ಮೊಗಾದಿಶು: ಸೊಮಾಲಿಯಾದ ಪಂಟ್ಲ್ಯಾಂಡ್ ಕರಾವಳಿ ಬಳಿ ಟರ್ಕಿಶ್ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಕ್ಯಾಮರೂನ್‌ನ ವಾಣಿಜ್ಯ ಹಡಗನ್ನು ಎಂಟು ಮಂದಿ ಕಡಲ್ಗಳ್ಳರು ಹೈಜಾಕ್ ಮಾಡಿದ್ದಾರೆ. ಹಡಗಿನಲ್ಲಿ 6 ಭಾರತೀಯ ನಾವಿಕರು ಸೇರಿದಂತೆ ಒಟ್ಟು 10 ಮಂದಿ ಸಿಬ್ಬಂದಿ ಇದ್ದರು. ಅವರೆಲ್ಲರನ್ನೂ ಕಡಲ್ಗಳ್ಳರು ಅಪಹರಿಸಿದ್ದಾರೆ.
ಆ.17 ರಂದು ಹಡಗನ್ನು ಹೈಜಾಕ್ ಮಾಡಲಾಗಿದ್ದು, ಅದನ್ನು ನುಗಾಲ್ ಕರಾವಳಿ ಕಡೆಗೆ ಕೊಂಡೊಯ್ಯಲಾಗಿದೆ. ಹಡಗನ್ನು ಅಪಹರಿಸಿದ ವಿಚಾರ ಗೊತ್ತಾಗುತ್ತಿದ್ದಂತೆ ಟರ್ಕಿ ಪಡೆ ಡ್ರೋನ್ ಹಾಗೂ ಹೆಲಿಕಾಪ್ಟರ್‌ಗಳ ಮೂಲಕ ಆ ಪ್ರದೇಶದ ಮೇಲೆ ನಿಗಾ ಇಟ್ಟಿದೆ. ಈ ಬಗ್ಗೆ ಭಾರತ ಹಾಗೂ ಟರ್ಕಿ ಸರ್ಕಾರಗಳಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದನ್ನೂ ಓದಿ: ಜೈಲಿಂದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆಸ್ಪತ್ರೆಗೆ ಶಿಫ್ಟ್
ಹಡಗು ಸೊಮಾಲಿಯಾದ ಪಂಟ್ಲ್ಯಾಂಡ್‌ನ ಮರ್ರಾಯದಿಂದ ಸುಮಾರು 3.5 ನಾಟಿಕಲ್ ಮೈಲು ದೂರದ ಮೊಗಾದಿಶುವಿನ ಟರ್ಕಿ ಮಿಲಿಟರಿ ತರಬೇತಿ ಕೇಂದ್ರಕ್ಕೆ ಶಸ್ತ್ರಾಸ್ತ್ರಗಳನ್ನು, ಸಂವಹನ ಮತ್ತು ಉಪಗ್ರಹ ಉಪಕರಣಗಳನ್ನು ಸಾಗಿಸುತ್ತಿತ್ತು. ಈ ವೇಳೆ 8 ಮಂದಿ ಕಡಲ್ಗಳ್ಳರು ಈ ಹಡಗಿನ ಮೇಲೆ ದಾಳಿ ಮಾಡಿ ಹೈಜಾಕ್ ಮಾಡಿದ್ದಾರೆ.
ಈ ಹಡಗಿನಲ್ಲಿ 6 ಮಂದಿ ಭಾರತೀಯರು, ಓರ್ವ ಟರ್ಕಿಶ್ ಪ್ರಜೆ, ಓರ್ವ ಜಾರ್ಜಿಯನ್ ಪ್ರಜೆ ಹಾಗೂ ಇಬ್ಬರು ಸರ್ಬಿಯನ್ ಭದ್ರತಾ ಸಿಬ್ಬಂದಿ ಇದ್ದರು. ಇಲ್ಲಿಯವರೆಗೂ ಅವರ ಗುರುತುಗಳ ಬಗ್ಗೆ ಟರ್ಕಿಶ್ ಅಧಿಕಾರಿಗಳಾಗಲಿ ಅಥವಾ ಭಾರತದ ವಿದೇಶಾಂಗ ಇಲಾಖೆಯಿಂದಾಗಲಿ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ. ಇದನ್ನೂ ಓದಿ: ಇರಾನ್ ಜೊತೆ ವ್ಯವಹರಿಸುವ ದೇಶಗಳಿಗೆ ಆರ್ಥಿಕ ಬೆದರಿಕೆ ಒಡ್ಡಿದ ಟ್ರಂಪ್

