ಲಿ ಒಟ್ಟು 171 ರಸ್ತೆಗಳು ಹಾಳಾಗಿದ್ದು, 550 ವಿದ್ಯುತ್ ಟ್ರಾನ್ಸಫಾರಂಗಳು ಕೆಟ್ಟುಹೋಗಿವೆ. ವಿಮಾನ ಹಾರಾಟಲ್ಲೂ ವ್ಯತ್ಯಯವಾಗಿದೆ.

Himachal Pradesh Flood 1

ಸೈನ್ಜ್ ಕಣಿವೆಯಲ್ಲಿ ಮೇಘಸ್ಫೋಟದಿಂದಾಗಿ, ಸಿಯುಂಡ್‌ನಲ್ಲಿರುವ NHPC ಯ ಪವರ್ ಹೌಸ್‌ನಲ್ಲಿ ನಿಯೋಜಿಸಲಾದ ಮೂರನೇ ಬೆಟಾಲಿಯನ್ ಪಾಂಡೋಹ್‌ನ ಗಾರ್ಡ್‌ನ ವಸತಿ ಕೊಠಡಿ ಹಾನಿಗೊಳಗಾಗಿದೆ. ಇಲ್ಲಿ ನಿಯೋಜಿಸಲಾದ ಸುಮಾರು 10 ಪೊಲೀಸ್ ಜವಾನ್‌ಗಳು ಧರಿಸಿದ್ದ ಬಟ್ಟೆಗಳನ್ನು ಬಿಟ್ಟು ಎಲ್ಲವೂ ಕೊಚ್ಚ ಹೋಗಿದೆ. ಸೈನಿಕರ 3-4 ಶಸ್ತ್ರಾಸ್ತ್ರಗಳೂ ಕೂಡಾ ಕೊಚ್ಚಿ ಹೋಗಿವೆ. ಒಬ್ಬ ಪೊಲೀಸ್ ಜವಾನ್ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಕುಲ್ಲು ಆಸ್ಪತ್ರೆಗೆ ಕರೆತರಲಾಗಿದೆ.

2000 ಪ್ರವಾಸಿಗರಿಗೆ ಸಂಕಷ್ಟ
ಕುಲುವಿನಲ್ಲಿ ರಣಪ್ರವಾಹಕ್ಕೆ ಇಬ್ಬರು ಬಲಿಯಾಗಿದ್ದಾರೆ, ಸ್ಥಳೀಯ ಮಾಹಿತಿ ಪ್ರಕಾರ ಅಪ್ಪ-ಮಗಳು ಸೇರಿದಂತೆ ಮೂವರು ಕೊಚ್ಚಿಹೋಗಿರುವ ಶಂಕೆಯಿದೆ. ಧರ್ಮಶಾಲಾ ಬಳಿಯ ಖಾನಿಯಾರಾದ ಮನುನಿ ಖಾದ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಜಲವಿದ್ಯುತ್ ಯೋಜನೆಯ 10ಕ್ಕೂ ಹೆಚ್ಚು ಕಾರ್ಮಿಕರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ, ಇಬ್ಬರ ಶವಗಳನ್ನು ಹೊರತೆಗೆಯಲಾಗಿದೆ. ಎಸ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಸೈನ್ಜ್ ಕಣಿವೆಯ ಶಂಶಾರ್, ಶಂಘಾಡ್ ಮತ್ತು ಸುಚೈಹಾನ್ ಪಂಚಾಯತ್ ಪ್ರದೇಶಗಳಲ್ಲಿ 2,000 ಕ್ಕೂ ಹೆಚ್ಚು ಪ್ರವಾಸಿಗರು ಮತ್ತು 150ಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಸಿಲುಕಿಕೊಂಡಿವೆ, 25 ಪ್ರವಾಸಿಗರು ಲಹೌಲ್‌ನಲ್ಲಿಯೂ ಸಿಲುಕಿಕೊಂಡಿದ್ದಾರೆ.

Himachal Pradesh Flood 2 1

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ಮತ್ತು ಸ್ಥಳೀಯ ರಕ್ಷಣಾ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ, ಆದರೆ ರಸ್ತೆಗಳ ಹಾನಿಯಿಂದಾಗಿ ಕೆಲವು ಪ್ರದೇಶಗಳಿಗೆ ತಲುಪುವುದು ಕಷ್ಟವಾಗಿದೆ. ಉನಾ, ಬಿಲಾಸ್ಪುರ್, ಹಮೀರ್ಪುರ್, ಚಂಬಾ, ಕಾಂಗ್ರಾ, ಮಂಡಿ, ಸೋಲನ್ ಮತ್ತು ಸಿರ್ಮೌರ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕುಲ್ಲು ಮತ್ತು ಶಿಮ್ಲಾ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಲಾಗಿದೆ. ಮುಂದಿನ 24 ಗಂಟೆಗಳಲ್ಲಿ, ಕೆಲವು ಜಲಾನಯನ ಪ್ರದೇಶಗಳು ಮತ್ತು ಹಿಮಾಚಲ ಪ್ರದೇಶದ ಚಂಬಾ, ಕಾಂಗ್ರಾ, ಮಂಡಿ, ಶಿಮ್ಲಾ ಮತ್ತು ಸಿರ್ಮೌರ್ ಜಿಲ್ಲೆಗಳ ಪಕ್ಕದ ಪ್ರದೇಶಗಳಲ್ಲಿ ಹಗುರದಿಂದ ಮಧ್ಯಮ ಪ್ರವಾಹ ಉಂಟಾಗುವ ಸಾಧ್ಯತೆಯಿದೆ. ಸ್ಥಳೀಯ ಆಡಳಿತ ತುರ್ತು ಕ್ರಮ ತೆಗೆದುಕೊಳ್ತಿದೆ.

