Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪ್ರಜ್ವಲ್‌ ಮೊಬೈಲ್ ಕಳೆದಿದೆ, ಸಾಕ್ಷ್ಯ ನಾಶ ಮಾಡಿದ್ದಾರೆ ಅನ್ನೋದನ್ನ ಎಸ್ಐಟಿಯವರು ಹೇಳಿದ್ರೆ ಒಪ್ಪಿಕೊಳ್ತೇನೆ: ಪರಮೇಶ್ವರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪ್ರಜ್ವಲ್‌ ಮೊಬೈಲ್ ಕಳೆದಿದೆ, ಸಾಕ್ಷ್ಯ ನಾಶ ಮಾಡಿದ್ದಾರೆ ಅನ್ನೋದನ್ನ ಎಸ್ಐಟಿಯವರು ಹೇಳಿದ್ರೆ ಒಪ್ಪಿಕೊಳ್ತೇನೆ: ಪರಮೇಶ್ವರ್

Bengaluru City

ಪ್ರಜ್ವಲ್‌ ಮೊಬೈಲ್ ಕಳೆದಿದೆ, ಸಾಕ್ಷ್ಯ ನಾಶ ಮಾಡಿದ್ದಾರೆ ಅನ್ನೋದನ್ನ ಎಸ್ಐಟಿಯವರು ಹೇಳಿದ್ರೆ ಒಪ್ಪಿಕೊಳ್ತೇನೆ: ಪರಮೇಶ್ವರ್

Public TV
Last updated: May 31, 2024 6:21 pm
Public TV
Share
2 Min Read
PARAMESHWAR 1
SHARE

ಬೆಂಗಳೂರು: ಪ್ರಜ್ವಲ್‌ ಮೊಬೈಲ್‌ (Prajwal Moblie) ಕಳೆದಿದೆ, ಸಾಕ್ಷ್ಯ (Evidence) ನಾಶ ಮಾಡಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಎಸ್ಐಟಿಯವರು ಆ ಮಾತನ್ನ ಹೇಳಿದ್ರೆ ಒಪ್ಪಿಕೊಳ್ತೀನಿ. ಬೇರೆ ಬೇರೆ ಮೂಲಗಳಿಂದ ಬರುವ ಮಾಹಿತಿಯನ್ನ ಒಪ್ಪಲು ಆಗುವುದಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (G Parameshwara) ಹೇಳಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಬಂಧನದ ನಂತರ ಪ್ರಕರಣದ ಕುರಿತು ಅಧಿಕಾರಿಗಳ ಜೊತೆ ಯಾವುದೇ ರೀತಿಯ ಚರ್ಚೆ ಮಾಡಿಲ್ಲ. ಚಂದ್ರಶೇಖರ್ ಕುಟುಂಬಕ್ಕೆ ಸಾಂತ್ವನ ಹೇಳಲು ನಿನ್ನೆ ಶಿವಮೊಗ್ಗಕ್ಕೆ ಹೋಗಿದ್ದೆ. ತಡವಾಗಿ ಬಂದ ಹಿನ್ನೆಲೆಯಲ್ಲಿ ಚರ್ಚಿಸಲು ಸಾಧ್ಯವಾಗಿಲ್ಲ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಎಸ್ಐಟಿ ನೋಡಿಕೊಳ್ಳುತ್ತದೆ‌ ಎಂದಿದ್ದಾರೆ.

ಪ್ರಜ್ವಲ್ ಬಂಧನವಾಗಲು ತಡವಾಗಿದ್ದರಿಂದ ಸಾಕಷ್ಟು ಸಂತ್ರಸ್ತ ಮಹಿಳೆಯರು ದೂರು ಕೊಡಲು ಮುಂದೆ ಬಂದಿರಲಿಲ್ಲ. ಈಗ ಪ್ರಜ್ವಲ್ ಬಂಧನವಾಗಿದೆ. ಸಂತ್ರಸ್ತ ಮಹಿಳೆಯರಲ್ಲಿ ಏನಾದರು ಮನವಿ ಮಾಡ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರಿಗೆ ತೊಂದರೆ ಆಗಿದೆ? ಅವರು ಪೊಲೀಸರ ಮುಂದೆ ಬಂದು ದೂರು ಕೊಡಬಹುದು. ಎಸ್ಐಟಿ ಮುಂದೆ ಹೇಳಬಹುದು ಎಂದು ಮೊದಲೇ ತಿಳಿಸಲಾಗಿದೆ. ಅಂತಹವರಿಗೆ ಎಲ್ಲ ರೀತಿಯ ರಕ್ಷಣೆ ಕೊಡುತ್ತೇವೆ ಎಂಬುದನ್ನು ಹೇಳಿದ್ದೇವೆ. ಸಂತ್ರಸ್ತೆಯರಿಗಾಗಿ ತೆರಯಲಾದ ಸಹಾಯವಾಣಿ (SIT HelpLine) ವಿಚಾರದ ಕುರಿತು ಹೆಚ್ಚು ತಿಳಿದುಕೊಳ್ಳಲು ಹೋಗಿಲ್ಲ. ಕೆಲವು ವಿಚಾರವನ್ನ ಎಸ್ಐಟಿಯವರು (SIT) ಗೌಪ್ಯವಾಗಿ ಇಟ್ಟುಕೊಳ್ಳುತ್ತಾರೆ. ಅಂತಹ ವಿಚಾರಗಳ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ಹೋಗಲ್ಲ ಎಂದು ಹೇಳಿದ್ದಾರೆ.

