Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕರ್ನಾಟಕಕ್ಕೆ 100 ರೂ. ನೀಡಿದರೆ, ದೇಶಕ್ಕೆ ಕರ್ನಾಟಕ ಸಾವಿರ ರೂ. ನೀಡಲಿದೆ: ತೇಜಸ್ವಿ ಸೂರ್ಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಕರ್ನಾಟಕಕ್ಕೆ 100 ರೂ. ನೀಡಿದರೆ, ದೇಶಕ್ಕೆ ಕರ್ನಾಟಕ ಸಾವಿರ ರೂ. ನೀಡಲಿದೆ: ತೇಜಸ್ವಿ ಸೂರ್ಯ

Latest

ಕರ್ನಾಟಕಕ್ಕೆ 100 ರೂ. ನೀಡಿದರೆ, ದೇಶಕ್ಕೆ ಕರ್ನಾಟಕ ಸಾವಿರ ರೂ. ನೀಡಲಿದೆ: ತೇಜಸ್ವಿ ಸೂರ್ಯ

Public TV
Last updated: February 10, 2023 3:41 pm
Public TV
Share
4 Min Read
tejasvi surya
SHARE

– ಕಾಂಗ್ರೆಸ್ ಕಂಬಿ ಇಲ್ಲದ ರೈಲು ಬಿಟ್ಟಿತ್ತು
– 70 ವರ್ಷದಲ್ಲಿ ಆಗದ ಪ್ರಗತಿ 8 ವರ್ಷದಲ್ಲಿ ಆಗಿದೆ

ನವದೆಹಲಿ: ಕರ್ನಾಟಕದ ಅಭಿವೃದ್ಧಿಗೆ ನೂರು ರೂಪಾಯಿ ನೀಡಿದರೆ, ದೇಶದ ಅಭಿವೃದ್ಧಿಗೆ ಕರ್ನಾಟಕ ಸಾವಿರ ರೂಪಾಯಿ ನೀಡಲಿದೆ. ಇದು ಕರ್ನಾಟಕದ ತಾಕತ್ತು ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ. ಲೋಕಸಭೆಯಲ್ಲಿ (Lok Sabha) ಬಜೆಟ್ (Budget) ಮೇಲೆ ಮಾತನಾಡಿದ ಅವರು 70 ವರ್ಷದಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು 8 ವರ್ಷದಲ್ಲಿ ಸಾಧ್ಯವಾಗಿವೆ ಎಂದು ಹೇಳಿದರು.

Contents
  • – ಕಾಂಗ್ರೆಸ್ ಕಂಬಿ ಇಲ್ಲದ ರೈಲು ಬಿಟ್ಟಿತ್ತು – 70 ವರ್ಷದಲ್ಲಿ ಆಗದ ಪ್ರಗತಿ 8 ವರ್ಷದಲ್ಲಿ ಆಗಿದೆ
  • Live Tv

ಸುದೀರ್ಘ ಭಾಷಣ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಪ್ರಗತಿ ಪರ ಬಜೆಟ್ ಮಂಡಿಸಲಾಗಿದೆ. ಅಮೃತ್ ಕಾಲದಲ್ಲಿ ದೇಶದ ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದೆ. ಕಳೆದ 8-9 ವರ್ಷಗಳಿಂದ ಕರ್ನಾಟಕಕ್ಕೆ ಹಲವು ಯೋಜನೆಗಳು ಮೋದಿ ಸರ್ಕಾರದಿಂದ ಸಿಕ್ಕಿದೆ. ಅದಕ್ಕಾಗಿ ನಾನು ಕರ್ನಾಟಕದ (Karnataka) ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

