ಬೀದರ್: ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ರೈತನ (Farmer) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಬಸವತೀರ್ಥ ಮಠದ ಸ್ವಾಮೀಜಿ ಹಾಗೂ ಬೆಂಬಲಿಗರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ಜಮೀನು ಆಸ್ತಿ ವಿಷಯಕ್ಕೆ ಬಸವತೀರ್ಥ ಮಠದ ಸ್ವಾಮೀಜಿ ಬೆಂಬಲಿಗರು ಹಾಗೂ ತಾಂಡ ಜನರ ನಡುವೆ ಗಲಾಟೆಯಾಗಿತ್ತು. ಸ್ವಾಮೀಜಿ ಬೆಂಬಲಿಗರು ತಾಂಡ ಜನರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಇದೀಗ ಸಿದ್ದಲಿಂಗ ಸ್ವಾಮೀಜಿ (Siddalinga Swamiji) ಹಾಗೂ ಇಬ್ಬರು ಬೆಂಬಲಿಗರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ಬಸ್ ನಿಲ್ದಾಣ ಜಾಗದ ವಿಚಾರಕ್ಕೆ 2 ಗುಂಪುಗಳ ನಡುವೆ ಮಾರಾಮಾರಿ – ಚಾಕು ಇರಿತದಿಂದ ಯುವಕ ಗಂಭೀರ
ಬೀದರ್ (Bidar) ಜಿಲ್ಲೆಯ ಚಿಟ್ಟಗುಪ್ಪ ತಾಲೂಕಿನ ಕಲ್ಲೂರು ತಾಂಡದ ಸೋಮಲು ಎಂಬ ರೈತನ 4 ಎಕರೆ ಜಮೀನು ಮಠಕ್ಕೆ ಸೇರಬೇಕು ಎಂದು ಸ್ವಾಮೀಜಿ ಬೆಂಬಲಿಗರು ರೈತ ಸೋಮಲು, ಪತ್ನಿ ಹಾಗೂ ತಾಂಡದ ಜನರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ರೈತ ಸೋಮಲು ಚಿಟಗುಪ್ಪಾ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆ ಸ್ವಾಮೀಜಿ ಬೆಂಬಲಿಗರ ವಿರುದ್ಧ ಮಾರಣಾಂತಿಕ ಹಲ್ಲೆ ಹಾಗೂ ಜೀವ ಬೆದರಿಕೆ ಕೇಸ್ ದಾಖಲಾಗಿದೆ.
ಬಸವತೀರ್ಥ ಮಠದ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡುವ ವೇಳೆ ಬಸವತೀರ್ಥ ಮಠದ ಡಾ. ಸಿದ್ದಲಿಂಗ ಮಹಾಸ್ವಾಮಿಗಳು ಗಾಳಿಯಲ್ಲಿ ಗುಂಡು ಕೂಡಾ ಹಾರಿಸಿದ್ದಾರೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಸಿದ್ದಲಿಂಗ ಸ್ವಾಮೀಜಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಭಿನ್ನಮತ ಸ್ಫೋಟ – ಬಿಜೆಪಿಗೆ ಮಾಜಿ ಶಾಸಕ ಕಿರಣ್ ಕುಮಾರ್ ಗುಡ್ಬೈ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k