ತಾಯಿಯಾಗ್ತಿರುವ ಗುಡ್ ನ್ಯೂಸ್ ಕೊಟ್ರು ‘ಬಿಗ್ ಬಾಸ್’ ಆಶಿತಾ

Public TV
1 Min Read
ashitha chandrappa

ರಾಧಾ ರಮಣ(Radha Ramana) , ಬಿಗ್ ಬಾಸ್ (Bigg Boss Kannada 5) ಖ್ಯಾತಿಯ ಆಶಿತಾ ಚಂದ್ರಪ್ಪ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ನಟಿ ಸಿಹಿಸುದ್ದಿ ನೀಡಿದ್ದಾರೆ. ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಬಗ್ಗೆ ಬೇಬಿ ಬಂಪ್ ಶೇರ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ashitha

ಇತ್ತೀಚಿಗೆ ನಟಿ ಆಶಿತಾ ಚಂದ್ರಪ್ಪಗೆ(Ashita Chandrappa) ಸೀಮಂತ ಶಾಸ್ತ್ರ ಕೂಡ ಅದ್ದೂರಿ ನಡೆದಿದೆ. ಇದೀಗ ತಾಯ್ತನದ ಸಂತಸದಲ್ಲಿರುವ ನಟಿ, ಮನೆಗೆ ಮೊದಲ ಮಗು (Child) ಎಂಟ್ರಿ ಕೊಡ್ತಿರುವ ಬಗ್ಗೆ ಗುಡ್ ನ್ಯೂಸ್ ನೀಡಿದ್ದಾರೆ.

ಕಳೆದ 2021ರ ವರ್ಷದ ಅಂತ್ಯದಲ್ಲಿ ಉದ್ಯಮಿ ರೋಹನ್ ರಾಘವೇಂದ್ರ (Rohan Raghavendra) ಜೊತೆ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ಮದುವೆಯ ಬಳಿಕ ನಟಿ ಬಣ್ಣದ ಜಗತ್ತಿನಿಂದ ದೂರ ಉಳಿದುಕೊಂಡರು. ಇದನ್ನೂ ಓದಿ:ಮೊದಲ ಬಾಯ್‌ಫ್ರೆಂಡ್ ಜೊತೆಗಿನ ಬ್ರೇಕಪ್ ಬಗ್ಗೆ ಬಾಯ್ಬಿಟ್ಟ ಜಾನ್ವಿ ಕಪೂರ್

ನಟ ವಿರಾಟ್‌ಗೆ (Viraat) ಜೋಡಿಯಾಗಿ ‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್‌ನಲ್ಲಿ ನಾಯಕಿಯಾಗಿ ಆಶಿತಾ ನಟಿಸಿದ್ದರು. ಬಳಿಕ ಬಿಗ್ ಬಾಸ್ (Bigg Boss) ಸೀಸನ್ 5ರಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದರು. ‘ರಾಧಾ ರಮಣ’ ಧಾರಾವಾಹಿಯಲ್ಲಿ ರಮಣ ತಂಗಿ ಅವನಿ ಪಾತ್ರಕ್ಕೆ ಜೀವತುಂಬಿದ್ದರು.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article