Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಷ್ಟ್ರ ವಿಭಜನೆಯ ಮಾತೇ ಅಪರಾಧ – ಸುರೇಶ್ ದೇಶದ ಕ್ಷಮೆ ಕೋರಲಿ ಸುನೀಲ್‍ಕುಮಾರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ರಾಷ್ಟ್ರ ವಿಭಜನೆಯ ಮಾತೇ ಅಪರಾಧ – ಸುರೇಶ್ ದೇಶದ ಕ್ಷಮೆ ಕೋರಲಿ ಸುನೀಲ್‍ಕುಮಾರ್

Bengaluru City

ರಾಷ್ಟ್ರ ವಿಭಜನೆಯ ಮಾತೇ ಅಪರಾಧ – ಸುರೇಶ್ ದೇಶದ ಕ್ಷಮೆ ಕೋರಲಿ ಸುನೀಲ್‍ಕುಮಾರ್

Public TV
Last updated: February 2, 2024 6:20 pm
Public TV
Share
3 Min Read
Sunil Kumar
SHARE

ಬೆಂಗಳೂರು: ದೇಶ ವಿಭಜನೆ ಹೇಳಿಕೆ ನೀಡಿದ ಸಂಸದ ಡಿ.ಕೆ ಸುರೇಶ್ (DK Suresh) ಅವರಿಗೆ ಬುದ್ಧಿವಾದ ಹೇಳುವ ಕೆಲಸ ಆಗಬೇಕು. ಹೊರತು ಅವರನ್ನು ಸಮರ್ಥಿಸುವುದಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸುನೀಲ್‍ಕುಮಾರ್ (V. Sunil Kumar) ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಒಬ್ಬ ಜನಪ್ರತಿನಿಧಿಯಾಗಿದ್ದರೂ ಅನುದಾನ ಕಡಿಮೆ ಆಗಿದೆ ಎಂದು ದೇಶ ವಿಭಜನೆಯ ಮಾತನಾಡಿದ್ದಾರೆ. ಅದನ್ನು ಸಮರ್ಥನೆ ಮಾಡಿಕೊಂಡದ್ದು ನಾಚಿಕೆಗೇಡಿನ ಸಂಗತಿ. ಸಮರ್ಪಕ ಮಾಹಿತಿ ಇಲ್ಲದೆ, ದಕ್ಷಿಣ ಭಾರತ ವಿಭಜನೆ ಆಗಬೇಕು ಅನ್ನೋ ಕಲ್ಪನೆಯೇ ಸರಿಯಲ್ಲ. ಇವರದು ಹತಾಶೆಯ ಹೇಳಿಕೆ. ಯಾವುದೇ ಕಾರಣಕ್ಕೂ ದೇಶ ವಿಭಜನೆ ಆಗಬಾರದು ಎಂದರಲ್ಲದೆ, ಇವರ ಹೇಳಿಕೆಗೆ ಜನಾಕ್ರೋಶ ಶುರುವಾಗಿದೆ. ಅದನ್ನು ಸಮರ್ಥನೆ ಮಾಡಿಕೊಳ್ಳಬಾರದು ಎಂದು ತಿಳಿಸಿದರು.

 

ಎರಡೂವರೆ ವರ್ಷಗಳಾದ ಬಳಿಕ ಸಿದ್ದರಾಮಯ್ಯ (Siddaramaiah) ಅವರು ಡಿಕೆಶಿಗೆ (DK Shivakumar) ಅಧಿಕಾರ ಬಿಟ್ಟುಕೊಡಲಿಲ್ಲ ಎಂದು ರಾಮನಗರವನ್ನೇ ಪ್ರತ್ಯೇಕ ರಾಜ್ಯ ಮಾಡ್ತೀರಾ ಎಂದು ಕೇಳಿದರಲ್ಲದೆ, ಹತಾಶೆಯ ಮನೋಭಾವದಿಂದ ಬೇಜವಾಬ್ದಾರಿ ಹೇಳಿಕೆ ಕೊಡಬಾರದು ಎಂದು ಹೇಳಿದರು.  ಇದನ್ನೂ ಓದಿ: ಪ್ರಧಾನಿ ಮೋದಿ ಮುಂದಿನ ಪೀಳಿಗೆ ಬಗ್ಗೆ ಆಲೋಚನೆ ಮಾಡ್ತಾರೆ.. ಅದಕ್ಕೆ ಉಚಿತ ಕೊಡುಗೆ ಕೊಟ್ಟಿಲ್ಲ: ವಿಜಯೇಂದ್ರ

