ಬಾಗಲಕೋಟೆ: ಅಕ್ರಮವಾಗಿ ಶಾಲಾ ಮಕ್ಕಳ ಕ್ಷೀರ ಭಾಗ್ಯದ ಹಾಲಿನ ಪುಡಿಯನ್ನು (Milk Powder) ಸಂಗ್ರಹಿಸಿ ಮಹಾರಾಷ್ಟ್ರಕ್ಕೆ (Maharashtra) ಸಾಗಿಸಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ ಘಟನೆ ಬಾದಾಮಿ (Badami) ತಾಲೂಕಿನ ಸೂಳಿಕೇರಿ ಬಳಿ ನಡೆದಿದೆ.
ಬಾಗಲಕೋಟೆ (Bagalkot) ಸಿಇಎನ್ ಪೊಲೀಸರ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಅಪಾರ ಪ್ರಮಾಣದ ಹಾಲಿನ ಪುಡಿ ಪ್ಯಾಕೆಟ್ ಜೊತೆಗೆ ರಾಗಿಹಿಟ್ಟು, ಅಡುಗೆ ಎಣ್ಣೆಯ ಜೊತೆ ಬೊಲೆರೋ ವಾಹನವನ್ನು ಜಪ್ತಿ ಮಾಡಿದ್ದಾರೆ.
Advertisement
ಸಿದ್ದಪ್ಪ ಕಿತ್ತಲಿ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಸಿದ್ದಪ್ಪನನ್ನು ಬಂಧಿಸಿದ ಸಿಇಎನ್ ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ. ಸಿದ್ದಪ್ಪ ಕಿತ್ತಲಿ ಮೂಲತಃ ಸೂಳಿಕೇರಿ ಗ್ರಾಮದವನಾಗಿದ್ದು, ಹುನಗುಂದ ಹಾಗೂ ಬಾದಾಮಿ ತಾಲೂಕಿನ ಶಾಲೆಗಳಿಗೆ ಹಾಲಿನ ಪೌಡರ್ ಸರಬರಾಜು ಮಾಡುವ ಸಬ್ ಲೀಸ್‌ದಾರನಾಗಿದ್ದ. ಇದನ್ನೂ ಓದಿ: ಮಿಸ್ಟರ್ 360 ಮೇಲೆ ಆರ್‌ಸಿಬಿ ಕಣ್ಣು – ಈ ಸಲ ಕಪ್ ನಮ್ಮದಾಗುತ್ತಾ ಅಂತಿದ್ದಾರೆ ಫ್ಯಾನ್ಸ್?
Advertisement
Advertisement
ದಾಸ್ತಾನುಗಳನ್ನ ಶಾಲೆಗಳಿಗೆ ಸರಿಯಾಗಿ ಸರಬರಾಜು ಮಾಡದೇ, ವಂಚಿಸಿ ತನ್ನ ಮನೆ ಎದುರುಗಡೆ ಇರುವ ಶೆಡ್‌ನಲ್ಲಿ ಹಾಲಿನ ಪೌಡರ್, ಅಡುಗೆ ಎಣ್ಣೆ, ರಾಗಿಹಿಟ್ಟು ಸಂಗ್ರಹ ಮಾಡಿ ಇಟ್ಟಿದ್ದ.
Advertisement
ಒಟ್ಟು 18.14 ಲಕ್ಷ ರೂ. ಮೌಲ್ಯದ ಹಾಲಿನ ಪುಡಿ, ರಾಗಿ ಹಿಟ್ಟು, ಅಡುಗೆ ಎಣ್ಣೆ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ ಸಿದ್ದಪ್ಪ, ಮಹಾಲಿಂಗಪುರದ ಮೂಲ ಲೀಸ್‌ದಾರ ಶ್ರೀಶೈಲ ಅಂಗಡಿ ಎನ್ನುವ ವ್ಯಕ್ತಿಯಿಂದ ಸರಬರಾಜು ಮಾಡಲು ಸಬ್ ಲೀಸ್ ಪಡೆದಿದ್ದ.
4,474 ಕೆಜಿ ಕೆಜಿ ಹಾಲಿನ ಪುಡಿ ಪಾಕೆಟ್, 325 ಕೆಜಿ ರಾಗಿ ಹಿಟ್ಟು, 50 ಕೆಜಿ ಅಡುಗೆ ಎಣ್ಣೆ ಸಂಗ್ರಹಿಸಿ ಒಂದು ಬೊಲೆರೋ ವಾಹನದಲ್ಲಿ ಮಹಾರಾಷ್ಟ್ರಕ್ಕೆ ಸಾಗಿಸಲು ಯತ್ನಿಸಿದ್ದ.