Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading:ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಟೆಕ್ಕಿ ಗಿರೀಶ್‌ ಹತ್ಯೆ ಕೇಸ್‌ – ಶುಭಾಗೆ ಕ್ಷಮಾದಾನ ಅವಕಾಶ ನೀಡಿದ ಸುಪ್ರೀಂ
Share
NotificationShow More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಟೆಕ್ಕಿ ಗಿರೀಶ್‌ ಹತ್ಯೆ ಕೇಸ್‌ – ಶುಭಾಗೆ ಕ್ಷಮಾದಾನ ಅವಕಾಶ ನೀಡಿದ ಸುಪ್ರೀಂ

Bengaluru City

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಟೆಕ್ಕಿ ಗಿರೀಶ್‌ ಹತ್ಯೆ ಕೇಸ್‌ – ಶುಭಾಗೆ ಕ್ಷಮಾದಾನ ಅವಕಾಶ ನೀಡಿದ ಸುಪ್ರೀಂ

Public TV
Last updated: July 15, 2025 8:15 am
Public TV
Share
2 Min Read
Techie Girish Case Shubh Shankar Supreme Court
SHARE

– ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌
– ಕ್ಷಮಾದಾನ ಸಲ್ಲಿಸಲು 8 ವಾರಗಳ ಅವಕಾಶ

ಬೆಂಗಳೂರು: ಸಾಫ್ಟ್‌ವೇರ್‌ ಎಂಜಿನಿಯರ್‌ ಬಿ.ವಿ.ಗಿರೀಶ್‌ (Techie Girish) ಅವರನ್ನು ಗೆಳೆಯನ ಸಹಕಾರದಿಂದ ಕೊಲೆ ಮಾಡಿದ್ದಕ್ಕೆ ಶುಭಾ ಶಂಕರ್ (Shubh Shankar) ಹಾಗೂ ಇತರ ಮೂವರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ (Supreme Court) ಸೋಮವಾರ ಎತ್ತಿ ಹಿಡಿದಿದೆ.

ಕರ್ನಾಟಕ ಹೈಕೋರ್ಟ್‌ನ (Karnataka High Court) ಆದೇಶವನ್ನು ಎತ್ತಿ ಹಿಡಿದ ನ್ಯಾ. ಎಂ.ಎಂ.ಸುಂದರೇಶ್‌ ಮತ್ತು ಅರವಿಂದ್ ಕುಮಾರ್ ಅವರ ದ್ವಿಸದಸ್ಯ ಪೀಠ ಅಪರಾಧಿಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ವಜಾಗೊಳಿಸಿದೆ.

ಶುಭಾ ತನ್ನ ಕಾಲೇಜು ಗೆಳೆಯ ಮತ್ತು ಇತರ ಇಬ್ಬರೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಳು. ಅಪರಾಧಕ್ಕೆ ಕಾರಣವಾದ ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯದ ಕುಸಿತದ ಬಗ್ಗೆ ಪೀಠವು ತೀವ್ರ ಕಳವಳ ವ್ಯಕ್ತಪಡಿಸಿತು.  ಇದನ್ನೂಓದಿ: ಡಿವೋರ್ಸ್‌ ಕೇಸ್‌| ಸಂಗಾತಿ ರೆಕಾರ್ಡ್ ಮಾಡಿದ ಕರೆಯನ್ನು ಸಾಕ್ಷಿಯಾಗಿ ಪರಿಗಣಿಸಬಹುದು –ಸುಪ್ರೀಂ

ಯುವತಿಯ ಮೇಲೆ ಹೇರಲಾದ ಬಲವಂತದ ವಿವಾಹವೇ ಅಪರಾಧಕ್ಕೆ ಕಾರಣ ಎಂಬುದನ್ನು ಅಭಿಪ್ರಾಯಪಟ್ಟ ಕೋರ್ಟ್‌ ಬಂಧನ ಮತ್ತು ಜೀವಾವಧಿ ಶಿಕ್ಷೆ ವಿಧಿಸುವುದಕ್ಕೆ ತಡೆ ನೀಡಿದೆ. ಅಷ್ಟೇ ಅಲ್ಲದೇ ಕರ್ನಾಟಕ ರಾಜ್ಯಪಾಲರ ಮುಂದೆ ಕ್ಷಮಾದಾನ ಸಲ್ಲಿಸಲು ಅಪರಾಧಿಗಳಿಗೆ 8 ವಾರಗಳ ಅವಕಾಶ ನೀಡಿದೆ.