NARENDRA MODI

ನರೇಂದ್ರ ಮೋದಿ ಅವರಿಂದ ಕರ್ನಾಟಕ ಸರ್ವಾಂಗೀಣ ಪ್ರಗತಿಯಾಗಿದೆ. ಕಳೆದ 8 ವರ್ಷದಲ್ಲಿ 4,000 ಕಿ.ಮೀಗೂ ಅಧಿಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದೆ. 1 ಲಕ್ಷ 16 ಸಾವಿರ ಕೋಟಿ ಯೋಜನೆಗಳನ್ನು ರಸ್ತೆಗೆ ನೀಡಿದೆ. ಬೆಂಗಳೂರಿನಿಂದ (Bengaluru) ಬೇರೆ ಬೇರೆ ರಾಜ್ಯಗಳ ಪ್ರಮುಖ ನಗರಗಳಿಗೆ ಸಂಪರ್ಕ ನೀಡಿದೆ. 70 ವರ್ಷದಲ್ಲಿ ಆಗದ ಅಭಿವೃದ್ಧಿ 8 ವರ್ಷದಲ್ಲಿ ಆಗಿದೆ. ಇದರಿಂದ ಕರ್ನಾಟಕ ಜನರಿಗೆ ದೊಡ್ಡ ಉಪಯೋಗವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಸರ್ಕಾರದ ಅವಧಿಯಲ್ಲಿ ರೈಲ್ವೇ ವಲಯದಲ್ಲೂ ಸಾಕಷ್ಟು ಕ್ರಾಂತಿಯಾಗಿದೆ, ಯುಪಿಎ ಸರ್ಕಾರಕ್ಕಿಂತ ಎರಡು ಪಟ್ಟು ಡಬ್ಲಿಂಗ್ ಕೆಲಸ ನಮ್ಮ ಸರ್ಕಾರದಲ್ಲಿ ಆಗಿದೆ. ಈ ವರ್ಷ 7600 ಕೋಟಿ ರೂ. ಅನುದಾನ ಕರ್ನಾಟಕಕ್ಕೆ ನೀಡಿದೆ. 55 ರೈಲ್ವೆ ನಿಲ್ದಾಣಗಳನ್ನು ವಿಶ್ವ ದರ್ಜೆಗೆ ಏರಿಸಲಾಗುತ್ತಿದೆ. ಚಿಕ್ಕಮಗಳೂರಿಗೆ ಚುನಾವಣೆ ಸ್ಪರ್ಧಿಸಲು ಇಂದಿರಾಗಾಂಧಿ ಬಂದಾಗ ರೈಲ್ವೆ ಬ್ರಾಡ್‍ಗೇಜ್, ಡಬ್ಲಿಂಗ್ ಭರವಸೆ ನೀಡಿದ್ದರು. ಆದರೆ ಇಂದಿರಾ, ರಾಜೀವ್, ಸೋನಿಯಾ ಗಾಂಧಿ ಬಂದು ಹೋದರೂ ಅಭಿವೃದ್ಧಿಯಾಗಲಿಲ್ಲ. 30-40 ವರ್ಷ ಕಂಬಿನೇ ಇಲ್ಲದೇ ರೈಲು ಬಿಟ್ಟರು. ಆದರೆ ನಮ್ಮ ಸರ್ಕಾರದಲ್ಲಿ ಅತಿ ಹೆಚ್ಚು ರೈಲ್ವೆ ಯೋಜನೆಗಳನ್ನು ನೀಡಿದೆ ಎಂದು ತಿಳಿಸಿದರು.

bjp flag

ಕಳೆದ 8 ವರ್ಷದಲ್ಲಿ ಉಡಾನ್ ಯೋಜನೆ ಅಡಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆ. ಪ್ರತಿ 200-300 ಕಿ.ಮೀಗೆ ಒಂದರಂತೆ ಒಂಭತ್ತು ವಿಮಾನ ನಿಲ್ದಾಣಗಳನ್ನು ಮೋದಿ ಸರ್ಕಾರ ನೀಡಿದೆ. ಕರಾವಳಿ ಪ್ರದೇಶದಲ್ಲಿ ಬಂದರುಗಳನ್ನು ಅಭಿವೃದ್ಧಿ ಮಾಡಿದೆ. ಮಂಗಳೂರು ಬಂದರು ಅಭಿವೃದ್ಧಿಗೆ 3,500 ಕೋಟಿ ನೀಡಿದೆ. ಏಷ್ಯಾದಲ್ಲಿ ಅತಿ ದೊಡ್ಡದು ಎನಿಸಿಕೊಂಡಿರುವ ಐಎನ್‍ಎಸ್ ಕಂದಬ ನೌಕಾ ನೆಲೆ ಪುನರುಜ್ಜೀವನಕ್ಕೆ 12,000 ಕೋಟಿ ಅಭಿವೃದ್ಧಿಗೆ ನೀಡಿದೆ ಎಂದು ಹೇಳಿದರು.

