ಪಂಚಾಂಗ
ವಾರ: ಸೋಮವಾರ. ತಿಥಿ: ಪೌರ್ಣಮಿ
ನಕ್ಷತ್ರ: ಮೂಲ
ಶ್ರೀ ಪರಾಭವ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ನಿಜ ಜೇಷ್ಠ ಮಾಸ, ಶುಕ್ಲ ಪಕ್ಷ
ರಾಹುಕಾಲ: 7:38 ರಿಂದ 9:14
ಗುಳಿಕಕಾಲ: 2:02 ರಿಂದ 3:38
ಯಮಗಂಡಕಾಲ: 10:50 ರಿಂದ 12:26
ಮೇಷ: ಸ್ನೇಹಿತರಿಂದ ಸಹಾಯ, ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ಥಿರಾಸ್ತಿ ಖರೀದಿ.
ವೃಷಭ: ಮಹಿಳೆಯರಿಗೆ ಶುಭ ಸಮಯ, ಸಾಲಗಳಿಂದ ದೂರವಿರುವುದು ಉತ್ತಮ, ಕೆಲಸದ ಒತ್ತಡ, ಆರೋಗ್ಯದಲ್ಲಿ ಏರುಪೇರು.
ಮಿಥುನ: ಶ್ರಮಕ್ಕೆ ತಕ್ಕ ಫಲ, ಧರ್ಮಕಾರ್ಯದಿಂದ ಮನಶಾಂತಿ, ಸುಖ ಭೋಜನ, ಹಿತ ಶತ್ರುಗಳಿಂದ ತೊಂದರೆ.
ಕಟಕ: ಗುರುಹಿರಿಯರ ಭೇಟಿ, ಸಾಧಾರಣ ಲಾಭ, ಸಣ್ಣ ಮಾತಿನಿಂದ ಕಲಹ, ದುರಾಲೋಚನೆ, ಆದಾಯ ಕಡಿಮೆ ಅಧಿಕ ಖರ್ಚು.
ಸಿಂಹ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ ಎಚ್ಚರ, ಧನ ನಷ್ಟ, ನಂಬಿಕಸ್ತರಿಂದ ಮೋಸ.
ಕನ್ಯಾ: ಪರರಿಂದ ಸಹಾಯ, ಮನಸ್ಸಿನಲ್ಲಿ ಗೊಂದಲ, ವಿದೇಶ ಪ್ರಯಾಣ, ತೀರ್ಥಯಾತ್ರೆ ದರ್ಶನ, ಉದ್ಯೋಗದಲ್ಲಿ ಬಡ್ತಿ.
ತುಲಾ: ಸಲ್ಲದ ಅಪವಾದ ನಿಂದನೆ, ಅಲ್ಪ ಕಾರ್ಯ ಸಿದ್ದಿ, ಅನರ್ಥ, ನಾನಾ ರೀತಿಯ ತೊಂದರೆ, ವೃಥಾ ತಿರುಗಾಟ.
ವೃಶ್ಚಿಕ: ಸ್ತ್ರೀ ಸೌಖ್ಯ, ಅವಿವಾಹಿತರಿಗೆ ವಿವಾಹ ಯೋಗ, ಕೃಷಿಕರಿಗೆ ಲಾಭ, ಬಾಕಿ ಹಣ ಕೈ ಸೇರುವುದು, ವಿಪರೀತ ವ್ಯಸನ.
ಧನಸ್ಸು: ಮಾತಿನ ಚಕಮಕಿ, ಕೆಲಸ ಕಾರ್ಯಗಳಲ್ಲಿ ಜಯ, ಸ್ಥಳ ಬದಲಾವಣೆ, ವಿವಾಹ ಯೋಗ.
ಮಕರ: ನೀಚ ಜನರಿಂದ ದೂರವಿರಿ, ದ್ರವ್ಯ ಲಾಭ, ಬಂಧುಗಳಲ್ಲಿ ಮನಸ್ತಾಪ, ಆರೋಗ್ಯ ಪ್ರಾಪ್ತಿ, ಹಿರಿಯರಿಂದ ಬೋಧನೆ.
ಕುಂಭ: ಪ್ರಿಯ ಜನರ ಭೇಟಿ, ಯತ್ನ ಕಾರ್ಯ ಅನುಕೂಲ, ಋಣ ಬಾಧೆಯಿಂದ ಮುಕ್ತಿ, ಕಾರ್ಯ ಸಾಧನೆಗಾಗಿ ತಿರುಗಾಟ.
ಮೀನ: ಇಷ್ಟಾರ್ಥ ಸಿದ್ಧಿ, ನೆಮ್ಮದಿ ಇಲ್ಲದ ಜೀವನ, ಅಧಿಕ ಕೋಪ, ಮಕ್ಕಳಿಂದ ಸಹಾಯ, ಮಾತಿನಲ್ಲಿ ಹಿಡಿತವಿರಲಿ.
