ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ (Pahalgam Terrorist Attack) ದಾಳಿಗೆ 26 ಮಂದಿ ಅಮಾಯಕರು ಬಲಿಯಾಗಿದ್ದಾರೆ. ಈ ಕುರಿತು ಹಲವು ನಟ, ನಟಿಯರು ಖಂಡಿಸಿದ್ದಾರೆ. ಇದೀಗ ಕಾರ್ಯಕ್ರಮವೊಂದರಲ್ಲಿ ವಿಜಯ್ ದೇವರಕೊಂಡ (Vijay Devarakonda) ಮಾತನಾಡಿ, ಕಾಶ್ಮೀರ ಎಂದಿಗೂ ಭಾರತಕ್ಕೆ ಸೇರಿದ್ದು, ಪಾಕ್ ಮೇಲೆ ದಾಳಿ ಮಾಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಭಾರತ ಹಿಂದೂಗಳಂತೆ ಮುಸ್ಲಿಮರಿಗೂ ಸೇರಿದೆ – ಪಹಲ್ಗಾಮ್ ದಾಳಿ ಬಗ್ಗೆ ರಾಖಿ ಸಾವಂತ್ ಮಾತು
ಸೂರ್ಯ ನಟನೆಯ ‘ರೆಟ್ರೋ’ ಸಿನಿಮಾ (Retro Film) ಪ್ರೀ- ರಿಲೀಸ್ ಕಾರ್ಯಕ್ರಮಕ್ಕೆ ವಿಜಯ್ ಅತಿಥಿಯಾಗಿ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ವಿಜಯ್ ದೇವರಕೊಂಡ, ಉಗ್ರರ ದಾಳಿಗೆ ಅಮಾಯಕರ ಪ್ರಾಣಪಕ್ಷಿ ಹಾರಿ ಹೋಗಿದೆ. ಮತ್ತೆ ಇಂಥಹ ಕೃತ್ಯ ಮರುಕಳಿಸಬಾರದು ಅಂದರೆ ಶತ್ರುಗಳ ಬಾಲ ಕಟ್ ಮಾಡಲೇಬೇಕು. ಅದಕ್ಕಾಗಿ ಭಾರತೀಯ ಸೈನ್ಯ ಉಗ್ರರನ್ನು ಪತ್ತೆ ಮಾಡುತ್ತಿದ್ದಾರೆ. ಕಾಶ್ಮೀರ ಎಂದೆಂದಿಗೂ ಭಾರತಕ್ಕೆ ಸೇರಿದ್ದು, ಭಾರತೀಯರಿಗೆ ಮಾತ್ರವೇ ಸೇರಿದ್ದು ಅನ್ನೋದು ಸತ್ಯ ಎಂದಿದ್ದಾರೆ. ಇದನ್ನೂ ಓದಿ:ಭಾರತ ಹಿಂದೂಗಳಂತೆ ಮುಸ್ಲಿಮರಿಗೂ ಸೇರಿದೆ – ಪಹಲ್ಗಾಮ್ ದಾಳಿ ಬಗ್ಗೆ ರಾಖಿ ಸಾವಂತ್ ಮಾತು

View this post on Instagram
ಅಂದಹಾಗೆ, ಸೂರ್ಯ ಮತ್ತು ಪೂಜಾ ಹೆಗ್ಡೆ ನಟನೆಯ ‘ರೆಟ್ರೋ’ ತಮಿಳು ಚಿತ್ರ ಇದೇ ಮೇ 1ರಂದು ರಿಲೀಸ್‌ಗೆ ಸಿದ್ಧವಾಗಿದೆ.


