ಸೌತ್ ಬ್ಯೂಟಿ ಸಮಂತಾ (Samantha) ಅವರು ತಮ್ಮ ಅಭಿಮಾನಿಗಳ ಆಸೆಯಂತೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 6 ತಿಂಗಳ ನಂತರ ಮತ್ತೆ ಕ್ಯಾಮೆರಾ ಮುಂದೆ ಬರುವ ಬಗ್ಗೆ ಸ್ಯಾಮ್ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಸಮಂತಾ ಮಾತು ನಿಜನಾ? ಅಂತ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಸಹವಾಸವೇ ಬೇಡ ಅಂತ ವೃತ್ತಿರಂಗದಲ್ಲಿ ಬ್ಯುಸಿಯಾದರು. ‘ಪುಷ್ಪ’ (Pushpa) ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ಸಮಂತಾ ಲಕ್ ಬದಲಾಯ್ತು.
ಆದರೆ ಯಶೋದ (Yashoda) ಮತ್ತು ಖುಷಿ (Kushi) ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್ಗೆ 6 ತಿಂಗಳು ಹಿಡಿಯಿತು. ಇದೀಗ ಮತ್ತೆ ನಟನೆಗೆ ಮರಳುವ ಸುದ್ದಿ ನೀಡಿದ್ದಾರೆ ಸಮಂತಾ. ಇದನ್ನೂ ಓದಿ:ಕರಟಕ ದಮನಕ ಸಿನಿಮಾದ ‘ಡೀಗ ದಿಗರಿ’ ಹಾಡು ಇಂದು ರಿಲೀಸ್
ಬಣ್ಣ ಹಚ್ಚದೆ 6 ತಿಂಗಳು ಸಮಂತಾ ವನವಾಸ ಮುಗಿಸಿದ್ದಾರೆ. ಅಭಿಮಾನಿಗಳ ಕಮ್ಬ್ಯಾಕ್ ಪ್ರಶ್ನೆಗೆ ನಟಿ ವೀಡಿಯೋ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮತ್ತೆ ಶೀಘ್ರದಲ್ಲೇ ಬಣ್ಣ ಹಚ್ಚುವ ಸಂದೇಶ ಕೊಟ್ಟಿದ್ದಾರೆ. ವೆಬ್ಸಿರೀಸ್ಗಳಲ್ಲಿ ಬ್ಯುಸಿ ಇದ್ದ ಸ್ಯಾಮ್ ಟಾಲಿವುಡ್ನಲ್ಲಿ (Tollywood) ಹಲವು ಆಫರ್ಗಳಿಂದ ದೂರ ಉಳಿದಿದ್ದರು. ಇದೀಗ ಬಹಳ ಗ್ಯಾಪ್ ಆದ್ಮೇಲೆ ಬರುತ್ತಿರುವ ಸಮಂತಾ ರೀ ಎಂಟ್ರಿ ಹೇಗಿರುತ್ತೆ ಅನ್ನುವ ಬಗ್ಗೆ ಫ್ಯಾನ್ಸ್ಗೆ ಕುತೂಹಲವಿದೆ.
ಸದ್ಯ ಸಮಂತಾಗೆ ಟಾಲಿವುಡ್ ಮಾತ್ರವಲ್ಲ ಬಾಲಿವುಡ್ನಿಂದಲೂ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಹಾಗಾಗಿ ಸಮಂತಾ ಸಿನಿಮಾ ಮತ್ತು ಲುಕ್ ಹೇಗಿರಲಿದೆ ಎಂಬದನ್ನು ಕಾದುನೋಡಬೇಕಿದೆ.