ನೀರಿನ ವಿಚಾರದಲ್ಲಿ ಮೋದಿ ಸರ್ಕಾರ ದೊಡ್ಡ ಕೊಡುಗೆ ನೀಡಿದೆ. ಆಲಮಟ್ಟಿ ಡ್ಯಾಂ ಮಟ್ಟ ಏರಿಸಲು ವಾಜಪೇಯಿ ಸರ್ಕಾರ ಅನುಮತಿ ನೀಡಿತ್ತು. ಈಗ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನರೇಂದ್ರ ನೀಡಿದ್ದಾರೆ. ಮಹದಾಯಿ ಯೋಜನೆಗೆ ಡಿಪಿಆರ್‍ಗೆ ಅನುಮತಿ ನೀಡಿದೆ. ಜಲ ಜೀವನ್ ಮಿಷನ್ ನಡಿ ಮನೆ ಮನೆಗೂ ನೀರು ನೀಡುವ ಕೆಲಸ ಮಾಡುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 24 ಲಕ್ಷ ಮನೆಗಳಿಗೆ ಮಾತ್ರ ನಲ್ಲಿಯಲ್ಲಿ ನೀರು ಬರುತ್ತಿತ್ತು. ಇಂದು 55 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಲ್ಲಿಯಿಂದ ನೀರು ಬರುತ್ತಿದೆ ಎಂದರು.

ಬೆಂಗಳೂರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಆದ್ಯತೆ ನೀಡಿದ್ದಾರೆ. ಸಬ್ ಅರ್ಬನ್ ರೈಲ್ವೆ ಯೋಜನೆ 40 ವರ್ಷದಿಂದ ಬಾಕಿ ಇತ್ತು. ಮೋದಿ ಅವರು 40 ತಿಂಗಳಲ್ಲಿ ಯೋಜನೆ ಪೂರ್ಣ ಮಾಡುವ ಆಶ್ವಾಸನೆ ನೀಡಿದ್ದರೆ ಅದಕ್ಕೆ ಹಣಕಾಸಿನ ನೆರವು ನೀಡಲಾಗುತ್ತಿದೆ. ಟ್ರಾಫಿಕ್ ಸಮಸ್ಯೆ ಸರಿ ಮಾಡಲು ಮೆಟ್ರೋಗೆ ಆದ್ಯತೆ ನೀಡಿದೆ. 8 ವರ್ಷದ ಹಿಂದೆ 8 ಕಿ.ಮೀ ಮೆಟ್ರೋ ಮಾರ್ಗ ಇತ್ತು. ಈಗ 56 ಕಿ.ಮೀ ಮಾರ್ಗ ಹೊಂದಿದೆ. ಶೀಘ್ರದಲ್ಲಿ ವಿಮಾನ ನಿಲ್ದಾಣಕ್ಕೂ ಸಂಪರ್ಕ ನೀಡಲಾಗುತ್ತಿದೆ ಎಂದು ಹೇಳಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಮೋದಿ ಸರ್ಕಾರ ನೀಡಿದೆ. 17,000 ಕೋಟಿ ಬೆಂಗಳೂರು ಹೊರವಲಯದ ರಿಂಗ್ ರಸ್ತೆಗೆ ನೀಡಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ಜಿಲ್ಲೆಗಳ ಅಭಿವೃದ್ಧಿಗಾಗಿ ಧಾರವಾಡಕ್ಕೆ ಐಐಟಿ, ರಾಯಚೂರಿಗೆ ಐಐಐಟಿ, ತುಮಕೂರಿಗೆ ಹೆಲಿಕಾಪ್ಟರ್ ಉತ್ಪಾದನಾ ಘಟಕ, ಟ್ವಾಯ್ ಕ್ಲಸ್ಟರ್, ಟೆಕ್ಸಟೈಲ್ ಕ್ಲಸ್ಟರ್‌ಗಳನ್ನು ನಮ್ಮ ಸರ್ಕಾರ ನೀಡಿದೆ. ದೇಶದ ಮೊಲದ ಸೆಮಿ ಕಂಡಕ್ಟರ್ ಫ್ಯಾಬ್ ಯುನಿಟ್ ಅನ್ನು ಮೈಸೂರಿಗೆ ನೀಡಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರ ಅಖಾಡಕ್ಕೆ ಸಿದ್ದು ಆಪ್ತ ಅಹಿಂದ ಟೀಂ ಎಂಟ್ರಿ