court order law

ಶುಭಾ ಇತರ ಆರೋಪಿಗಳೊಂದಿಗೆ ಸೇರಿ ತನಗೆ ಮದುವೆಯಾಗಲು ಇಷ್ಟವಿಲ್ಲದ ಯುವಕನ ಹತ್ಯೆಗೆ ಸಂಚು ರೂಪಿಸಿದ್ದಾಳೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

ಬಲವಂತದ ಕುಟುಂಬದ ನಿರ್ಧಾರದಿಂದ ಮುಗ್ಧ ಯುವಕನ ದುರಂತ ಕೊಲೆಗೆ ಕಾರಣವಾಯಿತು. ಇದು ಇತರ ಮೂವರ ಜೀವನವನ್ನು ನಾಶಮಾಡಿತು.  ಕೊಲೆಗೈದವರು ಜನ್ಮತ: ಅಪರಾಧಿಗಳಲ್ಲ. ಅಪಾಯಕಾರಿ ನಿರ್ಧಾರ ಕೈಗೊಂಡಿದ್ದರಿಂದ ಘೋರ ಅಪರಾಧಕ್ಕೆ ಕಾರಣವಾಯಿತು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದನ್ನೂಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ವಿಭು ಭಕ್ರು ನೇಮಕ

ಏನಿದು ಪ್ರಕರಣ?
2003ರ ಡಿಸೆಂಬರ್ 3ರಂದು ವಿವೇಕನಗರ ಠಾಣಾ ವ್ಯಾಪ್ತಿಯ ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ ಇಂಟೆಲ್ ಟೆಕ್ಕಿ ಬಿ.ವಿ ಗಿರೀಶ್ (27) ಕೊಲೆ ನಡೆದಿತ್ತು. ಗಿರೀಶ್‌ ಭಾವಿ ಪತ್ನಿ ಶುಭಾ, ಆಕೆಯ ಪ್ರಿಯತಮ ಅರುಣ್‌ ವರ್ಮಾ, ಸ್ನೇಹಿತರಾದ ವೆಂಕಟೇಶ್‌, ದಿನೇಶ್‌ ಕೃತ್ಯದಲ್ಲಿ ಭಾಗಿಯಾಗಿದ್ದರು. ನಿಶ್ಚಿತಾರ್ಥ ನಡೆದ ನಾಲ್ಕೇ ದಿನದಲ್ಲಿ ಗಿರೀಶ್‌ ಹತ್ಯೆ ನಡೆದಿದ್ದು ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.

ಗಿರೀಶ್ ಹಾಗೂ ಕಾನೂನು ವಿದ್ಯಾರ್ಥಿನಿಯಾಗಿದ್ದ ಶುಭಾ ನಿಶ್ಚಿತಾರ್ಥವು 2003ರ ನವೆಂಬರ್‌ನಲ್ಲಿ ನಡೆದಿತ್ತು. ಅವರ ವಿವಾಹವು ಐದು ತಿಂಗಳಲ್ಲಿ ನಡೆಯಬೇಕಿತ್ತು. ಈ ಮದುವೆ ಶುಭಾಗೆ ಇಷ್ಟ ಇರಲಿಲ್ಲ. ಶುಭಾ ಕಾಲೇಜಿನಲ್ಲಿ ತಮ್ಮ ಜೂನಿಯರ್ ಆಗಿದ್ದ ಅರುಣ್‌ನನ್ನು ಪ್ರೀತಿಸುತ್ತಿದ್ದಳು. ಈ ಕಾರಣಕ್ಕೆ ಶುಭಾ ಮತ್ತು ಅರುಣ್‌ ಸಹಚರರ ಜತೆಗೂಡಿ ಕೊಲೆ ಮಾಡಿದ್ದಾರೆಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ 17 ನೇ ತ್ವರಿತ ನ್ಯಾಯಾಲಯ ಪ್ರಮುಖ ಆರೋಪಿ ಶುಭಾ ಹಾಗೂ ಮೂವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ಪ್ರಕಟಿಸಿತ್ತು. ಈ ಆದೇಶವನ್ನು ಶುಭಾ ಮತ್ತು ಇತರರು ಹೈಕೋರ್ಟ್‌ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