TAGGED:Cloudburstfloodhimachal pradeshಕುಲುಮೇಘಸ್ಫೋಟಹಿಮಾಚಲ ಪ್ರದೇಶ
Share This Article
Facebook Whatsapp Whatsapp Telegram

Cinema news

nora fatehi gets into an accident suffered a concussion after a drunk driver rammed into her car
ನೋರಾ ಫತೇಹಿ ಕಾರಿಗೆ ಡಿಕ್ಕಿ – ಅಪಾಯದಿಂದ ನಟಿ ಪಾರು
Cinema Latest South cinema
Rashmika Mandanna and Vijay Deverakondas Wedding AI Photos
ಶ್ರೀವಲ್ಲಿ ಮದ್ವೇಲಿ ಪ್ರಭಾಸ್, ಪ್ರಿನ್ಸ್; ವೈರಲ್ ಹಿಂದಿನ ಅಸಲಿಯತ್ತೇನು?
Cinema Latest South cinema Top Stories
Prabhas 2
ದಿ ಸ್ಕ್ರಿಪ್ಟ್ ಕ್ರಾಫ್ಟ್ ಕಿರುಚಿತ್ರೋತ್ಸವಕ್ಕೆ ಪ್ರಭಾಸ್ ಚಾಲನೆ
Cinema Latest South cinema
Bharti Singh Haarsh Limbachiyaa
ಹಾಸ್ಯನಟಿ ಭಾರ್ತಿ ಸಿಂಗ್‌, ಹರ್ಷ್‌ ಲಿಂಬಾಚಿಯಾ ದಂಪತಿಗೆ 2ನೇ ಮಗು ಜನನ
Bollywood Cinema Latest Top Stories

You Might Also Like

Droupadi Murmu
Bengaluru City

ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರಲ್ಲಿ ವಿಡಿಯೋ ʻಡೀಪ್‌ ಫೇಕ್‌ʼ – ಎಫ್‌ಐಆರ್‌ ದಾಖಲು

Public TV
By Public TV
3 minutes ago
GBA Dog
Bengaluru City

ಬೀದಿ ನಾಯಿಗಳ ಹೆಸ್ರಲ್ಲಿ ಲೂಟಿ ಮಾಡ್ತಿದ್ಯಾ ಜಿಬಿಎ? – ಶೆಡ್‌ ನಿರ್ಮಾಣಕ್ಕೆ 50 ಲಕ್ಷದ ಟೆಂಡರ್

Public TV
By Public TV
30 minutes ago
Haveri
Crime

ಹಾನಗಲ್ ಗ್ಯಾಂಗ್‌ರೇಪ್‌ ಪ್ರಕರಣ – 7 ಆರೋಪಿಗಳು ಯಾದಗಿರಿಗೆ ಗಡಿಪಾರು

Public TV
By Public TV
58 minutes ago
belur hospital scanning machine theft case action recommended against employee
Districts

ಬೇಲೂರು ಆಸ್ಪತ್ರೆ ಸ್ಕ್ಯಾನಿಂಗ್ ಮಷಿನ್ ಕಳವು – ನೋಡಿಯೂ ನೋಡದಂತಿದ್ದ ನೌಕರನ ವಿರುದ್ಧ ಕ್ರಮಕ್ಕೆ ಶಿಫಾರಸು

Public TV
By Public TV
59 minutes ago
ashok rai
Dakshina Kannada

ನಿರ್ಬಂಧದ ನಡುವೆಯೂ ಕೋಳಿ ಅಂಕ; ಪುತ್ತೂರು ಶಾಸಕ ಅಶೋಕ್‌ ರೈ ಸೇರಿ 17 ಮಂದಿ ವಿರುದ್ಧ ಕೇಸ್‌

Public TV
By Public TV
9 hours ago
Information Commissioner Badruddin K Harish Kumar 2
Districts

30 ದಿನದೊಳಗೆ ಮಾಹಿತಿ ನೀಡದಿದ್ದರೆ 25 ಸಾವಿರ ದಂಡ, ತಪ್ಪಿದ್ದಲ್ಲಿ 5 ವರ್ಷ ಜೈಲು – ಅಧಿಕಾರಿಗಳಿಗೆ ಆಯುಕ್ತರಿಂದ ಕ್ಲಾಸ್‌

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?