ಭಾರತ್ ಜೋಡೋ (Bharat Jodo) ಯಾವ ಉದ್ದೇಶವೋ, ದೇಶ ಜೋಡಿಸುವ ಉದ್ದೇಶ ಒಳ್ಳೆಯದೇ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಭಾರತ್ ಜೋಡೋ ಮಾಡುತ್ತಿದ್ದಾರೆ. ಇವರು ಭಾರತ ವಿಭಜನೆ ಮಾಡುವ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಮಾಜಿ ಸಚಿವ, ಕಾಂಗ್ರೆಸ್ ನಾಯಕ ಹಾಸನದ ಶಿವರಾಮ್ ಕಾಂಗ್ರೆಸ್ ನಾಯಕರು 50% ಕೇಳಿದ್ದಾರೆ ಅಂತ ಹೇಳಿಕೆ ನೀಡಿದ್ದಾರೆ. ಎಲ್ಲಾ ಇಲಾಖೆಗಳಲ್ಲಿ 50% ಆರೋಪ ಕೇಳಿಬಂದಿದೆ. ಬಿ.ಆರ್.ಪಾಟೀಲ್ ಅವರಿಂದ ಹಿಡಿದು, ಶಿವರಾಮ್‌ವರೆಗೂ ಅನೇಕರು ಆರೋಪ ಮಾಡಿದ್ದಾರೆ. ಈ ವಿಷಯವನ್ನು ಜಸ್ಟೀಸ್ ನಾಗಮೋಹನ್ ದಾಸ್ ಕಮಿಟಿಗೆ ತನಿಖೆಗೆ ಕೊಡಿ ಎಂದು ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

 

ಈ ಹಿಂದೆ ಬಿ.ಆರ್ ಪಾಟೀಲ್ ಆರೋಪವನ್ನು ಸಿಎಂ ತಳ್ಳಿಹಾಕಿದ್ದರು. ಯಾರ ಪಾತ್ರ ಇದೆ ಅಂತ ತನಿಖೆ ಮಾಡಲು ಆಗ್ರಹ ಮಾಡುತ್ತೇನೆ. ದಾಖಲೆ ಪಡೆದುಕೊಂಡು ತನಿಖೆ ಮಾಡಲಿ ಎಂದು ಒತ್ತಾಯಿಸಿದರು. ಬಿ ಶಿವರಾಮ್ ಅವರ ಒಬ್ಬರ ಹೇಳಿಕೆ ಅಲ್ಲ. ಅಬಕಾರಿ ಸಚಿವರ ಇಲಾಖೆಯ ತನಿಖೆ ಶುರುವಾಗಿದೆ. ಸಿದ್ದರಾಮಯ್ಯರ ಪುತ್ರ ವರ್ಗಾವಣೆ ಚರ್ಚೆಗೆ ಗ್ರಾಸವಾಗಿದೆ. ಗ್ಯಾರಂಟಿ ವೈಫಲ್ಯ ವಿಚಾರಗಳೂ ಮುನ್ನಲೆಗೆ ಬಂದಿದೆ ಎಂದು ತಿಳಿಸಿದರು.

ಗ್ಯಾರಂಟಿ ಅನುದಾನದಲ್ಲಿ ಭ್ರಷ್ಟಾಚಾರ ನಡೀತಿದೆ ಎಂದರಲ್ಲದೆ, ನಿಮ್ಮ ಮಾಜಿ ಸಚಿವರೇ ಕೊಟ್ಟಿರೋ ಹೇಳಿಕೆ ಇದು. ಇದಕ್ಕೆ ನಿಮ್ಮ ನಿಲುವೇನು? ತನಿಖೆಗೆ ಒಳಪಡಿಸ್ತೀರಾ? ಸ್ಪಷ್ಟನೆ ಕೊಡಿ ಎಂದು ಆಗ್ರಹಿಸಿದರು.

