Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರೇಪ್ ಖಂಡಿಸಿ ಪ್ರತಿಭಟಿಸಿದ್ದಕ್ಕೆ ಮಹಿಳೆಯರ ತಲೆ ಬೋಳಿಸಿ ಮೆರವಣಿಗೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ರೇಪ್ ಖಂಡಿಸಿ ಪ್ರತಿಭಟಿಸಿದ್ದಕ್ಕೆ ಮಹಿಳೆಯರ ತಲೆ ಬೋಳಿಸಿ ಮೆರವಣಿಗೆ

Crime

ರೇಪ್ ಖಂಡಿಸಿ ಪ್ರತಿಭಟಿಸಿದ್ದಕ್ಕೆ ಮಹಿಳೆಯರ ತಲೆ ಬೋಳಿಸಿ ಮೆರವಣಿಗೆ

Public TV
Last updated: June 28, 2019 6:54 pm
Public TV
Share
1 Min Read
justice
SHARE

ಪಾಟ್ನಾ: ವಾರ್ಡ್ ಕೌನ್ಸಿಲರ್ ಅತ್ಯಾಚಾರಕ್ಕೆ ಯತ್ನಿಸಿ, ದೈಹಿಕ ಹಲ್ಲೆ ಮಾಡಿದ್ದಾನೆ. ಇದನ್ನು ಖಂಡಿಸಿ ಪ್ರತಿಭಟಿಸಿದ್ದಕ್ಕೆ ಇಬ್ಬರು ಮಹಿಳೆಯರ ತಲೆ ಬೋಳಿಸಿ ಮೆರವಣಿಗೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ಬಿಹಾರದ ವೈಶಾಲಿ ಗ್ರಾಮದಲ್ಲಿ ನಡೆದಿದ್ದು, ವಾರ್ಡ್ ಕೌನ್ಸಿಲರ್ ಮೊಹಮ್ಮದ್ ಖುರ್ಷಿದ್ ಅತ್ಯಾಚಾರ ಎಸಗಿರುವುದನ್ನು ಖಂಡಿಸಿ, 48 ವರ್ಷದ ಮಹಿಳೆ ಹಾಗೂ ಹೊಸದಾಗಿ ಮದುವೆಯಾಗಿದ್ದ 19 ವರ್ಷದ ಮಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಮೊಹಮ್ಮದ್ ಹಾಗೂ ಆತನ ಸಹಚರರು ಇಬ್ಬರೂ ಮಹಿಳೆಯ ತಲೆ ಬೋಳಿಸಿ ಊರು ತುಂಬಾ ಮೆರವಣಿಗೆ ಮಾಡಿ ಅವಮಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಾರ್ಡ್ ಕೌನ್ಸಿಲರ್, ಕ್ಷೌರಿಕ ಹಾಗೂ ಇತರ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Bihar: Heads of a mother & daughter tonsured allegedly for resisting molestation in Bhagvanpur, Vaishali. SHO says,"Some men entered victims' home & tried to molest the daughter, when victim resisted, a ward member Khurshid called a barber & shaved their heads. 2 people arrested" pic.twitter.com/uuWhGEr35n

— ANI (@ANI) June 27, 2019

ಭಗವಾನ್‍ಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಸಂಜಯ್ ಕುಮಾರ್ ಅವರು ಘಟನೆ ಕುರಿತು ಖಚಿತ ಪಡಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. ಆರು ಜನ ಸಂತ್ರಸ್ತರ ಮನೆಗೆ ನುಗ್ಗಿ ಮಗಳನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ. ಈ ವೇಳೆ ತಾಯಿ ಮಗಳನ್ನು ರಕ್ಷಿಸಲು ಯತ್ನಿಸಿದ್ದು, ಆರೋಪಿಗಳು ತಾಯಿ, ಮಗಳು ಇಬ್ಬರ ಮೇಲೂ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

