ನವದೆಹಲಿ: ಪದ್ಮಭೂಷಣ ಸಮಾರಂಭದ ನಂತರ ರಾಷ್ಟ್ರಪತಿಯವರು ನೀಡಿದ ಹೈ ಟೀ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Narendra Modi) ಹಿರಿಯ ನಟ ಅನಂತನಾಗ್ (Ananth Nag) ಅವರನ್ನು ಮಾತನಾಡಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮೇ 27 ರಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕನ್ನಡದ ಹಿರಿಯ ನಟ ಅನಂತ್ ನಾಗ್ (Anant Nag), ರಿಕಿ ಕೇಜ್ (Ricky Kej), ಪ್ರಶಾಂತ್ ಪ್ರಕಾಶ್, ವೆಂಕಪ್ಪ ಅಂಬಾಜಿ ಸುಗಟೇಕರ್ ಸೇರಿದಂತೆ ದೇಶಾದ್ಯಂತ 68 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ ಮಾಡಿದ್ದರು. ಇದನ್ನೂ ಓದಿ: ಪದ್ಮ ಪ್ರಶಸ್ತಿ; ಕನ್ನಡದ ಹಿರಿಯ ನಟ ಅನಂತ್ ನಾಗ್, ರಿಕಿ ಕೇಜ್ ಸೇರಿ 68 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ
ಅನಂತ್ ನಾಗ್ ಕನ್ನಡ ಚಲನಚಿತ್ರ ರಂಗದ ಹಿರಿಯ ನಟರಾಗಿ ಅನಂತ್ ನಾಗ್ ಖ್ಯಾತಿ ಗಳಿಸಿದ್ದಾರೆ. ಕಳೆದ 5 ದಶಕಗಳಲ್ಲಿ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗೆ ಮತ್ತು ತಮ್ಮ ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿದ್ದಾರೆ. ಸಿನಿಮಾ ರಂಗದಲ್ಲಿ ಸಾಧನೆಗೆ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿಯನ್ನು ಕನ್ನಡಿಗರಿಗೆ ಅರ್ಪಿಸುತ್ತೇನೆ: ಅನಂತ್ನಾಗ್