Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್‌ ಮಾಡ್ತಿದ್ರು: ಪ್ರಜ್ವಲ್‌ ವಿರುದ್ಧ ಮತ್ತೊಬ್ಬ ಸಂತ್ರಸ್ತೆ ದೂರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್‌ ಮಾಡ್ತಿದ್ರು: ಪ್ರಜ್ವಲ್‌ ವಿರುದ್ಧ ಮತ್ತೊಬ್ಬ ಸಂತ್ರಸ್ತೆ ದೂರು

Bengaluru City

ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್‌ ಮಾಡ್ತಿದ್ರು: ಪ್ರಜ್ವಲ್‌ ವಿರುದ್ಧ ಮತ್ತೊಬ್ಬ ಸಂತ್ರಸ್ತೆ ದೂರು

Public TV
Last updated: May 3, 2024 2:22 pm
Public TV
Share
3 Min Read
PRAJWAL REVANNA 2 1
SHARE

– ಲೈಂಗಿಕ ದೌರ್ಜನ್ಯ, ಕೊಲೆ ಬೆದರಿಕೆ, ಬ್ಲ್ಯಾಕ್‌ಮೇಲ್‌; FIRನಲ್ಲಿ ಏನಿದೆ?

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ. ಸಿಐಡಿ ಸೈಬಲ್‌ ಸೆಲ್‌ನಲ್ಲಿ ಎಸ್‌ಐಟಿ ಮುಖ್ಯಸ್ಥರ ಮುಂದೆ ಸಂತ್ರಸ್ತೆ ನೀಡಿದ್ದ ಹೇಳಿಕೆ ಆಧರಿಸಿ ಎಫ್‌ಐಆರ್‌ ದಾಖಲಾಗಿದೆ.

ಎಫ್‌ಐಆರ್‌ನಲ್ಲಿ ಏನಿದೆ?: ಸಂತ್ರಸ್ತೆ ಹಾಸನದಲ್ಲಿ ಜನಪ್ರತಿನಿಧಿ ಆಗಿದ್ದರು. ಅವರು ನೀಡಿದ ದೂರಿನಲ್ಲಿ, ಸಾರ್ವಜನಿಕರ ಕೆಲಸ ಮಾಡಿಕೊಡುವುದಕ್ಕಾಗಿ ಎಂಎಲ್‌ಎ, ಎಂಪಿ ಹತ್ತಿರ ಆಗಾಗ್ಗೆ ಹೋಗುತ್ತಿದ್ದೆ. 2021 ರಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ ಸೀಟ್‌ ಕೊಡಿಸುವುದಕ್ಕೆ ಎಂಪಿ ಪ್ರಜ್ವಲ್‌ ರೇವಣ್ಣ ಹತ್ತಿರ ವಿನಂತಿ ಮಾಡಿದ್ದೆ. ಹಾಸನದ ಎಂಪಿ ಕಚೇರಿ ಹಾಗೂ ಕ್ವಾಟ್ರಸ್‌ಗೆ ಹೋಗಿದ್ದೆ. ಅಲ್ಲಿದ್ದ ಸಾರ್ವಜನಿಕರನ್ನೆಲ್ಲ ಮಾತನಾಡಿಸಿ ಕೊನೆಗೆ ನನ್ನ ಮೇಲೆ ರೂಂ ಒಳಗಡೆ ಕರೆದರು.

ನಾನು ಒಳಗೆ ಹೋದೆ. ಆಗ ಅವರು ನನ್ನ ಕೈ ಹಿಡಿದು ಎಳೆದುಕೊಂಡು ರೂಂ ಬಾಗಿಲನ್ನು ಹಾಕಿದರು. ಆಗ ನಾನು ಯಾಕೆ ಬಾಗಿಲು ಹಾಕುತ್ತಿದ್ದೀರಿ ಎಂದು ಕೇಳಿದೆ. ಆಗ ಅವರು ಏನು ಆಗಲ್ಲ ಅಂತ ನನ್ನನ್ನು ಬೆಡ್‌ ಮೇಲೆ ಕೂರಿಸಿಕೊಂಡರು. ಆಮೇಲೆ ಅವರು, ‘ನಿನ್ನ ಗಂಡ ತುಂಬಾ ಜೋರು ಸ್ವಲ್ಪ. ಕಡಿಮೆ ಮಾತನಾಡಲಿಕ್ಕೆ ಹೇಳು. ಇಲ್ಲ ಅಂದರೆ ಅವನನ್ನು ಬಿಡಲ್ಲ. ನಿನ್ನ ಗಂಡ ಬೆಳೆಯಬೇಕು ಎಂದರೆ ನಾನು ಹೇಳಿದ ಹಾಗೆ ಮಾಡು’ ಎಂದರು. ಇದನ್ನೂ ಓದಿ: ರೇವಣ್ಣಗೆ ಸದ್ಯಕ್ಕಿಲ್ಲ ಬಂಧನ ಭೀತಿ- ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್

