ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ವಿಜಯಪುರದಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 32-23
ಮಂಗಳೂರು: 32-26
ಶಿವಮೊಗ್ಗ: 34-24
ಬೆಳಗಾವಿ: 36-24
ಮೈಸೂರು: 33-23

ಮಂಡ್ಯ: 33-24
ಮಡಿಕೇರಿ: 29-22
ರಾಮನಗರ: 34-24
ಹಾಸನ: 33-22
ಚಾಮರಾಜನಗರ: 32-24
ಚಿಕ್ಕಬಳ್ಳಾಪುರ: 33-23

ಕೋಲಾರ: 33-23
ತುಮಕೂರು: 34-24
ಉಡುಪಿ: 33-27
ಕಾರವಾರ: 32-29
ಚಿಕ್ಕಮಗಳೂರು: 30-21
ದಾವಣಗೆರೆ: 36-25

ಹುಬ್ಬಳ್ಳಿ: 36-24
ಚಿತ್ರದುರ್ಗ: 35-24
ಹಾವೇರಿ: 35-24
ಬಳ್ಳಾರಿ: 38-28
ಗದಗ: 34-24
ಕೊಪ್ಪಳ: 37-26
ರಾಯಚೂರು: 39-29
ಯಾದಗಿರಿ: 40-29
ವಿಜಯಪುರ: 41-27
ಕಲಬುರಗಿ: 40-29
ಬಾಗಲಕೋಟೆ: 38-27

