ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಗ್ನಿಪಥ್ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆಯೂ 10 ಸಾವಿರ ಮಹಿಳಾ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ನಿನ್ನೆ ಸಂಜೆಯವರೆಗೆ ಸುಮಾರು 10,000 ಮಹಿಳಾ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಹಸು ಹಿಂದೂಗಳ ಪವಿತ್ರ ಪ್ರಾಣಿ, ಬಕ್ರೀದ್ ಹಬ್ಬಕ್ಕಾಗಿ ಬಲಿ ಕೊಡೋದು ಬೇಡ – ಮುಸ್ಲಿಂ ಸಂಘಟನೆ ಮನವಿ
Advertisement
Advertisement
ಈಗಾಗಲೇ ಮೊದಲ ಹಂತದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದೆ. 2ನೇ ಹಂತದಲ್ಲಿ ಅರ್ಜಿಗಳನ್ನು ಸಲ್ಲಿಸಲು ಜುಲೈ 15 ರಿಂದ 30ರ ವರೆಗೆ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಅಗ್ನಿಪಥ್ ಯೋಜನೆಯಲ್ಲಿ 3 ಸಾವಿರ ಮಹಿಳೆಯರು ಸೇರಲು ಅವಕಾಶವಿದ್ದು, ಇನ್ನೂ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿಲ್ಲ ಎಂದು ಹೇಳಲಾಗಿದೆ. ಇದನ್ನೂ ಓದಿ: ಆಪರೇಷನ್ ದಕ್ಷಿಣ್ ಮೂಲಕ ಪ್ರಜಾಪ್ರಭುತ್ವ ಮುಕ್ತ ಭಾರತ ನಿರ್ಮಾಣವೇ ಬಿಜೆಪಿ ಗುರಿ: HDK
Advertisement
Advertisement
1990ರಿಂದಲೂ ಪ್ರಬಲ ಸಶಸ್ತ್ರ ಪಡೆಗಳಿಗೆ 14 ಲಕ್ಷ ಮಹಿಳೆಯರನ್ನು ಸೇರ್ಪಡೆ ಮಾಡಲಾಗಿದೆ. 20019-20ರಲ್ಲಿ ಈ ಬೆಳವಣಿಗೆ ಕೊಂಚ ಬದಲಾಗಿದ್ದು, ಅಧಿಕಾರಿ ಸ್ಥಾನಗಳನ್ನೂ ಅವರು ಅಲಂಕರಿಸಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.