PRAJWAL REVANNA 1

ಆಮೇಲೆ ನನ್ನನ್ನು ಮಂಚದ ಮೇಲೆ ಮಲ್ಕೊ, ಬಟ್ಟೆ ಬಿಚ್ಚು ಅಂತ ಹೇಳಿದರು. ನಾನು ಬಿಚ್ಚಲ್ಲ ಎಂದೆ. ಅವರು ಬಿಚ್ಚುವಂತೆ ಒತ್ತಾಯಿಸಿದರು. ನಾನು ಕೂಗುತ್ತೇನೆ ಎಂದು ಹೇಳಿದ್ದಕ್ಕೆ, ‘ನನ್ನ ಹತ್ತಿರ ಗನ್‌ ಇದೆ. ನಾನು ಹೇಳಿದ ಹಾಗೆ ಕೇಳಲಿಲ್ಲ ಅಂದರೆ ನಿನ್ನ ಗಂಡ ಮತ್ತು ನಿನ್ನನ್ನು ಬಿಡುವುದಿಲ್ಲ’ ಎಂದು ಬೆದರಿಸಿದರು. ನನ್ನನ್ನು ಬಲತ್ಕಾರ ಮಾಡಲು ಪ್ರಯತ್ನಿಸಿದರು. ಆಗ ನಾನು ಎಷ್ಟೇ ಬೇಡಿಕೊಂಡರೂ ಬಿಡದೇ ಬಿಗಿಯಾಗಿ ನನ್ನ ಕೈಯನ್ನು ಹಿಡಿದುಕೊಂಡರು. ಕೂಗಬೇಡ ಅಂತ ಬೆದರಿಕೆ ಹಾಕಿದರು. ಆಗ ನಾನು ಭಯಪಟ್ಟೆ. ಅವರು ಮೊಬೈಲ್‌ ತೆಗೆದರು. ನಾನು ಭಯದಿಂದ ಹೆದರಿ ಅವರು ಹೇಳಿದ ಹಾಗೆ ಕೇಳಿದೆ. ಅವರು ಹೇಳಿದಂತೆ ನಡೆದುಕೊಂಡೆ.

ಅವರು ನನ್ನನ್ನು ಬಲತ್ಕಾರ ಮಾಡುತ್ತಾ ಲೈಂಗಿಕ ದೌರ್ಜನ್ಯ ಮಾಡಿ ಅದನ್ನು ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿಕೊಂಡರು. ಆಮೇಲೆ ನೀನೇನಾದರು ಈ ವಿಚಾರವನ್ನು ಬಾಯಿಬಿಟ್ಟರೆ ನಿನ್ನ ವೀಡಿಯೋವನ್ನು ಸಾರ್ವಜನಿಕರಿಗೆ ಬಿಡುತ್ತೇನೆ. ಈ ವೀಡಿಯೋದಲ್ಲಿ ನನ್ನ ಮುಖ ಇಲ್ಲ. ನಿನ್ನದೇ ಮಾನ ಮರ್ಯಾದೆ ಹೋಗೋದು ಎಂದು ಹೇಳಿ ನನ್ನನ್ನು ಭಯಪಡಿಸಿದರು. ವೀಡಿಯೋವನ್ನು ಹೀಗೆ ಇಟ್ಟುಕೊಂಡಿರುತ್ತೇನೆ. ನಾನು ಕರೆದಾಗಲೆಲ್ಲ ನೀನು ನನ್ನ ಜೊತೆ ಮಲಗಲು ಬರಬೇಕು. ಇಲ್ಲ ಅಂದರೆ ವೀಡಿಯೋ ಬಹಿರಂಗಪಡಿಸುತ್ತೇನೆ ಎಂದು ಬ್ಲಾಕ್‌ಮೇಲ್‌ ಮಾಡಿದರು.

ನಿನ್ನ ಗಂಡ ನನ್ನ ಜೊತೆ ಇರುತ್ತಾನೆ. ಅವನನ್ನು ಮುಗಿಸುತ್ತೇನೆ ಎಂದು ನನ್ನನ್ನು ಬೆದರಿಸಿ ಭಯಪಡಿಸುತ್ತಾ ಪದೇ ಪದೇ ನನಗೆ ಫೋನ್‌ ಮಾಡುತ್ತಿದ್ದರು. ವೀಡಿಯೋ ಕಾಲ್‌ ಮಾಡಿ ನಿನ್ನ ದೇಹವನ್ನು ನಗ್ನವಾಗಿ ತೋರಿಸು. ಬಟ್ಟೆ ಬಿಚ್ಚು ಎಂದು ಪದೇ ಪದೇ ಪೀಡಿಸಿ ಮಾನಸಿಕವಾಗಿ ಹಿಂಸೆ ನೀಡಿ, ದೈಹಿಕವಾಗಿ ಅನೇಕ ಬಾರಿ ನನ್ನನ್ನು ಬಲವಂತವಾಗಿ ಬಲತ್ಕಾರ ಮಾಡಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿರುತ್ತಾನೆ.

