CrimeLatestMain PostNational

ಐಐಟಿ ಕ್ಯಾಂಪಸ್‌ಗಳಲ್ಲಿ 2 ದಿನದಲ್ಲಿ 2ನೇ ಆತ್ಮಹತ್ಯೆ

ನವದೆಹಲಿ: ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಕ್ಯಾಂಪಸ್‌ಗಳಲ್ಲಿ ಇತ್ತೀಚೆಗೆ ಆತ್ಮಹತ್ಯೆಯ ಘಟನೆಗಳು ಬೆಚ್ಚಿ ಬೀಳಿಸುವಂತೆ ಮಾಡುತ್ತಿವೆ. ಪ್ರತಿಭಾವಂತರ ಮನಸ್ಸನ್ನು ಆಕರ್ಷಿಸುವ ಪ್ರಮುಖ ಎಂಜಿನಿಯರ್ ಸಂಸ್ಥೆಯಾಗಿರುವ ಐಐಟಿಯಲ್ಲಿ ಇದೀಗ ಹೈದರಾಬಾದ್ ಹಾಗೂ ಕಾನ್ಪುರದ ಕ್ಯಾಂಪಸ್‌ಗಳಲ್ಲಿ ಕೇವಲ 2 ದಿನಗಳಲ್ಲಿ 2 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.

ಇಂದು ಬೆಳಗ್ಗೆ ಹೈದರಾಬಾದ್‌ನ ಐಐಟಿ ಕಾಲೇಜು ವಿದ್ಯಾರ್ಥಿಯೊಬ್ಬ ಕ್ಯಾಂಪಸ್ ಬಳಿಕ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ರಾಜಸ್ಥಾನದ ಜೋಧಪುರದ ವಿದ್ಯಾರ್ಥಿ ಮೇಘ್ ಕಪೂರ್ ಐಐಟಿಯಲ್ಲಿ ಬಿಟೆಕ್ ಮುಗಿಸಿದ್ದ ಎನ್ನಲಾಗಿದೆ. ಇದನ್ನೂ ಓದಿ: ಹಿಜಬ್ ಪ್ರಕರಣ: ಶಾಲಾ ವಿದ್ಯಾರ್ಥಿಗಳನ್ನು ಹೈಕೋರ್ಟ್ ಕೈದಿಗಳಿಗೆ ಹೋಲಿಸಿದೆ – ಸುಪ್ರೀಂಕೋರ್ಟ್‌ನಲ್ಲಿ 2 ಗಂಟೆ ಮಹತ್ವದ ವಿಚಾರಣೆ

 

ನಿನ್ನೆಯೂ ಕಾನ್ಪುರದ ಐಐಟಿಯಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರಶಾಂತ್ ಸಿಂಗ್ ತನ್ನ ಹಾಸ್ಟೆಲ್ ಕೋಣೆಯಲ್ಲಿ ಬಾಗಿಲಿಗೆ ಚಿಲಕ ಹಾಕಿದ್ದ. ನಿನ್ನೆ ಸಂಜೆ ಆತ ನನ್ನ ಕೋಣೆಯ ಬಾಗಿಲು ತೆರೆಯದೇ ಇದ್ದಾಗ ಕ್ಯಾಂಪಸ್ ಸೆಕ್ಯುರಿಟಿ ಸ್ಥಳಕ್ಕೆ ಬಂದು, ಕೋಣೆಯ ಬಾಗಿಲು ಒಡೆದಿದ್ದಾರೆ. ಈ ವೇಳೆ ಆತ ಶವವಾಗಿ ಪತ್ತೆಯಾಗಿದ್ದಾನೆ.

ಇದಕ್ಕೂ ಮುನ್ನ ಆಗಸ್ಟ್ 31ರಂದು 2ನೇ ವರ್ಷದ ಎಂಟೆಕ್ ವಿದ್ಯಾರ್ಥಿ ರಾಹುಲ್ ಬಿಂಗುಮಲ್ಲ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಬಳಿಕ ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ಐಐಟಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಉತ್ತಮ ಅಂಕ ಸಿಗದೇ ಹೋಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ದೇಶದ ಶೇ.80 ಸರ್ಕಾರಿ ಶಾಲೆಗಳು ಕಸದ ರಾಶಿಗಿಂತಲೂ ಕೆಟ್ಟದಾಗಿವೆ: ಕೇಜ್ರಿವಾಲ್

ಇಂದು ಹೈದರಾಬಾದ್‌ನಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Live Tv

Leave a Reply

Your email address will not be published.

Back to top button