CrimeLatestLeading NewsMain PostNational

ತನ್ನ ಸ್ನೇಹಿತೆಯ ಮೇಲೆಯೇ 10ನೇ ತರಗತಿ ವಿದ್ಯಾರ್ಥಿಗಳಿಂದ ಸಾಮೂಹಿಕ ಅತ್ಯಾಚಾರ: ಬಂಧನ

Advertisements

ಚೆನ್ನೈ: ತಮ್ಮ ಸ್ನೇಹಿತೆಯಾಗಿದ್ದ 15 ವರ್ಷದ ಬಾಲಕಿಯ ಮೇಲೆಯೇ 10ನೇ ತರಗತಿಯ ಮೂವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿ ಅಬ್ಸರ್ವೇಷನ್ ಹೋಮ್‌ಗೆ ಕಳುಹಿಸಲಾಗಿದೆ. ತನ್ನ ಗೆಳೆಯನೊಂದಿಗೆ ಇದ್ದ ಫೋಟೋವನ್ನು ಪೋಷಕರಿಗೆ ತೋರಿಸುವುದಾಗಿ ಬ್ಲಾಕ್‌ಮೇಲ್ ಮಾಡಿ ಅಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೋಲು ಹಿಡಿದು ರಾಜಕಾರಣ ಮಾಡಲ್ಲ, 80 ವರ್ಷ ಆದ್ಮೇಲೆ ಚುನಾವಣೆಗೆ ನಿಲ್ಲಲ್ಲ: ಸಿದ್ದರಾಮಯ್ಯ

STOP RAPE

ಇತ್ತೀಚೆಗಷ್ಟೇ ಬಾಲಕಿ ತನ್ನ ಸ್ನೇಹಿತನ ಹುಟ್ಟುಹಬ್ಬದ ಕಾರ್ಯಕ್ರಮವೊಂದಕ್ಕೆ ತೆರಳಿದ್ದಳು. ಈ ವೇಳೆ ಬಾಲಕಿ ಮತ್ತೊಬ್ಬ ಸ್ನೇಹಿತನೊಂದಿಗೆ ಇರುವ ಫೋಟೋವನ್ನು ಸೆರೆಹಿಡಿದಿದ್ದು, ಅದನ್ನು ಪೋಷಕರಿಗೆ ತೋರಿಸುವುದಾಗಿ ಹೆದರಿಸಿದ್ದಾರೆ. ಮರುದಿನ ಶಾಲೆಯ ಹಿಂದಿನ ಪಾಳುಮನೆಗೆ ಬರಲು ಹೇಳಿದ್ದಾರೆ. ಜೂನ್ 1 ರಂದು ಶಾಲೆಯ ಊಟದ ವಿರಾಮ ಸಂದರ್ಭದಲ್ಲಿ ಬಾಲಕಿ ಶಾಲೆ ಹಿಂದಿನ ಮನೆಗೆ ತೆರಳಿದಾಗ ಮೂವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಒಬ್ಬ ಕೃತ್ಯವನ್ನು ವೀಡಿಯೋ ಮಾಡಿ ಇತರ ವಿದ್ಯಾರ್ಥಿಗಳೊಂದಿಗೂ ಹಂಚಿಕೊಂಡಿದ್ದಾನೆ.

ವೀಡಿಯೋ ಶೇರ್ ಆಗುತ್ತಿದೆ ಎಂದು ತಿಳಿದ ಬಾಲಕಿ ತನ್ನ ತಾಯಿಯೊಂದಿಗೆ ವಿಷಯವನ್ನು ಹೇಳಿಕೊಂಡಿದ್ದಾಳೆ. ಆಕೆ ತಾಯಿ ದೂರು ನೀಡಿದ ಬಳಿಕ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಅಮರನಾಥದಲ್ಲಿ ಮೇಘಸ್ಪೋಟ, 8 ಮಂದಿ ಸಾವು – NDRF, BSF ತಂಡಗಳಿಂದ ಕಾರ್ಯಾಚರಣೆ

ಮೂವರ ವಿರುದ್ಧ ಅತ್ಯಾಚಾರ ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಅಪ್ರಾಪ್ತ ಬಾಲಕರನ್ನು ಅಬ್ಸರ್ವೇಶನ್ ಹೋಮ್‌ಗೆ ಕಳುಹಿಸಲಾಗಿದೆ ಎಂದು ಕಡಲೂರು ಪೊಲೀಸ್ ಅಧೀಕ್ಷಕ ಎಸ್.ಶಕ್ತಿ ಗಣೇಶನ್ ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button