ಆದ್ದರಿಂದ ಹಾಸನದ ಎಂಪಿ ಆದ ಪ್ರಜ್ವಲ್‌ ರೇವಣ್ಣ ನನ್ನನ್ನು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕೊಲೆ ಬೆದರಿಕೆ ಹಾಕಿ ಭಯಪಡಿಸಿ ಬಲವಂತವಾಗಿ ಬಲತ್ಕಾರ ಮಾಡುತ್ತಾ ಲೈಂಗಿಕ ದೌರ್ಜನ್ಯ ಮಾಡಿದರು. ಅದನ್ನು ವೀಡಿಯೋ ಚಿತ್ರೀಕರಣ ಮಾಡಿಕೊಂಡು ಸಾರ್ವಜನಿಕವಾಗಿ ಬಹಿರಂಗ ಮಾಡಿ ನನ್ನ ಮಾನ ಮರ್ಯಾದೆ ಹಾಳು ಮಾಡುತ್ತೇನೆಂದು ಬ್ಲಾಕ್‌ಮೇಲ್‌ ಮಾಡಿ ಹೆದರಿಸಿ ಪದೇ ಪದೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವೀಡಿಯೊ ಪ್ರಸಾರ ಮಾಡಿ ನನ್ನ ಮರ್ಯಾದೆ ಹಾಳು ಮಾಡಿರುವವರ ಮೇಲೆ ಕಾನೂನು ಕ್ರಮಕೈಗೊಳ್ಳಲು ಕೋರುತ್ತೇನೆ. ಅವರು ಬೆದರಿಕೆ ಹಾಕಿದ್ದಕ್ಕೆ ಭಯದಿಂದ ಹೆದರಿ ನನ್ನ ಮೇಲೆ ಆದ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿರಲಿಲ್ಲ. ಈಗ ಎಸ್‌ಐಟಿ ರಚನೆಯಾಗಿ ತನಿಖೆಯಾಗುತ್ತಿರುವುದರಿಂದ ನನಗಾಗಿರುವ ದೌರ್ಜನ್ಯಕ್ಕೆ ಈ ದಿನ ಬಂದು ದೂರು ನೀಡಿದ್ದೇನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

TAGGED:bengaluruFIRprajwal revannaಎಫ್‍ಐಆರ್ಪ್ರಜ್ವಲ್ ರೇವಣ್ಣಬೆಂಗಳೂರುಸಂತ್ರಸ್ತೆ
Share This Article
Facebook Whatsapp Whatsapp Telegram

Cinema news

Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories
Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories
Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories

You Might Also Like

Oracle
Latest

ಅಮೆರಿಕದ ಕಂಪನಿಯಿಂದ ಶಾಕ್‌ – ಭಾರತದಲ್ಲಿ 12,000 ಉದ್ಯೋಗ ಕಡಿತಗೊಳಿಸಿದ ಒರಾಕಲ್

Public TV
By Public TV
23 minutes ago
Narendra Modi
Latest

ಅಸ್ಸಾಂನಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಸಾಧನೆ ನಿಶ್ಚಿತ: ಪ್ರಧಾನಿ ಮೋದಿ ವಿಶ್ವಾಸ

Public TV
By Public TV
42 minutes ago
PM Modi Shivakumar Shri
Districts

ಕರುಣೆ, ವಿನಯದ ಪ್ರತಿರೂಪವಾಗಿ ನಮ್ಮೆಲ್ಲರ ಸ್ಮರಣೆಯಲ್ಲಿ ಸದಾ ಜೀವಂತ – ಶಿವಕುಮಾರ ಶ್ರೀಗಳಿಗೆ ಮೋದಿ ಭಾವಪೂರ್ಣ ನಮನ

Public TV
By Public TV
1 hour ago
Kalaburagi Khamenei Condolence 1
Districts

ಕಲಬುರಗಿ ಮಹಾನಗರ ಪಾಲಿಕೆ ಬಜೆಟ್‌ಗೂ ಮುನ್ನ ಖಮೇನಿ ಹತ್ಯೆಗೆ ಸಂತಾಪ

Public TV
By Public TV
1 hour ago
Emergency Exit Case
Bengaluru City

ವಿಮಾನದ ಎಮರ್ಜೆನ್ಸಿ ಎಕ್ಸಿಟ್ ಡೋರ್‌ ತೆಗೆಯಲು ಯತ್ನಿಸಿದ್ದವನಿಗೆ ಬುದ್ಧಿವಾದ – ಬೆಂಗ್ಳೂರು ಪೊಲೀಸರ ವಿರುದ್ಧ ʻಮಹಾʼ ಪೊಲೀಸರಿಗೆ ದೂರು

Public TV
By Public TV
2 hours ago
Russia Military Plane
Latest

Russian Military Plane Crash – ವಿಮಾನದಲ್ಲಿದ್ದ 29 ಪ್ರಯಾಣಿಕರು ಸಾವು, ತಾಂತ್ರಿಕ ದೋಷ ಶಂಕೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?