ಇನ್ನು ಪ್ರಜ್ವಲ್‌ ಪ್ರಕರಣದಲ್ಲಿ ಅವರ ಮೊಬೈಲ್ ಕಳೆದಿದೆ, ಸಾಕ್ಷ್ಯ ನಾಶ ಮಾಡಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಎಸ್ಐಟಿಯವರು ಆ ಮಾತನ್ನ ಹೇಳಿದರೆ ಒಪ್ಪಿಕೊಳ್ಳುತ್ತೇನೆ. ಬೇರೆ ಬೇರೆ ಮೂಲಗಳಿಂದ ಬರುವ ಮಾಹಿತಿಯನ್ನ ಒಪ್ಪಲು ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ನನ್ನ ಆಯ್ಕೆ ರಾಹುಲ್‌ ಗಾಂಧಿ – ಬೆಂಬಲಿಸಿದ ಮಲ್ಲಿಕಾರ್ಜುನ ಖರ್ಗೆ

ಇದೇ ವೇಳೆ ಪ್ರಜ್ವಲ್ ಬಂಧನ ಪ್ರಕ್ರಿಯೆ ವಿಳಂಬದ ಕುರಿತು ಪ್ರತಿಕ್ರಿಯಿಸಿ, ಪ್ರಜ್ವಲ್ ನಮ್ಮ ದೇಶದ ಯಾವುದೇ ರಾಜ್ಯದಲ್ಲಿ ಇದ್ದಿದ್ದರೂ ನಮ್ಮ ತಂಡವನ್ನು ಕಳುಹಿಸಿ ಕರೆದುಕೊಂಡು ಬರಬಹುದಿತ್ತು. ಹೊರ ದೇಶದಲ್ಲಿದ್ದ ಕಾರಣಕ್ಕೆ ತಡವಾಗಿದೆ. ಆರೋಪಿ ಹೊರ ದೇಶದಲ್ಲಿದ್ದಾಗ ಬಂಧಿಸಲು ಅದಕ್ಕೇ ಆದಂತಹ ಪ್ರಕ್ರಿಯೆಗಳಿವೆ. ಇಲ್ಲಿಂದ 4 ಜನ ಇನ್ಸ್‌ಪೆಕ್ಟರ್‌ಗಳನ್ನ ಅಥವಾ ಹಿರಿಯ ಅಧಿಕಾರಿಗಳನ್ನು ಕಳುಹಿಸಿ ಎತ್ತಾಕಿಕೊಂಡು ಬನ್ನಿ ಅಂತ ಹೇಳೋಕೆ ಆಗಲ್ಲ. ನಮ್ಮ ದೇಶಕ್ಕೂ ಬೇರೆ ದೇಶಕ್ಕೂ ರಾಜತಾಂತ್ರಿಕ ಒಪ್ಪಂದಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಅದನ್ನೆಲ್ಲ ಪಾಲಿಸಬೇಕಾಗುತ್ತದೆ. ಸಿಬಿಐ ಮೂಲಕ ಇಂಟರ್‌ಪೋಲ್‌ನವರಿಗೆ ನೋಟಿಸ್ ಕಳುಹಿಸಿ, ಅಲ್ಲಿಂದ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆಯನ್ನು ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ಪ್ರಜ್ವಲ್‌ ಶರಣಾಗುತ್ತೇನೆ ಅಂದಿದ್ದು ಏಕೆ?
ಎಸ್ಐಟಿ ತಂಡ ಕೈಗೊಂಡಿದ್ದ ಕಾನೂನು ಪ್ರಕ್ರಿಯೆಗಳ ಕುರಿತು ತಿಳಿದಕೊಂಡಿದ್ದ ಪ್ರಜ್ವಲ್ 31ರಂದು ಬರುವುದಾಗಿ ಹೇಳಿದ್ದರು. ಫಲಿತಾಂಶ ಬೇರೆ ರೀತಿಯಲ್ಲಿ ಬಂದರೆ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದಾಗುತ್ತದೆ. ಇದನ್ನೆಲ್ಲ ಅರ್ಥ ಮಾಡಿಕೊಂಡು ಶರಣಾಗುತ್ತೇನೆ ಅಂತ ಹೇಳಿದ್ದರು ಅನ್ನಿಸುತ್ತದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಶನಿವಾರ ರಾಜ್ಯಾದ್ಯಂತ ಯುವಮೋರ್ಚಾದಿಂದ ರಸ್ತೆತಡೆ