justice 2

ಆರೋಪಿಗಳಲ್ಲಿ ಒಬ್ಬ ಕೋಲಿನಿಂದ ಇಬ್ಬರು ಮಹಿಳೆಯರಿಗೆ ಹೊಡೆದು, ಮನೆಯಿಂದ ಹೊರಗಡೆ ಎಳೆದುಕೊಂಡು ಬಂದು ಪಂಚಾಯಿತಿಗೆ ಕರೆ ತಂದಿದ್ದಾನೆ. ನಂತರ ವಾರ್ಡ್ ಕೌನ್ಸಿಲರ್ ಖುರ್ಷಿದ್ ಕ್ಷೌರಿಕನನ್ನು ಕರೆದು ಮಹಿಳೆಯರ ತಲೆ ಬೋಳಿಸಿ, ಹಳ್ಳಿಯ ತುಂಬ ಮೆರವಣಿಗೆ ಮಾಡಿಸುವಂತೆ ಆದೇಶಿಸಿದ್ದು, ಮಹಿಳೆಯರನ್ನು ಹಳ್ಳಿ ಪೂರ್ತಿ ಮೆರವಣಿಗೆ ಮಾಡಿಸಲಾಗಿದೆ. ಸಂಜೆ 6.30ರ ವೇಳೆಗೆ ಸುಮಾರು ಆರು ಜನ ಶಸ್ತ್ರ ಸಜ್ಜಿತರು ನಮ್ಮ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದರು. ನನ್ನ ತಾಯಿ ನನ್ನ ಕಾಪಾಡಲು ಯತ್ನಿಸಿದಾಗ ಇಬ್ಬರನ್ನೂ ಹೊಡೆಯಲು ಪ್ರಾರಂಭಿಸಿದರು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ.

ಇವರಿಬ್ಬರು ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಖುರ್ಷಿದ್ ಆರೋಪಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸೆಕ್ಷನ್ 376(ಅತ್ಯಾಚಾರ), 511(ಅತ್ಯಾಚಾರಕ್ಕೆ ಯತ್ನ) ಅಡಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

TAGGED:BiharpolicePublic TVrapeWard Councilorwomanಅತ್ಯಾಚಾರಪಬ್ಲಿಕ್ ಟಿವಿಪೊಲೀಸ್ಬಿಹಾರಮಹಿಳೆವಾರ್ಡ್ ಕೌನ್ಸಿಲರ್
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Public TV Vidhyapeeta
Bengaluru City

ಪಬ್ಲಿಕ್ ಟಿವಿ ‘ವಿದ್ಯಾಪೀಠʼದಲ್ಲಿ ಪಿಯುಸಿ 90% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆ

Public TV
By Public TV
3 minutes ago
nicolas maduro
Latest

ಮಡುರೊ ಬಂಧನಕ್ಕೆ ಮುನ್ನ ಪಾಲಿಮಾರ್ಕೆಟ್‌ನಲ್ಲಿ ಬೆಟ್ಟಿಂಗ್‌ – ಕೋಟಿ ಕೋಟಿ ದೋಚಿದ್ದ ಅಮೆರಿಕದ ಸೈನಿಕ ಅರೆಸ್ಟ್‌

Public TV
By Public TV
11 minutes ago
BJP MLA Suresh Gowda
Districts

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತೆ: ಸುರೇಶ್‌ ಗೌಡ ಭವಿಷ್ಯ

Public TV
By Public TV
2 hours ago
CET Exam Janiwara
Bengaluru City

CET Exam | ಜನಿವಾರ ತೆಗೆಸಿದ ಬೆಂಗಳೂರು ಕಾಲೇಜ್‌ – ಪೋಷಕರಿಂದ ದೂರು ದಾಖಲು

Public TV
By Public TV
2 hours ago
Amit Shah 3
Latest

West Bengal Election| 152ರ ಪೈಕಿ 110ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು -ಬಿಜೆಪಿಗೆ ಅಧಿಕಾರ: ಅಮಿತ್‌ ಶಾ ವಿಶ್ವಾಸ

Public TV
By Public TV
3 hours ago
Amit Shah 2
Latest

ಕ್ಷಮಿಸಿ, ಇನ್ನು 10 ನಿಮಿಷಗಳಲ್ಲಿ ತಲುಪುತ್ತೇನೆ: ಅಭಿಮಾನಿಯ ಮನವಿಗೆ ಅಮಿತ್‌ ಶಾ ಪ್ರತಿಕ್ರಿಯೆ

Public TV
By Public TV
3 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?