ವಿಜಯೇಂದ್ರರ ನೇತೃತ್ವದಲ್ಲಿ ನಡೆದ ಸಭೆ ವಿಚಾರ ಕುರಿತು ಪ್ರಶ್ನೆಗೆ, ಲೋಕಸಭಾ ಚುನಾವಣಾ ದೃಷ್ಟಿಯಿಂದ ಬೇರೆ ಬೇರೆ ಆಯಾಮಗಳಲ್ಲಿ ಇಂದು ಚರ್ಚೆ ಮಾಡಿದ್ದೇವೆ. ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆಯೂ ಚರ್ಚಿಸಿದ್ದೇವೆ. ಈಗಿರುವ ಅಭ್ಯರ್ಥಿಯನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆಯೂ ಚರ್ಚೆಯಾಗಿದೆ. ಹೆಚ್ಚುವರಿ ಮತಗಳ ಮೂಲಕ ಎರಡನೇ ಅಭ್ಯರ್ಥಿ ಆಯ್ಕೆ ಮಾಡಿದರೆ ಸಾಧಕ ಬಾಧಕ ಏನು ಎಂಬ ವಿಷಯದ ಕುರಿತೂ ಚರ್ಚೆ ಆಗಿದೆ. ಕೋರ್ ಕಮಿಟಿ ಸಭೆಯಲ್ಲಿ ಬರುವ ಅಭಿಪ್ರಾಯ ಆಧರಿಸಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಎರಡನೇ ಅಭ್ಯರ್ಥಿ ಗೆಲ್ಲಲು ಕೊರತೆಯಾಗುವ ಮತಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆಯೇ ಮತ್ತು ತಟಸ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗುವುದೇ ಎಂಬ ಬಗ್ಗೆಯೂ ಚರ್ಚೆಯಾಗಿದೆ ಎಂದು ತಿಳಿಸಿದರು.

 

TAGGED:bjpcongressDK Shivakumardk sureshSunil Kumarಕರ್ನಾಟಕಡಿಕೆ ಶಿವಕುಮಾರ್ಡಿಕೆ ಸುರೇಶ್ಭಾರತಸುನೀಲ್ ಕುಮಾರ್
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

Bengaluru Mallathahalli Wife Kills Husband
Bengaluru City

ಚಾಕುವಿನಿಂದ ಇರಿದು ಹೆಂಡತಿಯಿಂದಲೇ ಗಂಡನ ಕೊಲೆ

Public TV
By Public TV
5 minutes ago
Pakistan PM Shehbaz Sharif gets trolled over post on US Iran ceasefire Donald Trump
Latest

ಕದನ ವಿರಾಮ ಘೋಷಣೆಯಲ್ಲೂ ಎಡವಟ್ಟು – ಈಗ ಪಾಕ್‌ ಪ್ರಧಾನಿ ಫುಲ್‌ ಟ್ರೋಲ್‌

Public TV
By Public TV
9 minutes ago
Tehran Ceasefire Victory
Latest

ಕದನ ವಿರಾಮ ಘೋಷಣೆ – ಟೆಹ್ರಾನ್‌ನ ಪ್ರಮುಖ ಬೀದಿಗಳಲ್ಲಿ ರಾಷ್ಟ್ರಧ್ವಜ ಹಿಡಿದು ವಿಜಯೋತ್ಸವ ಆಚರಣೆ

Public TV
By Public TV
43 minutes ago
oil price fall
Latest

ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಕಚ್ಚಾ ತೈಲ ದರ ದಿಢೀರ್‌ ಭಾರೀ ಕುಸಿತ

Public TV
By Public TV
1 hour ago
Lorry Accident Mysore Road Sattelite Bus Stand
Bengaluru City

ಸಿಗ್ನಲ್‌ನಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿದ ಮತ್ತೊಂದು ಲಾರಿ – ಚಾಲಕ ಸಾವು

Public TV
By Public TV
2 hours ago
Hormuz
Latest

ಕದನ ವಿರಾಮಕ್ಕೆ ಇರಾನ್‌ ವಿಧಿಸಿದ 10 ಷರತ್ತುಗಳು ಏನು?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?