ಟೋಕಿಯೊ: ಜಪಾನ್ನಲ್ಲಿ (Japan) ಭಾನುವಾರ ಮುಂಜಾನೆ 5.7 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆಗೆ ಅಂಗಡಿಗಳ ಕಿಟಕಿ ಗಾಜುಗಳು ಪುಡಿಯಾಗಿದ್ದು, ಕಟ್ಟಡಗಳಲ್ಲಿದ್ದ ಜನರು ಭಯಭೀತರಾಗಿ ಹೊರಗೆ ಓಡಿಬಂದಿದ್ದಾರೆ.
ಜಪಾನ್ ಹವಾಮಾನ ಇಲಾಖೆ ಭೂಕಂಪದ ತೀವ್ರತೆಯನ್ನು 5.7 ಎಂದು ದಾಖಲಿಸಿದೆ. ಆದರೆ ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ 5.5 ತೀವ್ರತೆ ಎಂದು ವರದಿ ಮಾಡಿದೆ. ಭೂಕಂಪದ ಬಳಿಕ ಸಣ್ಣ ಪ್ರಮಾಣದ ಕಂಪನಗಳೂ ಸಂಭವಿಸಿವೆ. ಹಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದ್ದು, ಜನಜೀವನದಲ್ಲಿ ಆತಂಕ ಮೂಡಿಸಿದೆ. ಇದನ್ನೂ ಓದಿ: ಕುಟುಂಬ ಸಮೇತರಾಗಿ ಶಕ್ತಿ ಸ್ವರೂಪಿಣಿ ಹಾಸನಾಂಬೆ ದೇವಿ ದರ್ಶನ ಪಡೆದ ಡಿಕೆಶಿ
ಐಚಿ (Aichi) ಪ್ರಾಂತ್ಯದ ಸುತ್ತಮುತ್ತಲಿನ ವಿಶಾಲ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದೆ. ಹಮಾಮಟ್ಸು ನಗರ, ಐತಿಹಾಸಿಕ ನಗರಗಳಾದ ಕ್ಯೋಟೋ ಮತ್ತು ನಾರಾ ಸೇರಿದಂತೆ ಯಮನಾಶಿ ಹಾಗೂ ಗಿಫು ಪ್ರಾಂತ್ಯಗಳಲ್ಲೂ ಭೂಮಿ ಕಂಪಿಸಿದೆ. ಮೌಂಟ್ ಫ್ಯೂಜಿ ಇರುವ ಪ್ರದೇಶದಲ್ಲಿಯೂ ಕಂಪನದ ಅನುಭವವಾಗಿದೆ. ಇದನ್ನೂ ಓದಿ: ಹಾಸನ ಡಿಸಿ, ಶಿವಲಿಂಗೇಗೌಡ ವಿರುದ್ಧ ಲಂಚಾರೋಪ – ಕೇಂದ್ರ ಸಚಿವ ಕುಮಾರಸ್ವಾಮಿ ಬಾಂಬ್
ಭಾನುವಾರ ಮುಂಜಾನೆ 1:04ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಶಿಜುವೊಕಾ ಪ್ರಾಂತ್ಯದಲ್ಲಿ ಭೂಮಿಯ ಮೇಲ್ಮೈಯಿಂದ ಸುಮಾರು 40 ಕಿಲೋಮೀಟರ್ ಆಳದಲ್ಲಿ ಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಐಚಿ ಮತ್ತು ಶಿಜುವೊಕಾ ಪ್ರಾಂತ್ಯಗಳು ಪರಸ್ಪರ ಅಕ್ಕಪಕ್ಕದಲ್ಲಿವೆ. ಭೂಕಂಪದ ತೀವ್ರ ಕಂಪನ ಐಚಿ ಪ್ರದೇಶದಲ್ಲಿ ಹೆಚ್ಚಾಗಿ ದಾಖಲಾಗಿದೆ. ಆದರೆ ಟೋಕಿಯೊದಲ್ಲಿ ಭೂಕಂಪದ ಅನುಭವವಾಗಿಲ್ಲ. ಇದನ್ನೂ ಓದಿ: ದೇವಿರಮ್ಮನ ಬೆಟ್ಟ ಹತ್ತುವಾಗ ಹೃದಯಾಘಾತ – ಭಕ್ತ ಸಾವು
ಮುಂದಿನ ದಿನಗಳಲ್ಲೂ ಭೂಕಂಪದ ಎಚ್ಚರಿಕೆ:
ಭೂಕಂಪದ ಬೆನ್ನಲ್ಲೇ ಜಪಾನ್ ಹವಾಮಾನ ಇಲಾಖೆ ಮುಂದಿನ ಒಂದು ವಾರದವರೆಗೆ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಅದರಲ್ಲೂ ಮುಂದಿನ ಎರಡು ಮೂರು ದಿನಗಳಲ್ಲಿ ಪ್ರಬಲ ಕಂಪನಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಜಾಗರೂಕರಾಗಿರಲು ಎಚ್ಚರಿಕೆ ನೀಡಿದೆ. ಮಣ್ಣಿನ ಕುಸಿತ, ಬಂಡೆಗಳು ಉರುಳುವ ಸಾಧ್ಯತೆ ಹಾಗೂ ಮಳೆಯ ಪರಿಣಾಮಗಳ ಬಗ್ಗೆಯೂ ಜನರು ಎಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆಯ ಅಧಿಕಾರಿ ಅಯತಕಾ ಎಬಿಟಾ ತಿಳಿಸಿದ್ದಾರೆ. ಇದನ್ನೂ ಓದಿ: ಬಸ್ತಾರ್ನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ – ನೀವೆಲ್ಲರೂ ನನ್ನ ಕುಟುಂಬದ ಸದಸ್ಯರು ಎಂದ ಮೋದಿ
ಇದೇ ವೇಳೆ, ಭಾರೀ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಸಿರುವ ನಂಕೈ ಟ್ರಫ್ ಟೆಕ್ಟಾನಿಕ್ ಪ್ಲೇಟ್ ಪ್ರದೇಶದಲ್ಲಿ ಸದ್ಯಕ್ಕೆ ಯಾವುದೇ ಅಸಹಜ ಬದಲಾವಣೆ ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಶಿಂಕಾನ್ಸೆನ್ ಬುಲೆಟ್ ರೈಲುಗಳ ವೇಗವನ್ನು ಕಡಿಮೆ ಮಾಡಲಾಗಿದೆ. ಭೂಕಂಪದಿಂದ ರೈಲು ಹಳಿಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಕಾರಿಗೆ ಅಪರಿಚಿತ ವಾಹನ ಡಿಕ್ಕಿ – ದಂಪತಿ ಸಾವು, ಓರ್ವ ಗಂಭೀರ