ಕೆ.ಆರ್ ನಗರ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ನಲ್ಲಿ ಸಾ.ರಾ ಮಹೇಶ್ ಕೈವಾಡ ಕುರಿತು ಪ್ರತಿಕ್ರಿಯಿಸಿ, ಸಾ.ರಾ ಮಹೇಶ್ ಹೆಸರು ಮಾಧ್ಯಮದಲ್ಲಿ ಬಂದಿರುವುದನ್ನು ನೋಡಿದ್ದೇನೆ. ಮೊದಲ ಬಾರಿಗೆ ಅವರ ಹೆಸರು ಕೇಳಿಬಂದಿದೆ, ಈ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದಿದ್ದಾರೆ.

TAGGED:G Parameshwaraprajwal revannaPrajwal Revanna Arrestsitಎಸ್‍ಐಟಿಪರಮೇಶ್ವರ್ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣಪ್ರಜ್ವಲ್ ರೇವಣ್ಣ
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ದೇಶಾದ್ಯಂತ ಅನ್ನದಾನ ಮಾಡಲು ಮುಂದಾದ ರಶ್ಮಿಕಾ-ವಿಜಯ್
Cinema Latest South cinema Top Stories
Rajath Kishan and Dog Satish
ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು
Bengaluru City Cinema Karnataka Latest Main Post Sandalwood
Vijay Sangeetha Sornalingam
ನಟಿ ಜೊತೆ ವಿವಾಹೇತರ ಸಂಬಂಧ ಆರೋಪ; ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ನಟ ವಿಜಯ್‌ ಪತ್ನಿ
Cinema Latest Main Post South cinema
The Kerala Story 2
‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಬಿಗ್‌ ರಿಲೀಫ್‌ – ರಿಲೀಸ್‌ಗಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌
Cinema Court Latest Main Post South cinema

You Might Also Like

Haveri Techie Family Stranded In Abu Dhabi
Districts

ಇರಾನ್ – ಇಸ್ರೇಲ್ ಯುದ್ಧ; ಅಬುಧಾಬಿಯಲ್ಲಿ ಸಿಲುಕಿದ ಹಾವೇರಿ ಮೂಲದ ಟೆಕ್ಕಿ ಕುಟುಂಬ

Public TV
By Public TV
8 minutes ago
modi Benjamin Netanyahu
Latest

ಇರಾನ್‌ ದಾಳಿಗೆ ಮೋದಿ ತೀವ್ರ ಖಂಡನೆ – ಬಿಕ್ಕಟ್ಟಿನ ಮಧ್ಯೆ ಇಸ್ರೇಲ್‌ ಪ್ರಧಾನಿಗೆ ಫೋನ್‌ ಕಾಲ್‌

Public TV
By Public TV
15 minutes ago
crude oil
Latest

ಯುದ್ಧ ಮುಂದುವರಿದರೆ ಭಾರತಕ್ಕೂ ಆರ್ಥಿಕ ಹೊಡೆತ – ತೈಲ ಬೆಲೆ ಏರಿಕೆ ಆತಂಕ!

Public TV
By Public TV
44 minutes ago
Iran Raises Red Flag Over Mosque After Khamenei Killing
Latest

ಪ್ರಸಿದ್ಧ ಶಿಯಾ ಮಸೀದಿ ಮೇಲೆ ಹಾರಿತು ಕೆಂಪು ಧ್ವಜ – ಪ್ರತೀಕಾರದ ಶಪಥ ಮಾಡಿದ ಇರಾನ್

Public TV
By Public TV
45 minutes ago
daily horoscope dina bhavishya
Astrology

ದಿನ ಭವಿಷ್ಯ: 2-3-2026

Public TV
By Public TV
1 hour ago
Basavaraj Rayareddy Daughter
Koppal

ಇಸ್ರೇಲ್‌-ಇರಾನ್‌ ಯುದ್ಧ; ದುಬೈನಲ್ಲಿ ಸಿಲುಕಿರೋ ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಪುತ್ರಿ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?