ಕಾನೂನು ಸುರಕ್ಷತೆಗಾಗಿ ಪಿಎಫ್‍ಐ ಅನ್ನು ಬ್ಯಾನ್ ಮಾಡುವ ಮೂಲಕ ರಾಜ್ಯದ ಜನರಿಗೆ ಸುರಕ್ಷತೆ ನೀಡಿದ್ದಾರೆ. ಮೋದಿ ಅವರ 5 ಟ್ರಿಲಿಯನ್ ಆರ್ಥಿಕತೆ ಗುರಿಗೆ ಕರ್ನಾಟಕ ಒಂದೇ 1 ಟ್ರಿಲಿಯನ್ ಕೊಡುಗೆ ನೀಡಲಿದೆ. ಕರ್ನಾಟಕದ ಅಭಿವೃದ್ಧಿಗೆ ನೂರು ರೂಪಾಯಿ ನೀಡಿದರೆ ಕರ್ನಾಟಕ ಒಂದು ಸಾವಿರ ಆದಾಯ ದೇಶಕ್ಕೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತೇಜಸ್ವಿ ಸೂರ್ಯ ಕನ್ನಡದಲ್ಲೇ ಭಾಷಣ ಮಾಡಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಟಿಕೆಟ್ ಹಂಚಿಕೆ ಸಿದ್ಧತೆಯಲ್ಲಿ ಕಾಂಗ್ರೆಸ್‌ಗೆ ಜಾತಿ ಸಮೀಕರಣದ ಹೊಸ ತಲೆನೋವು

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:budgetkarnatakalok sabhaTejasvi Suryaತೇಜಸ್ವಿ ಸೂರ್ಯಬಜೆಟ್ಲೋಕಸಭೆ
Share This Article
Facebook Whatsapp Whatsapp Telegram

Cinema news

rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood
Sathish Ninasam Public TV Anniversary
ಆಟೋ ಡ್ರೈವರ್‌ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್‌ ಮಾಸ್‌ ಹೀರೋ: ನೀನಾಸಂ ಸತೀಶ್‌ ಬಣ್ಣನೆ
Bengaluru City Cinema Latest Main Post Sandalwood
Toxic
ʻಟಾಕ್ಸಿಕ್‌ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
Bengaluru City Cinema Latest Main Post Sandalwood
nandini milk sudha rani
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಆಯ್ಕೆ
Bengaluru City Cinema Latest Main Post Sandalwood

You Might Also Like

KSRTC BUS
Chikkamagaluru

ಬೆಂಗ್ಳೂರಿಂದ ಶೃಂಗೇರಿಗೆ ಹೊರಟಿದ್ದ ಎರಡು ಸರ್ಕಾರಿ ಬಸ್‌ಗಳು ಸೀಜ್‌!

Public TV
By Public TV
26 minutes ago
Piyush Goyal
Latest

ಭಾರತದ ಜವಳಿ ಉತ್ಪನ್ನಗಳಿಗೂ ಅಮೆರಿಕದಲ್ಲಿ 0% ಸುಂಕ: ಪಿಯೂಷ್ ಗೋಯಲ್

Public TV
By Public TV
1 hour ago
Red Rose 4
Chikkaballapur

ಪ್ರೆಮಿಗಳ ದಿನಾಚರಣೆ – ಕೆಂಪು ಗುಲಾಬಿಗೆ ಭಾರೀ ಬೇಡಿಕೆ; ಚಿಕ್ಕಬಳ್ಳಾಪುರದಿಂದ ವಿದೇಶಗಳಿಗೂ ರಪ್ತು!

Public TV
By Public TV
2 hours ago
BNP BANGLA
Latest

Bangladesh Election Result | ಬಹುಮತದ ಗಡಿ ದಾಟಿದ ಬಿಎನ್‌ಪಿ – ಅಧಿಕೃತ ಘೋಷಣೆಯೊಂದೇ ಬಾಕಿ

Public TV
By Public TV
2 hours ago
Bangla
Latest

ಬಾಂಗ್ಲಾ ಚುನಾವಣೆ | ಎಲ್ಲಾ ಪಕ್ಷಗಳಿಗೂ ಹೊಸ ಆರಂಭ – ಇನ್ನಾದ್ರೂ ಬದಲಾಗುತ್ತಾ ದೇಶದ ಭವಿಷ್ಯ?

Public TV
By Public TV
2 hours ago
Tumkur Murder
Crime

ಜ್ಯೋತಿಷಿ ಮಾತು ಕೇಳಿ ಹೆತ್ತ ತಾಯಿಯನ್ನೇ ಕೊಂದ ಮಗಳು ಸುಚಿತ್ರಾ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?