TAGGED:high courtSupreme CourtTechie Girishಕ್ಷಮಾದಾನಟೆಕ್ಕಿ ಗಿರೀಶ್‌ಬೆಂಗಳೂರುಶುಭಾ ಶಂಕರ್‌
Share This Article
FacebookWhatsappWhatsappTelegram

Cinema news

TRISHA
ತಮಿಳುನಾಡು ರಾಜಕೀಯಕ್ಕೆ ತ್ರಿಷಾ ಎಂಟ್ರಿ? – ವಿಜಯ್ ಗೆದ್ದ ಕ್ಷೇತ್ರದಲ್ಲೇ ಸ್ಪರ್ಧಿಸ್ತಾರಾ ಗೆಳತಿ?
CinemaLatestNationalTop Stories
Trisha Krishnan
ಬರ್ತ್‌ಡೇ ದಿನ ಕ್ಲಾಸಿ ಕುರ್ತಾದಲ್ಲಿ ತ್ರಿಷಾ ಮಿಂಚು – ನಟಿ ಧರಿಸಿದ್ದ ಐವರಿ ಸೆಟ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರ!
CinemaFashionLatestNationalSouth cinemaTop Stories
Sara Govindu
ಜೈಲಿಗೆ ಹೋದ್ರೂ ಚಿಂತೆ ಇಲ್ಲ, ಅಣ್ಣಾವ್ರ ವಿಚಾರದಲ್ಲಿ ರಾಜಿ ಆಗಿಲ್ಲ – ನಟ ಚೇತನ್ ವಿರುದ್ಧ ಸಾ.ರಾ ಗೋವಿಂದು ಕಿಡಿ
Bengaluru CityCinemaDistrictsKarnatakaLatestSandalwoodTop Stories
TVK vijay and shivarajkumar
ಟಿವಿಕೆ ಅಂದ್ರೆ Try Vijay as King ಅಂದಿದ್ದೆ, ಇಂದು ನಿಜವಾಗಿಯೂ ರಾಜನಂತೆ ನಿಂತಿದ್ದೀರಿ – ನಟ ವಿಜಯ್‌ಗೆ ಶಿವಣ್ಣ ವಿಶ್
CinemaLatestNationalTop Stories

You Might Also Like

Brazil Small Plane Crash
Latest

Brazil | ವಸತಿ ಕಟ್ಟಡಕ್ಕೆ ಡಿಕ್ಕಿ ಹೊಡೆದು ವಿಮಾನ ಪತನ – ಪೈಲಟ್ ಸೇರಿ ಮೂವರು ಸಾವು

Public TV
ByPublic TV
25 minutes ago
HD Kumaraswamy
Districts

ರಾಜ್ಯದಲ್ಲಿ ಜನಪರವಾದ ಮೈತ್ರಿ ಸರ್ಕಾರ ಅಧಿಕಾರಕ್ಕೆ ತನ್ನಿ: ಹೆಚ್‌ಡಿಕೆ

Public TV
ByPublic TV
26 minutes ago
Zameer Ahmed Home Theft
Bengaluru City

ಸಚಿವ ಜಮೀರ್ ಮನೆಯಲ್ಲಿ 1.20 ಕೆ.ಜಿ ಚಿನ್ನಾಭರಣ ಕಳ್ಳತನ – ಇಬ್ಬರು ಅರೆಸ್ಟ್

Public TV
ByPublic TV
1 hour ago
chamarajanagara accident
Chamarajanagar

ಸೈಕಲ್‌ಗೆ ಟೆಂಪೋ ಡಿಕ್ಕಿ- 11 ವರ್ಷದ ಬಾಲಕ ಸ್ಥಳದಲ್ಲೇ ಸಾವು

Public TV
ByPublic TV
2 hours ago
Mamata Banerjee Himanta Sarma
Latest

ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ರೆ ವಜಾಗೊಳಿಸಿ: ಹಿಮಂತ ಶರ್ಮಾ ಕಿಡಿ

Public TV
ByPublic TV
2 hours ago
Vijay
Latest

ತಮಿಳುನಾಡು ಗೆದ್ದ ಟಿವಿಕೆಗೆ ವಿಶ್‌ ಮಾಡಿದ ಮೋದಿ, ರಾಹುಲ್‌ ಗಾಂಧಿಗೆ ಧನ್ಯವಾದ ತಿಳಿಸಿದ ವಿಜಯ್‌

Public TV
ByPublic TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?