– ನೆರವು ನೀಡಿದ ಡಿಕೆಶಿಗೆ ಚಂದ್ರಬಾಬು ನಾಯ್ಡು ಧನ್ಯವಾದ
ಅಮರಾವತಿ: ಮುರಸು ಚಂಡಮಾರುತ 14 ವರ್ಷದಲ್ಲೇ ಪ್ರಬಲ ಚಂಡಮಾರುತ (Cyclone) ಇದಾಗಿದ್ದು, ಅಬ್ಬರಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ. ಬರೋಬ್ಬರಿ 344 ಕೋಟಿ ನಷ್ಟವಾಗಿದೆ.
ಆಂಧ್ರಪ್ರದೇಶದ (Andhra Pradesh) ಕರಾವಳಿ (Karavali) ಭಾಗದಲ್ಲಿ ಮುರಸು ಚಂಡಮಾರುತ ಭಾರಿ ನಷ್ಟವನ್ನುಂಟು ಮಾಡಿದೆ. ಸೋಮವಾರ (ನ.2) ತಡರಾತ್ರಿ ಅಪ್ಪಳಿಸಿದ ಈ ಬಿರುಗಾಳಿ ಮಳೆಯು, ಮಂಗಳವಾರ (ನ.3) ಬೆಳಗಿನ ಜಾವ ಕರಾವಳಿ ದಾಟಿ ದುರ್ಬಲಗೊಂಡಿದೆ. ಆದರೆ ಇದರ ಪ್ರಭಾವದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇದನ್ನೂ ಓದಿ: US Midterm Elections| ಹಲವು ಕ್ಷೇತ್ರಗಳಲ್ಲಿ ಡೆಮಾಕ್ರಟ್ಗಳ ಮುನ್ನಡೆ, ಟ್ರಂಪ್ಗೆ ಹಿನ್ನಡೆ
ಚಂಡಮಾರುತದ ಸಂಬಂಧಿತ ಅವಘಡಗಳಿಗೆ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ಸುಮಾರು 1.75 ಲಕ್ಷ ಜನರು ಸಂಕಷ್ಟಕ್ಕೀಡಾಗಿದ್ದು, 10,000ಕ್ಕೂ ಅಧಿಕ ಜನರನ್ನು 171 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಒಟ್ಟು 312 ಮನೆಗಳು ಹಾನಿಗೀಡಾಗಿವೆ.
ಕಳೆದ 14 ವರ್ಷಗಳಲ್ಲೇ ಅತ್ಯಂತ ಪ್ರಚಂಡ ಸೈಕ್ಲೋನ್ ಎಂದು ಕರೆಯಲ್ಪಡುತ್ತಿರುವ ಮುರಸು 15 ಜಿಲ್ಲೆಗಳಲ್ಲಿ 30,000 ಹೆಕ್ಟೇರ್ಗೂ ಅಧಿಕ ಕೃಷಿ ಭೂಮಿಯಲ್ಲಿನ ಬೆಳೆಗಳನ್ನು ನಾಶಪಡಿಸಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಅಂದಾಜು 344 ಕೋಟಿ ರೂ. ನಷ್ಟ ಸಂಭವಿಸಿದೆ.
ಸಂಕಷ್ಟದಲ್ಲಿರುವ ಆಂಧ್ರಪ್ರದೇಶಕ್ಕೆ ಬೆಂಬಲವಾಗಿ ನಿಂತಿರುವ ಕರ್ನಾಟಕ ಸರ್ಕಾರ, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ ವಿಶೇಷ ತಂಡಗಳನ್ನು ಕಳುಹಿಸಿಕೊಟ್ಟಿದೆ. ಈ ಮಾನವೀಯ ನೆರವಿಗಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದನ್ನೂ ಓದಿ: ಚಿರತೆ ದಾಳಿಗೆ ವ್ಯಕ್ತಿ ಬಲಿ – ಗ್ರಾಮಸ್ಥರಲ್ಲಿ ಆತಂಕ
